ಇತ್ತೀಚೆಗೆ ಬೆಂಗಳೂರಿನ ಹೆಬ್ಬಾಳ ಬಡಾವಣೆಯ ಅಣಬೇಲ ನಿವಾಸದಲ್ಲಿ ಶೂಟಿಂಗ್ ಇಟ್ಟುಕೊಂಡಿದ್ದರು.
'ಕೃಷ್ಣನ್ ಲವ್ ಸ್ಟೌರಿ' ಸಕ್ಸಸ್ ನಂತರ ಗಾಂಧಿನಗರದಲ್ಲಿ ಆ ರಿದಮ್ ಅನ್ನು ಮುಂದುವರಿಸಲು ಚಿತ್ರತಂಡ '...ಮ್ಯಾರೇಜ್ ಸ್ಟೋರಿ'ಯನ್ನು ಶೀಘ್ರದಲ್ಲೇ ಮುಗಿಸಲು ಪ್ರಯತ್ನಿಸುತ್ತಿದೆ.
ಸಾಧ್ಯವಾದರೆ ಡಿಸೆಂಬರಿನಲ್ಲಿ ಚಿತ್ರೀಕರಣದ ಮುಗಿಸಿ, ಸಂಕ್ರಾಂತಿ ವೇಳೆಗೆ ಮೆಜೆಸ್ಟಿಕ್ ಏರಿಯಾದಲ್ಲಿ ಥಿಯೇಟರ್ ಎಂಬ ಛತ್ರದಲ್ಲಿ 'ಕೃಷ್ಣನ್ ಮ್ಯಾರೇಜ್...' (ಬಿಡುಗಡೆ) ಮಾಡಬೇಕೆಂದು ತೀರ್ಮಾನಿಸಿದೆ ಎಂಬ ಸುದ್ದಿಯೂ ಇದೆ.
ಈ ಚಿತ್ರಕ್ಕೆ ಶ್ರೀಧರ್ ಸಂಭ್ರಮ ಸಂಗೀತ ನಿರ್ದೇಶನವಿದೆ. ನಿರ್ದೇಶಕ ನೂತನ್ ಉಮೇಶ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಛಾಯಾಗ್ರಹಣ ಶೇಖರ್ ಚಂದ್ರ, ಶ್ರೀ ಸಂಕಲನ, ರವಿವರ್ಮ ಸಾಹಸವಿದ್ದು ಚಿತ್ರದ ತಾರಾಬಳಗದಲ್ಲಿ ಅಜಯ್ ರಾವ್, ನಿಧಿ ಸುಬ್ಬಯ್ಯ, ಜೈಜಗದೀಶ್, ವಿನಯಾಪ್ರಸಾದ್, ಸಂಗೀತ, ಸುರೇಶ್ ಮಂಗಳೂರು, ಬಾಲರಾಜ್, ಜಯಲಕ್ಷ್ಮೀ, ಭಾರ್ಗವಿ ನಾರಾಯಣ್, ನಾಗೇಂದ್ರ ಶಾ ಮುಂತಾದವರಿದ್ದಾರೆ.