ಈಗ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಚಿತ್ರಗಳ ಭರಾಟೆ ಮುಗಿದು ಪೊಲೀಸ್ ಸಿನಿಮಾಗಳ ದರ್ಬಾರು ಶುರುವಾಗಿದೆ. ಸುದೀಪ್ ನಿರ್ದೇಶನದ 'ಕೆಂಪೇಗೌಡ'ನಿಗೆ ಭರ್ಜರಿ ಓಪನಿಂಗ್ ಸಿಕ್ಕಿದೆ.
ಈಗ ತಾನೇ ಬಂದಿರುವ ಸುದ್ದಿ ಪ್ರಕಾರ 'ಕೆಂಪೇಗೌಡ' ಚಿತ್ರದ ನಿರ್ಮಾಪಕ ಶಂಕರ ಗೌಡರು ಮತ್ತೊಂದು ಪೊಲೀಸ್ ಚಿತ್ರವನ್ನು ನಿರ್ಮಿಸಲು ಹೊರಟಿದ್ದಾರೆ ಅದರಲ್ಲೂ ಸುದೀಪ್ ಅವರೇ ನಾಯಕ.
'ವರದ ನಾಯಕ' ಎಂಬುದು ಸಿನಿಮಾದ ಹೆಸರು. ಇದು ತೆಲುಗಿನ 'ಲಕ್ಷಂ' ಚಿತ್ರದ ರೀಮೇಕ್. ಬದಲಾವಣೆ ಏನೆಂದರೆ ಈ ಚಿತ್ರವನ್ನು ಸುದೀಪ್ ಬದಲು ಅಯ್ಯಪ್ಪ ನಿರ್ದೇಶಿಸಲಿದ್ದಾರೆ.
ಶಂಕರ್-ಸುದೀಪ್ ಜೋಡಿ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳು ಚಿತ್ರದ ಶೂಟಿಂಗ್ ಆರಂಭವಾಗಲಿದೆ.
ಪೊಲೀಸ್ ಅಧಿಕಾರಿಯ ಕಥೆ ಹೊಂದಿದ, ಚಿರಂಜೀವಿ ಸರ್ಜಾ ನಾಯಕನಾಗಿರುವ 'ದಂಡಂ ದಶ ಗುಣಂ' ತೆರೆ ಕಾಣಲು ಸಜ್ಜಾಗಿದೆ. ನಾಯಕ ನಟ ಆದಿತ್ಯ ಮೊದಲ ಬಾರಿ ಖಾಕಿ ಸಮವಸ್ತ್ತ್ರ ಧರಿಸಿರುವ 'ಮಾಸ್'ನ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ.