ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತಮಿಳು 'ಮೈನಾ' ಕನ್ನಡಕ್ಕೆ ತಂದ ಮಂಜು; ಗಣೇಶ್ ನಾಯಕ? (K Manju | Myna | Ganesh | Tamil remake)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಯಾವುದೇ ಭಾಷೆಯಲ್ಲಾದರೂ ಸರಿ, ಒಂದು ಚಿತ್ರ ಹಿಟ್ ಆದ ಕೂಡಲೇ ಅದನ್ನು ಮತ್ತೊಂದು ಭಾಷೆಗೆ ತರಲು ಕಾಯುತ್ತಿರುತ್ತಾರೆ. ಅದೇ ಸಾಲಿಗೆ ತಮಿಳಿನ ಸೂಪರ್ ಹಿಟ್ 'ಮೈನಾ' ಕೂಡ ಸೇರಿದೆ. ಕನ್ನಡದಲ್ಲಿ ಇದನ್ನು ನಿರ್ಮಾಪಕ 'ಗಂಡುಗಲಿ' ಕೆ. ಮಂಜು ರಿಮೇಕ್ ಮಾಡಲಿದ್ದಾರೆ.

ರಿಮೇಕ್ ಹಕ್ಕಿಗೆ ಇನ್ನೂ ಹೆಸರಿಟ್ಟಲ್ಲ. ಚಿತ್ರಕ್ಕೆ ಬೇಕಾದ ಕಲಾವಿದರು, ತಂತ್ರಜ್ಞರು ಯಾವುದನ್ನು ಅಂತಿಮಗೊಳಿಸಿಲ್ಲ. ಮೂಲ ಚಿತ್ರದ ನಿರ್ದೇಶಕ ಪ್ರಭು ಸೊಲೋಮನ್ ಅವರೇ ಕನ್ನಡದಲ್ಲಿ ಆಕ್ಷನ್-ಕಟ್ ಹೇಳಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ನಾಯಕನಾಗುವುದು ಬಹುತೇಕ ಖಚಿತ. ಆದರೆ ಈ ಬಗ್ಗೆ ಇನ್ನಷ್ಟೇ ಗಣೇಶ್ ಜತೆ ಮಾತುಕತೆ ನಡೆಯಬೇಕಿದೆ. ಸರಿಯಾಗಿ ಇನ್ನೂ ಯಾವುದೂ ನಿರ್ಧಾರವಾಗಿಲ್ಲ ಎನ್ನುವ ಮಾತನ್ನು ಮಂಜು ಆಡಿದ್ದಾರೆ.

ಕಾರಣ ಗಣೇಶ್ ಪ್ರಸ್ತುತ ದುಬೈ ಪ್ರವಾಸದಲ್ಲಿದ್ದಾರೆ ಎನ್ನುವುದು. ತನ್ನ ನಿರ್ಮಾಣದ ಸ್ವಮೇಕ್ 'ಅರಮನೆ'ಯಲ್ಲೂ ಗಣೇಶ್ ನಾಯಕನಾಗಿದ್ದನ್ನು ನೆನಪಿಸಿಕೊಳ್ಳುವ ಮಂಜು, ಈಗ ರಿಮೇಕ್ ಮೂಲಕ ಮತ್ತೆ ಒಂದಾಗಲು ಮುಂದಾಗಿದ್ದಾರೆ. ಗಣೇಶ್ ನನ್ನ ಆಫರ್ ತಿರಸ್ಕರಿಸುವುದಿಲ್ಲ ಎನ್ನುವ ನಂಬಿಕೆಯೂ ಅವರದ್ದು.

ಇನ್ನೊಂದು ಸಂಗತಿಯೆಂದರೆ, 'ಮೈನಾ' ಚಿತ್ರದ ರಿಮೇಕ್ ಹಕ್ಕುಗಳಿಗಾಗಿ ಇನ್ನೂ ಹಲವು ಮಂದಿ ಸರದಿಯಲ್ಲಿದ್ದಾರೆ ಎನ್ನುವುದು. ಸಂದೇಶ್ ನಾಗರಾಜ್, ಕೆಸಿಎನ್ ಕುಮಾರ್, ಜಾಕ್ ಮಂಜು, ನಿರ್ದೇಶಕ ಪ್ರೇಮ್ ಹೀಗೆ ಹಲವರು ಕ್ಯೂನಲ್ಲಿದ್ದಾರೆ. ಆದರೆ ಮಂಜು ಮಾತ್ರ, ತಾನು ಹಕ್ಕು ಗಿಟ್ಟಿಸಿಕೊಂಡಿದ್ದೇನೆ ಎನ್ನುತ್ತಿದ್ದಾರೆ.

ಹಿಂದೆ ಗಣೇಶ್ ಅಭಿನಯದ ತಮಿಳು ರಿಮೇಕ್ 'ಚೆಲುವಿನ ಚಿತ್ತಾರ' ಸೂಪರ್ ಹಿಟ್ ಆಗಿತ್ತು. ಅದೇ ರೀತಿಯ ಚಿತ್ರ ಇದಾಗಿರುವುದರಿಂದ ಹೀಗೆ ನಿರ್ಮಾಪಕರು ಕ್ಯೂ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೆ ಮಂಜು, ಮೈನಾ, ಗಣೇಶ್, ತಮಿಳು, ಕನ್ನಡ ಸಿನಿಮಾ