ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಐಂದ್ರಿತಾ ಜತೆ ನಟಿಸೋದಿಲ್ಲ ಎಂದರೇ ದುನಿಯಾ ವಿಜಯ್? (Jarasandha | Praneetha | Vijay | Aindrita)
ಸುದ್ದಿ/ಗಾಸಿಪ್
Bookmark and Share Feedback Print
 
ಲೇಟೆಸ್ಟ್ 'ಜಂಭದ ಕೋಳಿ' ಎಂದು ಹೆಸರು ಪಡೆದುಕೊಂಡಿರುವ ಐಂದ್ರಿತಾ ರೇ ಇತ್ತೀಚೆಗೆ ತನ್ನ ನಟನೆಗಿಂತ ವಿವಾದಗಳಿಂದಲೇ ಸುದ್ದಿಯಲ್ಲಿರುವ ಹುಡುಗಿ. ಅದಕ್ಕೀಗ ಮತ್ತೊಂದು ಸೇರ್ಪಡೆ.

ದುನಿಯಾ ವಿಜಯ್ ನಾಯಕನಾಗಿರುವ 'ಜರಾಸಂಧ'ದಲ್ಲಿ ಐಂದ್ರಿತಾ ನಾಯಕಿಯಾಗಿರಬೇಕಿತ್ತು. ಮೊಗ್ಗಿನ ಮನಸು, ಕೃಷ್ಣನ್ ಲವ್ ಸ್ಟೋರಿ ಖ್ಯಾತಿಯ ಶಶಾಂಕ್ ಇದರ ನಿರ್ದೇಶಕರು. ಆದರೆ ಇದ್ದಕ್ಕಿದ್ದಂತೆ ಈಗ ಆಕೆಯನ್ನು ಕೈ ಬಿಡಲಾಗಿದೆ. ಕಾರಣ ಹಲವು. ಅದರಲ್ಲಿ ಒಂದು ವಿಜಯ್, ಎರಡನೆಯದ್ದು ಕನ್ನಡ ಚಿತ್ರರಂಗದ ಹಿರಿಯ ನಟಿ, ಮೂರು ಡೇಟ್ಸ್ ಸಮಸ್ಯೆ ಮತ್ತು ನಾಲ್ಕನೆಯದ್ದು ಪಾತ್ರಕ್ಕೆ ಆಕೆ ಹೊಂದಾಣಿಕೆ ಆಗದೇ ಇರುವುದು!
PR

ಹಲವು ಕಾರಣಗಳಿಂದ ಐಂದ್ರಿತಾ ಹೊರಗೆ ಬಿದ್ದಿರುವುದಂತೂ ಹೌದು. ಆಕೆಯ ಜಾಗಕ್ಕೆ ದರ್ಶನ್ 'ಪೊರ್ಕಿ' ಮೂಲಕ ಪರಿಚಯವಾಗಿದ್ದ ಪ್ರಣೀತಾಳನ್ನು ನಿರ್ದೇಶಕರು ಆಯ್ಕೆ ಮಾಡಿದ್ದಾರೆ. ನಡುವೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಇದು ನಿರ್ಮಾಪಕ ಅಥವಾ ನಿರ್ದೇಶಕರು ಐಂದ್ರಿತಾ ಜತೆ ಗಲಾಟೆ ಮಾಡಿಕೊಂಡು ಆಗಿರುವ ಬದಲಾವಣೆಯಲ್ಲ. ಡೇಟ್ಸ್ ಹೊಂದಾಣಿಕೆಯಾಗದೇ ಇರುವುದರಿಂದ ಎಂದು.

ಲೆಕ್ಕಾಚಾರದ ಮನುಷ್ಯ ಎಂದು ಹೆಸರಾಗಿರುವ ಶಶಾಂಕ್ 'ಜರಾಸಂಧ' ಜನವರಿ 17ರಂದು ಸೆಟ್ಟೇರುತ್ತದೆ. ಆದರೆ ಶೂಟಿಂಗ್ ಆರಂಭವಾಗುವುದು ಫೆಬ್ರವರಿ ಅಂತ್ಯದಲ್ಲಿ. ಇದಕ್ಕೆ ಕಾರಣ ವಿಜಯ್-ರಮ್ಯಾ ಅಭಿನಯದ 'ಜಾನಿ ಮೇರಾ ನಾಮ್' ಚಿತ್ರೀಕರಣ ವಿಳಂಬವಾಗಿರುವುದು. ಜರಾಸಂಧ ತಡವಾಗಿ ಆರಂಭವಾಗುವುದರಿಂದ ಐಂದ್ರಿತಾಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಈಗಾಗಲೇ ತೆಲುಗು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅಚ್ಚ ಕನ್ನಡತಿ ಪ್ರಣೀತಾಳನ್ನು ನಿರ್ದೇಶಕರು ಆಯ್ಕೆ ಮಾಡಲಾಗಿದೆ.

ನಾನು ಐಂದ್ರಿತಾಳನ್ನು ಕೈ ಬಿಡುತ್ತಿಲ್ಲ. ಆಕೆಯನ್ನು ಸುದೀಪ್ ನಾಯಕನಾಗಿರುವ ನನ್ನ ಮುಂದಿನ ಚಿತ್ರಕ್ಕೆ ಬಳಸಿಕೊಳ್ಳುತ್ತೇನೆ ಎಂದು ಶಶಾಂಕ್ ಹೇಳಿಕೊಂಡಿದ್ದಾರಾದರೂ, ಅವರ ಮತ್ತೊಂದು ಹೇಳಿಕೆ ಕುತೂಹಲವನ್ನೂ ಸೃಷ್ಟಿಸಿದೆ. 'ಜರಾಸಂಧ'ದಲ್ಲಿನ ನಾಯಕಿಯ ಪಾತ್ರಕ್ಕೆ ಐಂದ್ರಿತಾ ಅಷ್ಟೊಂದು ಹೊಂದಾಣಿಕೆಯಾಗುವುದಿಲ್ಲ. ಆಕೆ ನನ್ನ ಮುಂದಿನ ಚಿತ್ರಕ್ಕೆ ಹೆಚ್ಚು ಹೊಂದಿಕೊಳ್ಳುತ್ತಾಳೆ. ಇದನ್ನು ನಾನು ಆಕೆಗೆ ವಿವರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ 'ಧೂಳ್' ಚಿತ್ರದ ನಿರ್ದೇಶಕರಿಂದ ಸಿಕ್ಕಾಪಟ್ಟೆ ಉಗಿಸಿಕೊಂಡಿದ್ದ ಐಂದ್ರಿತಾರನ್ನು ಈಗ ಜರಾಸಂಧ ಚಿತ್ರತಂಡದಿಂದ ಹೊರಗೆ ತಳ್ಳಲಾಗಿದೆ ಎನ್ನುವುದನ್ನು ಯಾರು ಕೂಡ ಒಪ್ಪಿಕೊಳ್ಳುತ್ತಿಲ್ಲ. ಸ್ವತಃ ವಿಜಯ್ ಕೂಡ ನಿರಾಕರಿಸಿದ್ದಾರೆ.

ಈಗಾಗಲೇ 'ಜಂಗ್ಲಿ'ಯಲ್ಲಿ ಜತೆಯಾಗಿದ್ದ ಐಂದ್ರಿತಾ ಜತೆ ಮತ್ತೆ ನಟಿಸಲು ವಿಜಯ್‌ಗೆ ಇಷ್ಟವಿಲ್ಲ. ಇದಕ್ಕಿರುವ ಕಾರಣ ಬಹಿರಂಗಪಡಿಸಲು ಆಗದೇ ಇರುವಂತದ್ದು. ಆದರೆ ಇಬ್ಬರಿಗೂ ಗೊತ್ತಿದೆಯಂತೆ!

ಇನ್ನೊಂದು ಕಾರಣ ಹಿರಿಯ ನಟಿಯೊಬ್ಬರು ಇದರಲ್ಲಿ ಮಧ್ಯಪ್ರವೇಶಿಸಿದ್ದಾರೆ ಎನ್ನುವುದು.

ಒಂದು ವಿಚಾರವನ್ನು ಸ್ವತಃ ಐಂದ್ರಿತಾ ಕೂಡ ಒಪ್ಪಿಕೊಂಡಿದ್ದಾಳೆ. ಕಳೆದ ಒಂದು ವರ್ಷದಿಂದ ನನ್ನ ವೃತ್ತಿ ಜೀವನದಲ್ಲಿ ಒಬ್ಬ ಹಿರಿಯ ನಾಯಕಿ ನಟಿ ಮಧ್ಯಪ್ರವೇಶ ಮಾಡುತ್ತಿದ್ದಾರೆ. ನನಗೆ ಚಿತ್ರರಂಗದಲ್ಲಿ ನನ್ನದೇ ಆದ ಛಾಪು ಇದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಆಕಾಂಕ್ಷೆಗಳಿರುತ್ತವೆ. ಹಿರಿಯ ನಟಿ ಎನಿಸಿಕೊಂಡವರು ಮತ್ತೊಬ್ಬರಿಗೆ ಸಹಕಾರ ಮಾಡಬೇಕೇ ಹೊರತು ಅನ್ಯಾಯವನಲ್ಲಲ್ಲ. ನನಗೂ ವಿಜಯ್‌ಗೂ ಯಾವುದೇ ಸಮಸ್ಯೆಯಿಲ್ಲ ಎಂದಿದ್ದಾಳೆ.

ಆದರೆ ವಿಜಯ್ ತನ್ನ ಬಗೆಗಿನ ಗಾಸಿಪ್ಪುಗಳನ್ನು ತಳ್ಳಿ ಹಾಕಿದ್ದಾರೆ. ಜರಾಸಂಧದಿಂದ ಐಂದ್ರಿತಾಳನ್ನು ಕೈ ಬಿಡುವ ವಿಚಾರದಲ್ಲಿ ನನ್ನ ಕೈವಾಡವಿಲ್ಲ. ಇದು ನಿರ್ದೇಶಕರಿಗೆ ಬಿಟ್ಟದ್ದು. ಆ ಪಾತ್ರಕ್ಕೆ ಆಕೆ ಹೊಂದಾಣಿಕೆಯಾಗುವುದಿಲ್ಲ ಎಂದು ಬೇರೆಯವರನ್ನು ಆಯ್ಕೆ ಮಾಡಿದ್ದಾರೆ. ಅಷ್ಟೇ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ನಾನು ಯಾವತ್ತೂ ನನ್ನ ಜತೆ ನಟಿಸಬೇಕಾದ ಹುಡುಗಿ ಆಕೆಯೇ ಆಗಿರಬೇಕು, ಈಕೆಯೇ ಆಗಿರಬೇಕು ಎಂದು ಹೇಳಿದವನಲ್ಲ. ನನ್ನ ಮತ್ತು ಐಂದ್ರಿತಾ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ಹಿರಿಯ ನಟಿಯೊಬ್ಬರ ವಶೀಲಿಬಾಜಿಯಿಂದಾಗಿ ಆಕೆಯನ್ನು ಕೈ ಬಿಡಲಾಗಿದೆ ಎಂಬ ಮಾತಲ್ಲೂ ಹುರುಳಿಲ್ಲ. ಯಾರೋ ಹೇಳುವ ಗಾಳಿಸುದ್ದಿಗಳಿಗೆಲ್ಲ ಕಿವಿಗೊಡಲು ನಾನು ಮೂರ್ಖನಲ್ಲ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ವಿಜಯ್ ಹೇಳಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜರಾಸಂಧ, ಪ್ರಣೀತಾ, ವಿಜಯ್, ಐಂದ್ರಿತಾ, ಪೊರ್ಕಿ