ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಾಕ್‌ಲೈನ್ ಸ್ಟುಡಿಯೋದಲ್ಲಿ ವೀರೇಂದ್ರಬಾಬು 'ಸ್ವಯಂಕೃಷಿ' (Swayamkrushi | Veerendrababu | Tamanna | Umashree)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಶ್ರೀ ದುರ್ಗಾಪರಮೇಶ್ವರಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಎಸ್‌ಕೆ ಗ್ರೂಪ್ಸ್‌ರವರ ನೂತನ ಪ್ರಯತ್ನ 'ಸ್ವಯಂಕೃಷಿ' ಈಗಾಗಲೇ ರಾಜ್ಯದ ಹಲವಾರು ಕಡೆಗಳಲ್ಲಿ ಚಿತ್ರೀಕರಣ ಮುಗಿಸಿ ಒಂದು ಹಂತಕ್ಕೆ ಬಂದಿದೆ.

ಇತ್ತೀಚೆಗೆ ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಬರೆದಿರುವ ಗೀತೆಯೊಂದರ ಚಿತ್ರೀಕರಣ ರಾಕ್‌ಲೈನ್ ಸ್ಟುಡಿಯೋದಲ್ಲಿ ನಡೆಯಿತು. ಮುರಳಿ ನೃತ್ಯ ಸಂಯೋಜಿಸಿದ ಈ ಹಾಡಿನ ಚಿತ್ರೀಕರಣದಲ್ಲಿ, ಮೊದಲ ಬಾರಿಗೆ ಬೆಳ್ಳಿತೆರೆ ಕಾಲಿಟ್ಟಿರುವ ನಾಯಕ ವೀರೇಂದ್ರಬಾಬು, ಜನಾರ್ದನ್, ವಿಜಯ್ ಚೆಂಡೂರು ಹಾಗು ರಷ್ಯನ್ ನರ್ತಕಿಯರು ಹೆಜ್ಜೆ ಹಾಕಿದರು.

ವೀರೇಂದ್ರ ಬಾಬು ಅವರ ಈ ಚಿತ್ರದಲ್ಲಿ ವಿಶೇಷ ಹಾಗೂ ಗಮನಾರ್ಹ ಪಾತ್ರದಲ್ಲಿ ಖ್ಯಾತನಟ ಚರಣ್ ರಾಜ್ ಅಭಿನಯಿಸುತ್ತಿದ್ದಾರೆ. ತಮನ್ನಾ, ಜೀವನ್, ವಿಜಯ್ ಚೆಂಡೂರ್, ಜನಾರ್ದನ್, ಉಮಾಶ್ರೀ, ರಂಗಾಯಣ ರಘು, ಕೃಷ್ಣೇಗೌಡ ಮುಂತಾದವರ ತಾರಾಬಳಗವಿದೆ.

ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ನಾಯಕ ಎಲ್ಲವೂ ವೀರೇಂದ್ರಬಾಬು. ಒಂದು ರೀತಿಯಲ್ಲಿ ವನ್ ಮ್ಯಾನ್ ಶೋ. ಸುಧಾಕರ್ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ಕೆ.ಎಂ. ಇಂದ್ರ ಸಂಭಾಷಣೆ ಈ ಚಿತ್ರಕ್ಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ವಯಂಕೃಷಿ, ವೀರೇಂದ್ರಬಾಬು, ತಮನ್ನಾ, ಉಮಾಶ್ರೀ