ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆಧುನಿಕ ತಂತ್ರಜ್ಞಾನಕ್ಕೆ ಮೊರೆ ಹೋದ ರೈಲ್ವೇ ಸಚಿವೆ (Mamta banarjee | Latest technology | Budget | Railway)
PTI
ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಆಧುನಿಕತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಲಭ್ಯವಿರುವ ಇತ್ತೀಚಿನ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ಇಲಾಖೆಯ ಕ್ಷಮತೆಯನ್ನು ಹೆಚ್ಚಿಸಿ ಪ್ರಯಾಣಿಕರಿಗೆ ಸೌಲಭ್ಯಗಳನ್ನು ಒದಗಿಸಿಕೊಡುವ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

1 ಐಐಟಿ ,ಕಾನ್ಪುರ್ ಮತ್ತು ಆರ್‌ಡಿಎಸ್‌ಒ ಅಭಿವೃದ್ದಿಪಡಿಸಿದ ಪೈಲಟ್ ಪ್ರೋಜೆಕ್ಟ್ ಸಿಮ್ರಾನ್ ಯೋಜನೆಯನ್ನು ಬಳಸಿಕೊಂಡು ರಿಯಲ್ ಟೈಮ್ ಟ್ರೇನ್ ಇನ್‌ಫಾರ್ಮೇಶನ್ ಸಿಸ್ಟಂ(ಆರ್‌ಟಿಐಎಸ್) ವ್ಯವಸ್ಥೆ ಜಾರಿಗೆ ತರಲಾಗುತ್ತದೆ.

2 ಬೆಂಗಾಲ್ ಇಂಜಿನಿಯರಿಂಗ್ ಆಂಡ್ ಸೈನ್ಸ್ ಯುನಿವರ್ಸಿಟಿ ಶಿಬಾಪುರ್ ಸಹಭಾಗಿತ್ವದಲ್ಲಿ,ಜ್ಯೂಟ್ ಜಿಯೋ-ಟೆಕ್ಸಟೈಲ್ ಬಳಸಿಕೊಂಡು ಎಂಬ್ಯಾಂಕ್‌ಮೆಂಟ್ ವಿನ್ಯಾಸ ರೂಪಿಸಲಾಗುತ್ತಿದೆ.

3 ಐಐಟಿ ಮತ್ತು ಚೆನ್ನೈ ಸಹಭಾಗಿತ್ವದಲ್ಲಿ ಅಲ್ಟ್ರಾಸೋನಿಕ್ ಸಿಸ್ಟಂ ಮಾದರಿಗಳನ್ನು ಉತ್ಪಾದಿಸಲಾಗುತ್ತಿದೆ.

4 ಜಾಧವ್‌ಪುರ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ರೈಲ್ ಸ್ಟೀಲ್ ಬ್ರಿಡ್ಜ್‌ಗಳ ನೂತನ ವಿನ್ಯಾಸ.

5 ರೈಲುಗಳಿಗೆ ತುಕ್ಕುಹಿಡಿಯವುದನ್ನು ತಡೆಯಲು ಮುಂಬೈ ಮತ್ತು ಐಐಟಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಧ್ಯಯನ

6 ಸೆಂಟರ್ ಫಾರ್ ರೈಲ್ವೆ ರಿಸರ್ಚ್(ಸಿಆರ್‌ಆರ್‌) ಸಂಸ್ಥೆ, ಐಐಟಿ, ಖರಗ್‌ಪುರ್ ಮತ್ತು ಆರ್‌ಡಿಎಸ್‌ಒ ಜಂಟಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಣೆ.

7 ಎಕ್ಸಲೆನ್ಸ್ ಫಾರ್ ಡೆವಲಪಮೆಂಟ್ ಆಂಡ್ ಪ್ರೋಟೋಟೈಪಿಂಗ್ ಟೈಪ್ಸ್ ಆಫ್ ಮೆಚಾಟ್ರಾನಿಕ್ಸ್ ಸಿಸ್ಟಂ ಕೇಂದ್ರಗಳನ್ನು ಆರ್‌ಸಿಎಫ್/ ಕಪುರ್ತಲಾ ಮತ್ತು ಡಿಎಂಡಬ್ಲು/ಪಟಿಯಾಲದಲ್ಲಿ ಆರಂಭಿಸಲಾಗುತ್ತದೆ.

8 ಪಾರದರ್ಶಕತೆ ಹಾಗೂ ಆರ್ಥಿಕತೆಯನ್ನು ಹೆಚ್ಚಿಸಲು ಇ- ವಸೂಲಿ ಮತ್ತು ಇ-ಹರಾಜಿಗೆ ಆದ್ಯತೆ.

9 ಪೇಪರ್ ರಹಿತ ರೈಲ್ವೆ ರಿಸೀದಿಗೆ ಆದ್ಯತೆ

10 ಜಿಪಿಎಸ್ ಆಧಾರಿತ ಫಾಗ್ ಸೇಫ್ ಉಪಕರಣ ಅಳವಡಿಕೆ.

ರೈಲ್ವೆ ಇಲಾಖೆ ಸದಾ ಪರಿಸರ ಸ್ನೇಹಿಯಾಗಿರುವುದರಿಂದ, ಪ್ರಸಕ್ತ 2011-12 ವರ್ಷವನ್ನು ಇಯರ್ ಆಫ್ ಗ್ರೀನ್ ಎನರ್ಜಿ ಎಂದು ಘೋಷಿಸಲಾಗಿದ್ದು ಪರಿಸರ ಸ್ನೇಹಿ ಯೋಜನೆಗಳ ಘೋಷಣೆ

1 ರೈಲ್ವೆ ಉದ್ಯೋಗಿಗಳಿಗೆ 14 ಲಕ್ಷ ಕಾಂಪ್ಯಾಕ್ಟ್ ಫ್ಲೋರೋಸೆಂಟ್ ಲ್ಯಾಂಪ್‌ಗಳ ಉಚಿತ ವಿತರಣೆ

2 ಚೆನ್ನೈನ ಐಸಿಎಫ್‌ನಲ್ಲಿ ವಿಂಡ್‌ಮಿಲ್.

3 ಹೋಟೆಲ್ ಲೋಡ್ ಕನ್ವರ್ಟರ್‌ನೊಂದಿಗೆ ಲೋಕೋಸ್ ಉತ್ಪಾದನೆ.

4 ಎಲ್‌ಸಿ ಗೇಟ್‌ಗಳಲ್ಲಿ ನಿಲ್ದಾಣಗಳಲ್ಲಿ ಸೌರ ವಿದ್ಯುತ್ ಬಳಕೆ ಹೆಚ್ಚಳದ ಗುರಿ.

5 ಲೋಕೋಗಳಲ್ಲಿ ಬಯೋ ಡೀಸೆಲ್‌, ಸಿಎನ್‌ಜಿ ಮತ್ತು ಎಲ್ಎನ್‌ಜಿ ಬಳಕೆ.
ಇವನ್ನೂ ಓದಿ