ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಾಜಕೀಯ ಸೇರಲ್ಲ, ನಂದೇನಿದ್ರೂ ಸಿನಿಮಾ ಕ್ಷೇತ್ರ; ಸುದೀಪ್ ಪ್ಲೇಟ್ ಚೇಂಜ್! (Kempe Gowda | Sudeep | Karnataka Politics | Jagalooru Assembly)
PR
'ಕೆಂಪೇಗೌಡ' ಚಿತ್ರದ ಯಶಸ್ಸಿನ ಹುಮ್ಮಸ್ಸಿನಲ್ಲಿರುವ ಸುದೀಪ್ ಜನ ಸೇವೆ ಮಾಡಲು ರಾಜಕೀಯ ರಂಗ ಪ್ರವೇಶಿಸುತ್ತೇನೆಂದು ಕಳೆದ ವಾರ ಹೇಳಿಕೆ ನೀಡಿ ಅವರ ಅಭಿಮಾನಿಗಳನ್ನು ದಂಗುಗೊಳಿಸಿದ್ದರೆ ಈ ವಾರ ಪ್ಲೇಟ್ ಬದಲಾಯಿಸಿ ಮತ್ತಷ್ಟು ಜನರಿಗೆ ಅಚ್ಚರಿ ಮೂಡಿಸಿದ್ದಾರೆ.

'ರಾಜಕೀಯ ಸೇರಲಾರೆ. ನನ್ನದೇನಿದ್ದರೂ ಸಿನಿಮಾ ಕ್ಷೇತ್ರ. ಚುನಾವಣೆಯಲ್ಲಿ ನಿಲ್ತೀನಿ ಅನ್ನೋದು ಬರೇ ಊಹಾಪೋಹ' ಎಂದು ಕನ್ನಡದ ಪ್ರಮುಖ ದೈನಿಕವೊಂದರ ಫೋನ್ ಇನ್ ಕಾರ್ಯಕ್ರಮದಲ್ಲಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆ ಮರು ಚುನಾವಣೆಯಲ್ಲಿ ಸುದೀಪ್ ಕಾಂಗ್ರೆಸ್ ಅಭ್ಯಥಿಯಾಗಿ ಜಗಳೂರಿನಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿ ಹಬ್ಬಿದ್ದುದನ್ನು ಇಲ್ಲಿ ಸ್ಮರಿಸಬಹುದು. ಇದಕ್ಕೆ ಪೂರಕವೆಂಬಂತೆ ಸುದೀಪ್ ಚಿತ್ರ ರಂಗಕ್ಕೆ ವಿದಾಯ ಹೇಳಿ ರಾಜಕೀಯ ರಂಗ ಪ್ರವೇಶಿಸುವ ನಿರ್ಧಾರವನ್ನೂ ಪ್ರಕಟಿಸಿದ್ದರು.

'ಪ್ರತಿ ದಿನವೂ ಬಯಲಾಗುತ್ತಿರುವ ಒಂದಲ್ಲ ಒಂದು ಭ್ರಷ್ಟಾಚಾರ ಹಗರಣಗಳಿಂದ ರಾಜಕೀಯ ರಂಗ ಕುಲಗೆಟ್ಟು ಹೋಗಿದೆ. ಅಲ್ಲಿ ಜನಸಾಮಾನ್ಯರ ಬಗ್ಗೆ ಚಿಂತಿಸುವವರೇ ಇಲ್ಲವಾಗಿದೆ. ನಾನು ಈಗಿನ ನನ್ನ ಸ್ಥಾನ ತಲುಪಲು ಜನರೇ ಕಾರಣ. ಹಾಗಾಗಿ ಅವರಿಗೆ ಏನಾದರೂ ಒಳ್ಳೆಯದು ಮಾಡಬೇಕೆಂಬ ಹಂಬಲದಿಂದ ರಾಜಕೀಯ ರಂಗ ಪ್ರವೇಶಿಸಲು ನಿರ್ಧರಿಸಿದ್ದೇನೆ. ಅಧಿಕಾರದ ಸುಖ ಅನುಭವಿಸಲು ನಾನು ರಾಜಕೀಯ ರಂಗ ಪ್ರವೇಶಿಸುತ್ತಿಲ್ಲ. ಶ್ರೀಸಾಮಾನ್ಯರ ಸೇವೆಯೇ ನನ್ನ ಉದ್ದೇಶ. ರಾಜಕೀಯ ರಂಗಕ್ಕೆ ಹೋದರೆ ನಾನು ಚಿತ್ರರಂಗದಲ್ಲಿ ಮುಂದುವರಿಯುವುದಿಲ್ಲ' ಎಂದು ಸುದೀಪ್ ಪ್ರಕಟಿಸಿ ಹಲವರ ಹುಬ್ಬೇರಿಸಿದ್ದರು.

ಕೈಯಲ್ಲಿ ಸಾಕಷ್ಟು ಚಿತ್ರಗಳಿದ್ದು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಸುದೀಪ್ ಅವರ ಈ ನಿರ್ಧಾರ ಅಚ್ಚರಿ ಮೂಡಿಸಿದ್ದು ಸಹಜವೇ.
ಇವನ್ನೂ ಓದಿ