ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಇಂಡಿಯಾ ಮೆಚ್ಚಿಸಬಲ್ಲ ಮಂಡ್ಯ ರಮೇಶ್
ತಾರಾ ಪರಿಚಯ
Feedback Print Bookmark and Share
 
ರಂಗ ಪ್ರಯೋಗಗಳಲ್ಲಿ ತಮ್ಮದೇ ಛಾಪನ್ನು ಒತ್ತಿರುವ ಮಂಡ್ಯ ರಮೇಶ್ರದು ಬಹುಮುಖ ಪ್ರತಿಭೆ. ಆದರೆ ಇದರ ಒಂದು ಮುಖವನ್ನೂ ಚಲನಚಿತ್ರರಂಗ ಸಮರ್ಥವಾಗಿ ಬಳಸಿಕೊಂಡಿಲ್ಲ ಎಂಬುದು ಕಹಿಸತ್ಯ. ಹಲವು ಹನ್ನೊಂದು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರಾದರೂ ಅವರ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಂಡ ಚಿತ್ರ ಇನ್ನೂ ಬಂದಿಲ್ಲವೆಂದೇ ಹೇಳಬೇಕು. ರಮೇಶ್ರ ಕನಸುಗಳು-ಸಾಹಸಗಳ ಕುರಿತು ಬೆಳಕು ಚೆಲ್ಲುವ ಸಂದರ್ಶನ ಇಲ್ಲಿದೆ:

* ಚಿತ್ರರಂಗದಲ್ಲಿ ನಿಮಗೆ ಸಿಗುತ್ತಿರುವ ಅವಕಾಶಗಳ ಬಗ್ಗೆ ಹೇಳಿ?
ಅವಕಾಶವೇನೋ ಚೆನ್ನಾಗಿ ಸಿಗ್ತಾ ಇದೆ. ಆದರೆ ಸಿಗುತ್ತಿರುವ ಪಾತ್ರಗಳ ಗುಣಮಟ್ಟದ ಕುರಿತು ಇದೇ ಮಾತನ್ನು ಹೇಳಲಾರೆ. ಮೈಸೂರಿನಲ್ಲಿ ಸುಮಾರು 18ಲಕ್ಷ ವೆಚ್ಚದಲ್ಲಿ ರಂಗಮಂಟಪ ಕಟ್ಟಿದ್ದೇನಲ್ಲಾ, ಅದರ ಸಾಲದ ಹಣಕ್ಕೆ ಇಂಥ ಪಾತ್ರಗಳಿಂದ ಬರುವ ಹಣ ಸಹಕಾರಿಯಾಗಿದೆ ಅಂತ ಹೇಳಬಹುದು.

* ಯಾವುದೇ ಕ್ಷೇತ್ರದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಯಾರಾದರೊಬ್ಬರು ಸ್ಪೂರ್ತಿಯಾಗಿರ್ತಾರೆ. ಅಭಿನಯ ಕ್ಷೇತ್ರಕ್ಕೆ ಕಾಲಿಡಲು ನಿಮಗೆ ಸ್ಪೂರ್ತಿ ಸಿಕ್ಕಿದ್ದು ಹೇಗೆ?
ಈಗ ನಾನು ಮೈಸೂರಿನಲ್ಲಿ ನಟನೆ ಎಂಬ ರಂಗತಂಡವನ್ನೇನೋ ಕಟ್ಟಿದ್ದೇನೆ. ಅವರಿಗೆಂದೇ ರಂಗಮಂಟಪವನ್ನೂ ಕಟ್ಟಿದ್ದೇನೆ. ಇಂಥ ಕಾರ್ಯಕ್ಕೆ ಹಾಗೂ ನನ್ನ ಅಭಿನಯ ಕ್ಷೇತ್ರದ ಪ್ರವೇಶಕ್ಕೆ ಸ್ಪೂರ್ತಿಯಾದವರು ಹೆಗ್ಗೋಡಿನ ಕೆ.ವಿ.ಸುಬ್ಬಣ್ಣ ಹಾಗೂ ಬಿ.ವಿ.ಕಾರಂತರು. ಇದು ನನಗೆ ಹೆಮ್ಮೆ.

* ಚಿತ್ರರಂಗದ ಹೊರತಾಗಿ ನಿಮ್ಮ ರಂಗಚಟುವಟಿಕೆಗಳ ಬಗ್ಗೆ ಹೇಳಿ
ಮಕ್ಕಳಿಗೆ ಹೊಸ ಹೊಸ ನಾಟಕಗಳನ್ನು ಹೇಳಿಕೊಡೋದರಲ್ಲಿ ನನಗೆ ಖುಷಿ ಸಿಗ್ತಾ ಇದೆ. ನಾಟಕದ ಜೊತೆ ಮಕ್ಕಳಿಗೆ ಕಂಸಾಳೆ ಪದಗಳನ್ನೂ ಹೇಳಿಕೊಡ್ತೀನಿ. ಒಟ್ಟಾರೆಯಾಗಿ ಜಾನಪದ ಕಲೆಗೆ ಪ್ರೋತ್ಸಾಹ ಇಲ್ಲಿ ನೀಡುವ ಪ್ರಯತ್ನ ಮಾಡ್ತಾ ಇದ್ದೇನೆ. ಇವಿಷ್ಟೇ ಅಲ್ಲದೇ ವಾರದಲ್ಲಿ ಮೂರು ದಿನ ರಂಗಭೂಮಿಗೆ ಸಂಬಂಧಿಸಿದ ಏನಾದರೊಂದು ಚಟುವಟಿಕೆ ನಡೆಯುತ್ತಲೇ ಇರುತ್ತದೆ.