ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಮುಸ್ಸಂಜೆ ಮಾತು' ಕಾಮತ್‌ಗೆ ಮ್ಯೂಸಿಕ್ ಅಕಾಡೆಮಿ ಗರಿ (Bangalore Music Academy | Raghavendra Kamath | Mussanje Maatu | Sudeep)
ಸುದ್ದಿ/ಗಾಸಿಪ್
Bookmark and Share Feedback Print
 
'ಬೆಂಗಳೂರು ಮ್ಯೂಸಿಕ್ ಅಕಾಡೆಮಿ' ಪ್ರಶಸ್ತಿ ಈ ಬಾರಿ ಗೀತ ರಚನೆಕಾರ ರಾಘವೇಂದ್ರ ಕಾಮತ್ ಅವರಿಗೆ ಒಲಿದಿದೆ. 'ಕಿಚ್ಚ' ಸುದೀಪ್ ಅಭಿನಯಿಸಿ, ನಿರ್ದೇಶಿಸಿರುವ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ 'ಮುಂಜಾನೆ ಮಂಜಲ್ಲಿ ಮುಸ್ಸಂಜೆ ತಂಪಲ್ಲಿ...' ಹಾಡಿನ ಸಾಹಿತ್ಯಕ್ಕೆ ಅವರು ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.

'ನಿನ್ನ ಪೂಜೆಗೆ ಬಂದ ಮಹದೇಶ್ವರ' ಖ್ಯಾತಿಯ ರಘು ದೀಕ್ಷಿತ್ ಈ ಚಿತ್ರದ ಸಂಗೀತ ನಿರ್ದೇಶಕರು.

'ಗಾಂಧಿ ಸ್ಟೈಲ್' ಚಿತ್ರದ ಮೂಲಕ ಗೀತೆ ರಚನೆಕಾರರಾಗಿ ಗುರುತಿಸಿಕೊಂಡ ರಾಘವೇಂದ್ರ ಕಾಮತ್, ನಂತರ 'ಕಾರಂಜಿ', 'ಒಲವೇ ವಿಸ್ಮಯ', 'ಮೃಗ ನಯನಿ', 'ಕಥೆಯಲ್ಲ ಜೀವನ', 'ಮುರಳಿ ಮೀಟ್ಸ್ ಮೀರಾ', 'ಕೋಟೆ' ಹಾಗೂ 'ಕಳ್ಳ ಮಂಜ' ಚಿತ್ರಗಳು ಸೇರಿದಂತೆ ಈವರೆಗೆ ಸುಮಾರು 20ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ.

'ಬೆಂಗಳೂರು ಮ್ಯೂಸಿಕ್ ಅಕಾಡೆಮಿ' ಆಯೋಜಿಸಿದ್ದ ಈ ಪ್ರಶಸ್ತಿಗೆ ಭಾರೀ ಸ್ಪರ್ಧೆ ಏರ್ಪಟ್ಟಿತ್ತು. ಸುಮಾರು 450 ಚಿತ್ರಗೀತೆಗಳು ಸ್ಪರ್ಧೆಯಲ್ಲಿದ್ದವು. ಅವುಗಳಲ್ಲಿ ಅಂತಿಮವಾಗಿ ಐದು ಚಿತ್ರಗೀತೆಗಳನ್ನು ಮಾತ್ರ ಪಟ್ಟಿ ಮಾಡಲಾಗಿತ್ತು. ಸಂಗೀತ ಪ್ರೇಮಿಗಳು ನೀಡಿದ ಮತಗಳ ಮೂಲಕ ಐದು ಹಾಡುಗಳ ಪೈಕಿ ಬೆಸ್ಟ್ ಆಫ್ ತ್ರೀ (ಮೂರು) ಹಾಡುಗಳನ್ನು ಆಯ್ಕೆ ಮಾಡಲಾಗಿತ್ತು.

ಬೆಸ್ಟ್ ಆಫ್ ತ್ರೀಯಲ್ಲಿ ಪ್ರಕಾಶ್ ರೈ ನಿರ್ದೇಶನದ 'ನಾನು ನನ್ನ ಕನಸು' ಚಿತ್ರದ ಸಂಗೀತ ನಿರ್ದೇಶಕ ಹಂಸಲೇಖ ಅವರ ಒಂದು ಗೀತೆ, ಪ್ರಕಾಶ್ ನಿರ್ದೇಶನದ 'ಗೋಕುಲ' ಚಿತ್ರದ ಜಯಂತ್ ಕಾಯ್ಕಿಣಿ ಬರೆದ 'ಆರಾಮಾಗಿ ಇದ್ದೆ ನಾನು...' ಹಾಡುಗಳು ರಾಘವೇಂದ್ರ ಕಾಮತ್ ಅವರಿಗೆ ತೀವ್ರ ಪೈಪೋಟಿ ನೀಡಿದ್ದವು.ಆದರೆ 'ಮುಂಜಾನೆ ಮಂಜಲ್ಲಿ...' ಗೀತೆಗೆ ಹೆಚ್ಚು ಮತಗಳು ಬಂದಿದ್ದರಿಂದ ಪ್ರಶಸ್ತಿ ಕಾಮತ್ ಮುಡಿಗೇರಿದೆ.

ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಮನೋಮೂರ್ತಿ ಅವರಿಂದ ರಾಘವೇಂದ್ರ ಕಾಮತ್ ಈ ಪ್ರಶಸ್ತಿ ಪಡೆದಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬೆಂಗಳೂರು ಮ್ಯೂಸಿಕ್ ಅಕಾಡೆಮಿ, ರಾಘವೇಂದ್ರ ಕಾಮತ್, ಮುಸ್ಸಂಜೆ ಮಾತು, ಸುದೀಪ್