ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಋಷ್ಯಶೃಂಗ, ದೇವೀರಿ ಛಾಯಾಗ್ರಾಹಕ ರಾಮಚಂದ್ರ ಇನ್ನಿಲ್ಲ (S Ramachandra | Ghatashraddha | Deveeri | cinematographer)
ಸುದ್ದಿ/ಗಾಸಿಪ್
Bookmark and Share Feedback Print
 
A still from Nayi Neralu
PR
ಕನ್ನಡ ಕಲಾತ್ಮಕ ಚಿತ್ರಗಳ ಜೀವ ಎಂದೇ ಗುರುತಿಸಿಕೊಂಡಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಜನಪ್ರಿಯ ಛಾಯಾಗ್ರಾಹಕ ಎಸ್. ರಾಮಚಂದ್ರ ಐತಾಳ್ ಇಂದು ಅಪರಾಹ್ನ (10-01-2011) ಅಸ್ತಂಗತರಾಗಿದರು.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ 68 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳ ಹಿಂದೆ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಇಂದು ಅಪರಾಹ್ನ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

1960ರ ದಶಕದಲ್ಲಿ ಛಾಯಾಗ್ರಾಹಕರಾಗಿ ಚಿತ್ರರಂಗ ಪ್ರವೇಶಿಸಿದ್ದ ರಾಮಚಂದ್ರ 75ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಛಾಯಾಗ್ರಾಹಕರಾಗಿ ದುಡಿದಿದ್ದರು. ಅದರಲ್ಲಿ ಕನ್ನಡ, ಹಿಂದಿ ಮತ್ತು ಕಿರುತೆರೆಗಳು ಸೇರಿದ್ದವು.

1977ರಲ್ಲಿ ಋಷ್ಯಶೃಂಗ ಕನ್ನಡ ಚಿತ್ರದ ಛಾಯಾಗ್ರಾಹಣಕ್ಕಾಗಿ ರಾಷ್ಟ್ರಪ್ರಶಸ್ತಿ, 2006ರಲ್ಲಿ ಜೀವಮಾನದ ಸಾಧನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಐದಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ರಾಮಚಂದ್ರ ಭಾಜನರಾಗಿದ್ದರು.

ಯಾದೇಂ, ಘಟಾಶ್ರದ್ಧ, ಚೋಮನ ದುಡಿ, ಆಕ್ರಮಣ, ಮನೆ, ದೇವೀರಿ, ಹೊಂಬಿಸಿಲು, ಮಾಲ್ಗುಡಿ ಡೇಸ್, ಬನದ ನೆರಳು, ಹಾರು ಹಕ್ಕಿಯನ್ನೇರಿ, ನಾಯಿ ನೆರಳು, ಗುಲಾಬಿ ಟಾಕೀಸ್, ವಿಮುಕ್ತಿ ಮುಂತಾದುವು ಅವರು ಛಾಯಾಗ್ರಹಣ ಮಾಡಿದ ಹಿಂದಿ ಮತ್ತು ಕನ್ನಡ ಸಿನಿಮಾಗಳು.

ರಾಮಚಂದ್ರ ಅವರು ಛಾಯಾಗ್ರಾಹಕನಾಗಿ ಕೆಲಸ ಮಾಡಿದ ಎಂಟನೇ ಚಿತ್ರ ಘಟಾಶ್ರಾದ್ಧ. ಇದು ಅವರಿಗೆ ಭಾರೀ ಹೆಸರು ತಂದು ಕೊಟ್ಟಿತ್ತು. ಸತ್ಯಜಿತ್ ರೇ ಅವರ ಸಿನಿಮಾಗಳ ಖಾಯಂ ಛಾಯಾಗ್ರಾಹಕ ಸುಬ್ರತೋ ಮಿತ್ರಾ ಅವರಿಂದ ಪ್ರಭಾವಿತರಾಗಿದ್ದ ಅವರದ್ದು ರಿಯಲಿಸ್ಟಿಕ್ ಶೈಲಿ. ಇದೇ ಕಾರಣದಿಂದ ತನಗೆ ಛಾಯಾಗ್ರಹಣದ ಅನೇಕ ರೀತಿಗಳು ಒಲಿದವು ಎಂದು ಬದುಕಿದ್ದಾಗ ಹೇಳಿಕೊಂಡಿದ್ದರು.

ಇತ್ತೀಚಿನವರೆಗೂ ಆರೋಗ್ಯದಿಂದಲೇ ಇದ್ದ ರಾಮಚಂದ್ರ ಅವರ ಅಗಲಿಕೆ ಚಿತ್ರರಂಗಕ್ಕೆ ಆಘಾತವಾಗಿ ಪರಿಣಮಿಸಿದೆ. ಅದರಲ್ಲೂ ಚಿತ್ರರಂಗದ ಕಲಾತ್ಮಕ ವಿಭಾಗಕ್ಕೆ ಇದು ತುಂಬಲಾರದ ನಷ್ಟ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಸ್ ರಾಮಚಂದ್ರ, ಘಟಾಶ್ರಾದ್ಧ, ದೇವೀರಿ, ಛಾಯಾಗ್ರಾಹಕ