ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರೀಲ್ ಪೊಲೀಸ್‌ ಆದಿತ್ಯನಿಗೆ ರಿಯಲ್ ಎಸಿಪಿಯಿಂದ ಪಾಠ! (Mass | Audithya | Deadly Soma | BB Ashok Kumar)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಗಿ ಅಭಿನಯಿಸುತ್ತಿರುವ 'ಮಾಸ್' ತಯಾರಿಯಲ್ಲಿರುವ ಆದಿತ್ಯನಿಗೆ ಪಾತಕಲೋಕದ ಸಿಂಹಸ್ವಪ್ನ ರಿಯಲ್ ಪೊಲೀಸ್ ಅಧಿಕಾರಿ ಬಿ.ಬಿ. ಅಶೋಕ್ ಕುಮಾರ್ ಪಾಠ ಮಾಡಿದ್ದಾರೆ. ಪೊಲೀಸರೆಂದರೆ ಹೇಗಿರುತ್ತಾರೆ, ಹೇಗಿರಬೇಕೆಂಬುದನ್ನು ಹೇಳಿ ಕೊಟ್ಟಿದ್ದಾರೆ.

ಇದೆಲ್ಲಾ ನಡೆದದ್ದು ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತದ ಸಮಾರಂಭದಲ್ಲಿ. ಪೊಲೀಸ್ ಯೂನಿಫಾರಂ ಹೇಗೆ ಧರಿಸಬೇಕು, ಕ್ಯಾಪ್ ಹಾಕಿಕೊಳ್ಳುವುದು, ಸೆಲ್ಯೂಟ್ ಹೊಡೆಯುವುದು, ಪೊಲೀಸ್ ಅಧಿಕಾರಿಯೆಂದರೆ ಹೇಗಿರಬೇಕು, ರಿವಾಲ್ವರ್ ಅನ್ನು ಹೇಗೆ ಇಟ್ಟುಕೊಳ್ಳಬೇಕು, ಹೇಗೆ ನಡೆಯಬೇಕು ಇನ್ನೂ ಹಲವಾರು ಮಾಹಿತಿಗಳನ್ನು ಸೂಕ್ಷ್ಮವಾಗಿ ತಿಳಿ ಹೇಳಿದ್ದಾರೆ ಪುಲಿಕೇಶಿನಗರ ಉಪವಿಭಾಗದ ಎಸಿಪಿ.

ಇಷ್ಟೇಲ್ಲಾ ಹೇಳಿಕೊಟ್ಟ ಮೇಲೆ ಅಶೋಕ್ ಅವರನ್ನು ಆದಿತ್ಯ, ನಿಜ ಜೀವದ ಹೀರೋ ಎಂದು ಹೊಗಳಿದ್ದಾರೆ. ಅಶೋಕ್ ಇನ್ನೂ ಒಂದು ಮಾತು ಹೇಳಿದ್ದಾರೆ. ಇನ್ನು ಮುಂದೆ ಮಚ್ಚು, ಲಾಂಗುಗೆ ಬ್ರೇಕ್ ಹಾಕಿ ಪೊಲೀಸ್ ಅಧಿಕಾರಿ ಪಾತ್ರ ಮಾಡು ಎಂದು ಹಿತವಚನ ನೀಡಿದ್ದಾರೆ.

ನಿಜ ಜೀವನದಲ್ಲಿ ನನಗೆ ಪೊಲೀಸ್ ಅಧಿಕಾರಿಯಾಗಿ ಅಶೋಕ್ ಇಷ್ಟವಾದರೆ, ತೆರೆಯ ಮೇಲೆ ಪೊಲೀಸ್ ಅಧಿಕಾರಿಗಳಾಗಿ ಶಂಕರ್‌ನಾಗ್, ಸುದೀಪ್ ಹಾಗೂ ತಮಿಳಿನ ಸೂರ್ಯ ಇಷ್ಟವಾಗುತ್ತಾರೆ ಎಂದಿದ್ದಾರೆ ಆದಿತ್ಯ.

ಜೆ.ಜಿ. ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಮಾಸ್'ನಲ್ಲಿ ಆದಿತ್ಯನಿಗೆ ಡೈಸಿ ಬೋಪಣ್ಣ ಹೀರೋಯಿನ್. ಆದರೆ ಅವರದ್ದು ಅಪ್ಪಟ ಗೃಹಿಣಿ ಪಾತ್ರವಂತೆ. ಉಳಿದಂತೆ ಜಿ.ಕೆ. ಗೋವಿಂದರಾವ್ ಮುಖ್ಯಮಂತ್ರಿಯಾಗಿ, ಮಹತ್ವಾಕಾಂಕ್ಷಿ ರಾಜಕಾರಣಿಯಾಗಿ ಸುಚೇಂದ್ರ ಪ್ರಸಾದ್ ಕಾಣಿಸಿಕೊಳ್ಳುತ್ತಿದ್ದಾರೆ.

ಎಸಿಪಿಯಿಂದಲೇ ಪಾಠ ಮಾಡಿಸಿಕೊಂಡ ಆದಿತ್ಯ ಮೇಲೆ ಅದರ ಎಫೆಕ್ಟ್ ತೆರೆಯ ಮೇಲೆ ಯಾವ ರೀತಿ ಇರಲಿದೆ ಎಂಬುದನ್ನು ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾಸ್, ಆದಿತ್ಯ, ಡೆಡ್ಲಿ ಸೋಮ, ಬಿಬಿ ಅಶೋಕ್ ಕುಮಾರ್