ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗ್ಲಾಮರಸ್ ಇಮೇಜ್ ಸಾಕಾಗಿದೆ: 'ಗಂಡ-ಹೆಂಡತಿ' ಸಂಜನಾ (Sanjjanaa | Archana Galrani | Kannada films | Ganda Hendathi)
ಸುದ್ದಿ/ಗಾಸಿಪ್
Bookmark and Share Feedback Print
 
WD
ಬಾಲಿವುಡ್ ಬಿಚ್ಚಮ್ಮ ಮಲ್ಲಿಕಾ ಶೆರಾವತ್‌ಗೆ ಭಾರೀ ಹೆಸರು ತಂದು ಕೊಟ್ಟಿದ್ದ 'ಮರ್ಡರ್' ಕನ್ನಡ ಅವತರಣಿಕೆ 'ಗಂಡ-ಹೆಂಡತಿ'ಯಲ್ಲಿ ತಿಲಕ್ ಜತೆ ತುಟಿಗೆ ತುಟಿ ಸೇರಿಸಿದ್ದೂ ಸೇರಿದಂತೆ ಮೈಚಳಿ ಬಿಟ್ಟು ಅಭಿನಯಿಸಿದ್ದ ಅರ್ಚನಾ ಗರ್ಲಾನಿ ಆಲಿಯಾಸ್ ಸಂಜನಾ ಮಾತಿದು. ಕನ್ನಡದಲ್ಲಿ ನನ್ನ ಪ್ರತಿಭೆಯನ್ನು ಹೊರಗೆ ಹಾಕುವ ಚಿತ್ರಗಳು ಸಿಗುತ್ತಿಲ್ಲ, ಇನ್ನು ಮುಂದೆ ನಾನು ಸತ್ವವಿಲ್ಲದ ಗ್ಲಾಮರಸ್ ಪಾತ್ರಗಳಲ್ಲಿ ನಟಿಸುವುದಿಲ್ಲ ಎಂದು ಸಾರಿದ್ದಾರೆ.

ಸಾಕಷ್ಟು ಚಿತ್ರಗಳಲ್ಲಿ ನಟಿಸಿದರೂ ತವರಿನಲ್ಲಿ ಗಟ್ಟಿ ನೆಲೆ ಕಂಡುಕೊಳ್ಳದ ಸಂಜನಾಗೆ ಇತ್ತೀಚೆಗಷ್ಟೇ ಬಿಡುಗಡೆಯಾದ 'ಮೈಲಾರಿ' ಮೂಲಕ ಹಣೆಬರಹ ಬದಲಾಗಬಹುದು ಎಂಬ ನಿರೀಕ್ಷೆಯೂ ಇದೆ.

ಆದರೂ ಆ ಚಿತ್ರದಲ್ಲಿ ಆಕೆಗೆ ಸಿಕ್ಕಿದ್ದು ಅದೇ ಗ್ಲಾಮರ್ ಪಾತ್ರ. ಈ ಹಿಂದಿನ ಚಿತ್ರಗಳಲ್ಲಿ ನಿರ್ದೇಶಕರು ಕೊಟ್ಟಿದ್ದ ಮಸಾಲೆ ಪಾತ್ರವೇ 'ಮೈಲಾರಿ'ಯಲ್ಲೂ ಸಿಕ್ಕಿತ್ತು. ಅದರ ನಡುವೆಯೂ ಒಂದಿಷ್ಟು ಭರವಸೆ ಸಂಜನಾರದ್ದು.

ಇಮೇಜ್ ಬಗ್ಗೆ ನಾನು ಹೆಚ್ಚು ಗಮನ ಕೊಡುವುದಿಲ್ಲ. ಆದರೆ, ನನ್ನ ನಟನಾ ಸಾಮರ್ಥ್ಯವನ್ನು ಹೊರ ತೆಗೆಯುವ ಕನ್ನಡ ಚಿತ್ರಗಳು ನನಗೆ ಸಿಕ್ಕಿಲ್ಲ ಎನ್ನುವುದು ಸತ್ಯ. ಅದೇ ಗ್ಲಾಮರಸ್ ಪಾತ್ರಗಳನ್ನು ಮಾಡಿ ಮಾಡಿ ಸಾಕಾಗಿದೆ, ಬೋರಾಗುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಟನೆಗೆ ಹೆಚ್ಚು ಅವಕಾಶವಿರುವ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಸಂಜನಾ ಹೇಳಿಕೊಂಡಿದ್ದಾರೆ.

ತನ್ನ ಮೊದಲ ಚಿತ್ರ ಗಂಡ-ಹೆಂಡತಿ ಬಗ್ಗೆ ಸ್ವತಃ ಆಕೆಯಲ್ಲಿಯೇ ವಾಕರಿಕೆ ಇದೆ. ನಾನು ಆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದರಿಂದ ನಂತರ ಅತ್ಯುತ್ತಮ ಪಾತ್ರಗಳು ಸಿಕ್ಕಲಿಲ್ಲ. ಅದು ನನ್ನದೇ ತಪ್ಪು ಎಂಬಂತೆ ಮಾತನಾಡಿದ್ದಾರೆ.

ಆದರೆ ತೆಲುಗು ಚಿತ್ರರಂಗಕ್ಕೂ ಇದೇ ಮಾತು ಅನ್ವಯಿಸುವುದಿಲ್ಲ. ಅಲ್ಲಿ ಬುಜ್ಜಿಗಾಡು ಮೂಲಕ ಪದಾರ್ಪಣೆ ಮಾಡಿದ್ದರಿಂದ, ಜನ ಗುರುತಿಸುತ್ತಿದ್ದಾರೆ. ಕೇವಲ ಗ್ಲಾಮರ್ ಬೊಂಬೆಯೆಂಬ ಬದಲಿಗೆ ನಟಿ ಎಂದು ನನ್ನನ್ನು ಕಾಣುತ್ತಾರೆ. ಅದೇ ನಿಟ್ಟಿನಲ್ಲಿ ಪಾತ್ರಗಳೂ ಸಿಗುತ್ತಿವೆ. ನಟನೆಗೆ ಅವಕಾಶವಿರುವ ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದೇನೆ ಎಂದು ಸಂಜನಾ ವಿವರಣೆ ನೀಡಿದ್ದಾರೆ.

ಗಂಡ-ಹೆಂಡತಿ, ಅಟೋಗ್ರಾಫ್ ಪ್ಲೀಸ್, ರಕ್ಷಕ, ಅರ್ಜುನ್, ಹುಡುಗ ಹುಡುಗಿ, ಈ ಸಂಜೆ, ಶ್ಲೋಕ, ಮೈಲಾರಿ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಸಂಜನಾ ತಮಿಳಿನಲ್ಲಿ ಒರು ಕಾದಲ್ ಸೈವೀರ್ ಎಂಬ ಚಿತ್ರದಲ್ಲಿ ನಟಿಸಿದವರು. ತೆಲುಗಿನಲ್ಲಿ ಬುಜ್ಜಿಗಾಡು, ಪೊಲೀಸ್ ಪೊಲೀಸ್ ಬಿಡುಗಡೆಯಾಗಿವೆ.

ಈಗ ಮಲಯಾಳಂನಲ್ಲಿ ಕಸನೋವಾ ಮತ್ತು ತೆಲುಗಿನಲ್ಲಿ ದುರ್ಯೋದನ ಎಂಬ ಚಿತ್ರ ಸಿದ್ಧವಾಗಿದೆ. ದುರ್ಯೋದನದಲ್ಲಿ ಶ್ರೀಕಾಂತ್ ನಾಯಕ. ಇದು ಒಂದು ರೀತಿಯಲ್ಲಿ ಹಿಂದಿಯ 'ರಾಜನೀತಿ'ಯಲ್ಲಿ ಕತ್ರಿಕಾ ಕೈಫ್ ಮಾಡಿದ್ದ ರೀತಿಯ ಪಾತ್ರ. ಹಾಗಾಗಿ ಭರವಸೆ ಇದೆ ಎನ್ನುತ್ತಾರೆ.

ದಕ್ಷಿಣ ಭಾರತದ ಇತರ ಚಿತ್ರಗಳಿಗಾಗಿ ಕನ್ನಡಕ್ಕೆ ಬೆನ್ನು ಹಾಕುತ್ತಿದ್ದೀರಾ ಎಂಬ ಪ್ರಶ್ನೆಗೆ, 'ನಮ್ಮ ಕನ್ನಡದವರಿಗೆ ಆಮದು ನಟಿಯರೇ ಬೇಕು. ಹಾಗಾಗಿ ನಾವು ನಮ್ಮ ಅದೃಷ್ಟವನ್ನು ಬೇರೆ ಭಾಷೆಗಳಲ್ಲಿ ಪರೀಕ್ಷೆ ಮಾಡಬೇಕಾಗುತ್ತದೆ. ಇದು ಶೀಘ್ರದಲ್ಲೇ ಅಂತ್ಯಗೊಂಡು, ನಮಗೂ ಇಲ್ಲಿ ನಟಿಸಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿದೆ' ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಂಜನಾ, ಸ್ಯಾಂಡಲ್ವುಡ್, ಕನ್ನಡ ಸಿನಿಮಾಗಳು, ಗಂಡ ಹೆಂಡತಿ, ಅರ್ಚನಾ ಗರ್ಲಾನಿ