ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿರ್ದೇಶಕ ರಮೇಶ್‌ಗೆ ಡೈಸಿ ಸಹಾಯಕಿ; ಇದು ಮಾಯೆ! (Maya | Ramesh Arvind | A. Ganesh | Daisy Bopanna)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ರಿಯಾಲಿಟಿ ಶೋ ಆಧರಿಸಿ ಎ. ಗಣೇಶ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್‌ರದ್ದು ನಿರ್ದೇಶಕನ ಪಾತ್ರ. ಅದಕ್ಕಿಂತಲೂ ಮಹತ್ವದ ವಿಚಾರವೆಂದರೆ ಇದರೊಂದಿಗೆ ಡೈಸಿ ಬೋಪಣ್ಣ ಚಿತ್ರರಂಗಕ್ಕೆ ಮರಳಿರುವುದು.

ಚಿತ್ರದಲ್ಲಿ ಹಾರರ್, ಸಸ್ಪೆನ್ಸ್, ಕಾಮಿಡಿ ಹಾಗೂ ಸೆಂಟಿಮೆಂಟ್ ಎಲ್ಲವೂ ಇದೆ ಎನ್ನುತ್ತಾರೆ ಈ ಚಿತ್ರದ ನಿರ್ದೇಶಕ ಎ. ಜಗದೀಶ್. ಚಿತ್ರದ ಹೆಸರು 'ಮಾಯಾ'.

ಕಳೆದ ವಾರವಷ್ಟೇ ಚಿತ್ರದ ಮುಹೂರ್ತ ನಡೆದಿದೆ. ಈ ಸಂದರ್ಭದಲ್ಲಿ ಮಾತಿಗಿಳಿದ ರಮೇಶ್, ಸಿನಿಮಾದೊಳಗಿನ ಸಿನಿಮಾದ ಕಥೆಯ ಎಳೆಯನ್ನು ಬಿಚ್ಚಿಟ್ಟರು. ಚಿತ್ರದಲ್ಲಿ ನಿರ್ದೇಶಕನ ಪಾತ್ರ ಚೆನ್ನಾಗಿದೆ. ಹೊಸ ನಿರ್ದೇಶಕರು, ನಿರ್ಮಾಪಕರು ಬಂದರೆ ಅವರಲ್ಲಿ ಹೊಸತನವಿರಲಿದೆ ಎಂದರು.

ನಿರ್ದೇಶಕನ ಪಾತ್ರದಲ್ಲಿ ರಮೇಶ್, ನಾಯಕನ ಪಾತ್ರದಲ್ಲಿ ರವಿಶಂಕರ್, ನಾಯಕಿ ಪಾತ್ರದಲ್ಲಿ ಮುಂಬೈ ಬೆಡಗಿ ಫರಾಖಾನ್ ನಟಿಸುತ್ತಿದ್ದಾರೆ. ಡೈಸಿ ಬೋಪಣ್ಣ ಮತ್ತು ಪ್ರಿಯಾಂಕಾ ಅವರು ರಮೇಶ್ ಅವರ ಸಹಾಯಕರ ಪಾತ್ರ ನಿರ್ವಹಿಸುತ್ತಿದ್ದಾರೆ.

ಇಂದಿನ ಸ್ಥಿತಿ-ಗತಿಯನ್ನು ಗಮನದಲ್ಲಿ ಇಟ್ಟುಕೊಂಡು ಕಥೆ ಮಾಡಿದ್ದೇನೆ ಎಂದು ನಿರ್ದೇಶಕ ಜಗದೀಶ್ ಹೇಳಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾಯಾ, ರಮೇಶ್ ಅರವಿಂದ್, ಗಣೇಶ್, ಡೈಸಿ ಬೋಪಣ್ಣ