ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತಮಿಳು-ತೆಲುಗಲ್ಲೂ ಪ್ರಕಾಶ್ ರೈ ನಿರ್ದೇಶನ ಮಾಡ್ತಾರಂತೆ (Prakash Rai | Kannada | Tamil | Telugu)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಬಹುಭಾಷಾ ನಟ ಪ್ರಕಾಶ್ ರೈ ನಿರ್ಮಾಪಕ ಕಮ್ ನಿರ್ದೇಶಕನಾಗಿ ಚಿತ್ರರಂಗದ ಎಲ್ಲ ಹಂತಗಳನ್ನು ತಮ್ಮ ಛಾಪನ್ನು ಮೂಡಿಸಿರುವುದು ಎಲ್ಲರಿಗೂ ಗೊತ್ತಿದೆ. ಅವರು ನಟಿಸಿ, ನಿರ್ಮಿಸಿದ್ದ ತಮಿಳು ಚಿತ್ರ 'ಅಭಿಯುಂ ನಾನುಂ' ಕನ್ನಡದಲ್ಲಿ ನಿರ್ದೇಶಿಸಿ, ನಿರ್ಮಾಣ ಮಾಡಿ ಯಶಸ್ಸನ್ನೂ ಕಂಡಿದ್ದಾರೆ.

ಈಗ ಮತ್ತೆ ಆಕ್ಷನ್-ಕಟ್ ಹೇಳಲು ಹೊರಟಿದ್ದಾರೆ. ಆದರೆ ಈ ಬಾರಿ ಕನ್ನಡದಲ್ಲಲ್ಲ, ತೆಲುಗು ಹಾಗೂ ತಮಿಳಿನಲ್ಲಿ.

ತಮ್ಮ ಡ್ಯುಯೆಟ್ ಮೂವೀಸ್ ಬ್ಯಾನರ್ ಅಡಿ ತೆಲುಗು ಹಾಗು ತಮಿಳಿನಲ್ಲಿ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದೇನೆ ಎಂದು ತಮ್ಮ ರೈ ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ. ಆದರೆ ಚಿತ್ರದ ಹೆಸರನ್ನಾಗಲೀ ಅಥವಾ ಅದು ಸ್ವಮೇಕಾ-ರೀಮೇಕಾ ಎಂಬುದನ್ನಾಗಲೀ ಅವರು ಬಹಿರಂಗಪಡಿಸಿಲ್ಲ.

ನಿರ್ದೇಶನಕ್ಕಿಳಿದಾಗ ನಟನೆಯನ್ನು ಪಕ್ಕಕ್ಕಿಡುವುದಿಲ್ಲ. ಅದು ನನ್ನ ವೃತ್ತಿ. ನನ್ನ ನಟನೆ ಯಥಾ ರೀತಿಯಲ್ಲಿ ಮುಂದುವರಿಯುತ್ತದೆ ಎನ್ನುವುದು ರೈ ಭರವಸೆ.

ಸದ್ಯದಲ್ಲಿ ಬಾಲಿವುಡ್, ಕಾಲಿವುಡ್, ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ಅನೇಕ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಕನ್ನದಲ್ಲಿ ಬಿ. ಸುರೇಶ್ ನಿರ್ದೇಶನದ 'ಪುಟ್ಟಕ್ಕನ ಹೈವೇ' ಚಿತ್ರದಲ್ಲಿ ಶ್ರುತಿಗೆ ಪತಿಯಾಗಿ ನಟಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಕಾಶ್ ರೈ, ಕನ್ನಡ, ತಮಿಳು, ತೆಲುಗು