ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಡಿ.30ರಂದು ವಿಷ್ಣು ನೆನಪು: 'ಸಿಂಹಜ್ಯೋತಿ' ಮೆರವಣಿಗೆ (Vishnuvardhan | Anirudha | Kannada actor | Aptarakshaka)
ಸುದ್ದಿ/ಗಾಸಿಪ್
Bookmark and Share Feedback Print
 
'ಆಪ್ತರಕ್ಷಕ' ಕಣ್ಮರೆಯಾಗಿ ಡಿಸೆಂಬರ್ 30ಕ್ಕೆ ಒಂದು ವರ್ಷ ತುಂಬಲಿದೆ. ಚಿತ್ರಪ್ರೇಮಿಗಳ ನೆಚ್ಚಿನ ಸಾಹಸಸಿಂಹ ಡಾ.ವಿಷ್ಣುವರ್ಧನ್ ಈಗ ಬರೀ ನೆನಪು ಮಾತ್ರ. ಆ ಮಹಾನ್ ಕಲಾವಿದ ನಮ್ಮೊಂದಿಗಿಲ್ಲ ಎನ್ನುವ ಕೊರಗು ಬಿಟ್ಟರೆ, ನಟನೆ ಮಾಸದ ನೆನಪು. ಉಳಿದಂತೆ ಸದಾ 'ಆಪ್ತಮಿತ್ರ'.

ವಿಷ್ಣು ಇಲ್ಲದೆ ಒಂದು ವರ್ಷವನ್ನು ಅವರ ಸವಿನೆನಪುಗಳೊಂದಿಗೆ ಕಳೆದಿರುವ ವಿಷ್ಣು ಅಭಿಮಾನಿ ವರ್ಗ ಇದೀಗ ಅವರ ಸ್ಮರಣೆಗಾಗಿ 'ಅಭಿಮಾನ್ ಸ್ಟುಡಿಯೋ'ದಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಿದೆ.
MOKSHA

ಡಿಸೆಂಬರ್ 30ರಂದು ಬೆಂಗಳೂರಲ್ಲಿ 'ಮೌನ ಮೆರವಣಿಗೆ' ಪಾದಯಾತ್ರೆ ನಡೆಸಲಾಗುತ್ತಿದೆ. ಬಸವಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಅಭಿಮಾನ್ ಸ್ಟುಡಿಯೋವರೆಗೆ ಈ ಮೆರವಣಿಗೆ ಸಾಗಲಿದೆ. ವಿಷ್ಣುವರ್ಧನ್ ಅವರ ಅಭಿಮಾನಿಗಳು, ಚಿತ್ರಪ್ರೇಮಿಗಳು ಹಾಗೂ ಹಲವು ವಿಷ್ಣುವರ್ಧನ್ ಸಂಘಟನೆಗಳ ಪದಾಧಿಕಾರಿಗಳು 'ಸಿಂಹಜ್ಯೋತಿ' ಮೌನಯಾತ್ರೆ ಮಾಡಿ, ವಿಷ್ಣು ಸಮಾಧಿಗೆ ಪುಷ್ಪಾಲಂಕಾರ ಮಾಡಿ, ಪೂಜೆ ಸಲ್ಲಿಸಲಿದ್ದಾರೆ.

ಪ್ರೀತಿಯ ಸಂದೇಶ..
ಅಂದು ಅಭಿಮಾನ್ ಸ್ಟುಡಿಯೋಗೆ ತೆರಳಿ 'ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ...' ಎಂಬ ಸಂದೇಶವುಳ್ಳ ಒಂದು ಸಾವಿರ ಬಲೂನುಗಳನ್ನು ಹಾರಿ ಬಿಡಲಾಗುತ್ತದೆ ಎಂದು ನಟ, ವಿಷ್ಣು ಅಳಿಯ ಅನಿರುದ್ಧ್ ಹೇಳಿದ್ದಾರೆ.

ಮೌನ ಮೆರವಣಿಗೆಯಲ್ಲಿ ಭಾಗವಹಿಸುವ ವಿಷ್ಣುವರ್ಧನ್ ಅವರ ಪ್ರತಿಯೊಬ್ಬ ಅಭಿಮಾನಿಗಳು ವಿಶೇಷವಾಗಿ ಅಂದು ಶ್ವೇತವಸ್ತ್ರ ಧರಿಸಿ ಪಾಲ್ಗೊಳ್ಳಬೇಕು ಎಂದೂ ಅನಿರುದ್ಧ್ ಮನವಿ ಮಾಡಿದ್ದಾರೆ.

ಡಿಸೆಂಬರ್ 30ರಂದು ಬೆಳಗ್ಗೆ ಏಳು ಗಂಟೆಗೆ ಮೌನ ಮೆರವಣಿಗೆ ಪಾದಯಾತ್ರೆ ಆರಂಭವಾಗುತ್ತದೆ. ಕೊನೆಗೆ ಬಲೂನುಗಳನ್ನು ಹಾರಿ ಬಿಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ರೋಟರಿ ಕ್ಲಬ್, ರೆಡ್ ಕ್ರಾಸ್, ಹಾಲಪ್ಪ ಫೌಂಡೇಶನ್, ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ವಿಶ್ವ ಮಹಾ ಸಂಘ ಹಾಗೂ ವಿಭಾ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ರಕ್ತದಾನ, ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಎಚ್ಐವಿ ಪೀಡಿತರಿಗೆ ಉಚಿತ ಓಷಧೋಪಚಾರ ನೀಡುತ್ತಿರುವ 'ಮಿಲನ' ಸಂಸ್ಥೆಗೆ ವಿಷ್ಣು ಅಭಿಮಾನಿಗಳ ಸಂಘದಿಂದ ಅಕ್ಕಿ, ಬೇಳೆ, ರಾಗಿ ಮುಂತಾದುವುಗಳನ್ನು ನೀಡಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಅನಿರುದ್ಧ್, ಕನ್ನಡ ನಟ, ಸಾಹಸಸಿಂಹ