ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹಾಟ್.. ಹಾಟ್... ನಮಿತಾ ಈಗ 'ಬೆಂಕಿ ಬಿರುಗಾಳಿ'! (Namita | Benki Birugali | SK Basheed | Sandalwood)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ದಕ್ಷಿಣ ಭಾರತದ ಸೆಕ್ಸಿ ತಾರೆ ಎಂಬ ಬಿರುದನ್ನು ಅನಾಮತ್ತಾಗಿ ಪಡೆದುಕೊಂಡಿರುವ ನಮಿತಾಗೆ ಸ್ಯಾಂಡಲ್‌ವುಡ್‌ನಲ್ಲೇ ಹೆಚ್ಚು ಬೇಡಿಕೆ ಇದ್ದಂತಿದೆ. ಒಂದರ ಹಿಂದೆ ಮತ್ತೊಂದು ಎಂಬಂತೆ ಅವರಿಗೆ ಕನ್ನಡದಲ್ಲಿ ಅವಕಾಶಗಳು ಸಿಗುತ್ತಿವೆ. ಯಾವತ್ತು ನೋಡಿದರೂ ನಮಿತಾಂಬೆ ಜಪ ಎಂಬಂತೆ ಕೂತಿರುತ್ತಾರೆ ನಮ್ಮ ಗಾಂಧಿನಗರದ ಮಂದಿ.

ಭರಪೂರ ಆಸ್ತಿಯುಳ್ಳ ನಮಿತಾ ಆಗಾಗ ಕನ್ನಡಿಗರ ಮೈ ಜುಮ್ಮೆನಿಸಿ ಮರೆಯಾಗುತ್ತಿರುವರು. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ನೀಲಕಂಠ, ಹೂ ಚಿತ್ರಗಳಲ್ಲಿ ಉರುಳು ಸೇವೆ, ದರ್ಶನ್ ನಾಯಕತ್ವದ ಇಂದ್ರದಲ್ಲೂ ಕಾಣಸಿಕೊಂಡ ನಂತರ, 'ನಮಿತಾ ಐ ಲವ್ ಯೂ' ಎಂಬ ಚಿತ್ರದಲ್ಲಿ ಅವಕಾಶ ಪಡೆದುಕೊಂಡಿದ್ದರು. ಆ ಮೂಲಕ ತನ್ನ ಹೆಸರಿನಲ್ಲೇ ಚಿತ್ರವೊಂದು ನಿರ್ಮಾಣವಾದ ದಾಖಲೆಯನ್ನೂ ಅವರು ಮಾಡಿದ್ದರು.

ಈಗ ನಮಿತಾ ಪಡ್ಡೆ ಹುಡುಗರ ಚಳಿ ಬಿಡಿಸಲು ಮುಂದಾಗಿರುವುದು 'ಬೆಂಕಿ ಬಿರುಗಾಳಿ'ಯ ಮೂಲಕ. ಅಂದರೆ ಈ ಹಿಂದೆ ಶಂಕರ್‌ನಾಗ್, ವಿಷ್ಣುವರ್ಧನ್, ಜಯಮಾಲ, ಜಯಂತಿ ಚಿತ್ರದ ರಿಮೇಕ್ ಎಂದುಕೊಳ್ಳಬೇಡಿ. ಅದರ ಯಾವುದೇ ಅಂಶಗಳು ಇಲ್ಲಿರುವ ಸಾಧ್ಯತೆಗಳು ಕಡಿಮೆ. ಯಾಕೆಂದರೆ ಇದನ್ನು ನಿರ್ದೇಶಿಸುತ್ತಿರುವುದು ತೆಲುಗಿನವರು.

ಎಸ್.ಕೆ. ಬಶೀದ್ ನಿರ್ದೇಶನದ 'ಬೆಂಕಿ ಬಿರುಗಾಳಿ'ಯಲ್ಲಿ ನಮಿತಾ ನಾಯಕಿಯೋ ಅಥವಾ ಹಾಡಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೋ ಎಂಬುದು ಖಚಿತವಾಗಿಲ್ಲ. ತೆಲುಗಿನಲ್ಲಿ 'ಅಲ್ಲರಿ, ಅಲ್ಲರಿ' ಎಂದು ನಿರ್ದೇಶಿಸಿದ್ದ ಬಶೀದ್ ಈ ಬಗ್ಗೆ ಹೆಚ್ಚು ವಿವರಗಳನ್ನು ನೀಡಲು ಮುಂದಾಗಿಲ್ಲ.

ನಮಿತಾರ ಬೆಂಕಿ ಬಿರುಗಾಳಿ ಹೇಗಿರುತ್ತದೆ ಎಂದು ಅಭಿಮಾನಿಗಳು ಕಾಯಲು ಮತ್ತೊಂದು ಚಿತ್ರ ಸಿಕ್ಕಿರುವುದಂತೂ ಹೌದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಮಿತಾ, ಬೆಂಕಿ ಬಿರುಗಾಳಿ, ಎಸ್ಕೆ ಬಶೀದ್, ರವಿಚಂದ್ರನ್