ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಒಲವೇ ಮಂದಾರ'ದಲ್ಲಿ ಸಂಗೀತ ದಿಗ್ಗಜರ ಸಮಾಗಮ (Hamsalekha | Deva | Olave Mandara | Jayateertha)
ಸುದ್ದಿ/ಗಾಸಿಪ್
Bookmark and Share Feedback Print
 
ದಕ್ಷಿಣ ಭಾರತದ ಹೆಸರಾಂತ ಸಂಗೀತ ನಿರ್ದೇಶಕ ದೇವಾ ಅವರು ಸಂಗೀತ ನೀಡಿರುವ 'ಒಲವೇ ಮಂದಾರ' ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಹಂಸಲೇಖ ಅವರು ಭಾಗವಹಿಸಿದ್ದರು. ಇದೊಂದು ಸಂಗೀತ ನಿರ್ದೇಶಕರ ಸಮಾಗಮ ಎನ್ನುವಂತಿತ್ತು.
MOKSHA

ಈ ಚಿತ್ರದ ನಿರ್ದೇಶಕ, ತನ್ನ ಶಿಷ್ಯ ಜಯತೀರ್ಥರನ್ನು ಹರಸಲು ಹಂಸಲೇಖ ಬಂದಿದ್ದರು. ಇಬ್ಬರು ಸಂಗೀತ ನಿರ್ದೇಶಕರನ್ನು ಒಂದೇ ವೇದಿಕೆಯಲ್ಲಿ ಕಂಡು ನೆರೆದಿದ್ದ ಸಿನಿಮಾ ಮಂದಿಗೆ ಪುಳಕವಾಗಿತ್ತು. ಈ ಇಬ್ಬರು ಹಿರಿಯ ಸಂಗೀತಗಾರರನ್ನು ನಿರ್ಮಾಪಕ ಹಾಗೂ ಬಿಬಿಎಂಪಿ ಸದಸ್ಯ ಬಿ. ಗೋವಿಂದರಾಜು ಸನ್ಮಾನಿಸಿದರು.

ತಮ್ಮ ಶಿಷ್ಯನ ಬಗ್ಗೆ ಎರಡು ಮಾತಾಡಿದ ಹಂಸಲೇಖ ಕಣಗಾಲ್ ಪ್ರಭಾಕರ ಶಾಸ್ತ್ತ್ರಿ ಅವರ ಸುಮಧುರ ಗೀತೆ 'ಒಲವಿನ ಪೂಜೆಗೆ ಒಲವೇ ಮಂದಾರ' ಹಾಡಿನ ಸಾಲನ್ನು ಟೈಟಲ್ ಆಗಿ ಬಳಸಿಕೊಂಡು ಚಿತ್ರ ನಿರ್ಮಿಸುತ್ತಿರುವುದು ಸಂತಸ ತಂದಿದೆ. ಈ ಚಿತ್ರವೂ ಸಹ ಉತ್ತಮವಾಗಿ ಮೂಡಿಬರುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ನಿರ್ದೇಶಕ ಜಯತೀರ್ಥ ರಂಗಭೂಮಿಯ ಸ್ನೇಹಿತ. ಬಹುತೇಕ ಚಟುವಟಿಕೆಗಳಲ್ಲಿ ನನ್ನ ಜೊತೆ ಇದ್ದಾನೆ. ಆತನ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹರಸಿದರು.

ಮೂರು ವರ್ಷಗಳ ನಂತರ ಕನ್ನಡ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದೇನೆ ಜಯತೀರ್ಥ ಒಳ್ಳೆ ಪ್ರಯತ್ನ ಮಾಡಿದ್ದಾರೆ. 'ಅಮೃತವರ್ಷಿಣಿ' ನಂತರ 'ಒಲವೇ ಮಂದಾರ' ಚಿತ್ರದ ಹಾಡುಗಳು ಯಶಸ್ವಿಯಾಗಲಿವೆ ಎನ್ನುವ ಆಶಯ ವ್ಯಕ್ತಪಡಿಸಿದರು ಸಂಗೀತ ನಿರ್ದೇಶಕ ದೇವಾ.

ತಮ್ಮ ಪುತ್ರ ಶ್ರೀಕಾಂತ್‌ಗಾಗಿ ಚಿತ್ರ ಮಾಡುತ್ತಿರುವುದಾಗಿ ನಿರ್ಮಾಪಕ ಬಿ. ಗೋವಿಂದರಾಜು ತಿಳಿಸಿದರು. ಮೊದಲ ಚಿತ್ರ ಅದ್ದೂರಿಯಾಗಿ ಬರಲಿ ಎಂದು ಒಂಬತ್ತು ರಾಜ್ಯಗಳು ಹಾಗೂ ಏಳು ನದಿಗಳ ತಪ್ಪಲಿನಲ್ಲಿ ಚಿತ್ರೀಕರಣ ಮಾಡಿದ್ದೇವೆ.

ಎರಡು ಸತ್ಯಕಥೆಗಳನ್ನು ಆಧರಿಸಿ ಚಿತ್ರ ನಿರ್ಮಿಸುತ್ತಿದ್ದೇವೆ. ಅಸ್ಸಾಂನಲ್ಲಿ ಚಿತ್ರೀಕರಣಕ್ಕೆ ಅಡ್ಡಿ ಪಡಿಸಿದ್ದರಿಂದ ಮೂರು ತಿಂಗಳು ತಡವಾಯಿತು. ಜೊತೆಗೆ ಬಿಹಾರದ ಗಯಾದಲ್ಲಿಯೂ ಶೂಟಿಂಗ್‌ಗೆ ತೊಂದರೆಯಾಯಿತು. ಎಲ್ಲವನ್ನೂ ದಾಟಿ ಚಿತ್ರ ಮುಗಿಸಿದ್ದೇವೆ. ಚಿತ್ರ ಬಿಡುಗಡೆಗೆ ಸಿದ್ಧವಿದೆ ಎಂದು ನಿರ್ದೇಶಕ ಜಯತೀರ್ಥ ಹೆಮ್ಮೆಯಿಂದ ಹೇಳಿದರು.

ಚಿತ್ರದಲ್ಲಿ ಶ್ರೀಕಾಂತ್ ನಾಯಕ, ಆಕಾಂಕ್ಷಾ ನಾಯಕಿ. ಉಳಿದ ತಾರಾಗಣದಲ್ಲಿ ರಂಗಾಯಣ ರಘು, ವೀಣಾ ಸುಂದರ್ ಮುಂತಾದವರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಂಸಲೇಖ, ದೇವಾ, ಒಲವೇ ಮಂದಾರ, ಜಯತೀರ್ಥ