ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಪರಮಾಣು ಯೋಜನೆಗೆ ಪಾಕ್ ಒತ್ತು
ಭಾರತ ಮತ್ತು ಅಮೆರಿಕ ನಡುವೆ ನಾಗರಿಕ ಅಣು ಶಕ್ತಿ ಒಪ್ಪಂದ ಅಂತಿಮ ಹಂತ ತಲುಪಿರುವ ನಿಟ್ಟಿನಲ್ಲಿ, ಪಾಕಿಸ್ತಾನ ತನ್ನ ಪರಮಾಣು ಯೋಜನೆಯನ್ನು ತ್ವರಿತಗೊಳಿಸುವತ್ತ ಗಮನ ಹರಿಸಿದೆ. ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ಪರಮಾಣು ಯೋಜನೆಗೆ ಆದ್ಯತೆ ನೀಡಬೇಕು ಎಂದು ವಿಜ್ಞಾನಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿದೆ.

ಇಂಡೊ-ಯುಎಸ್ ನಾಗರಿಕ ಒಪ್ಪಂದ ದಕ್ಷಿಣ ಏಷಿಯಾದಲ್ಲಿ ರಚನಾತ್ಮಕ ಸಂಬಂಧಗಳು ಮತ್ತು ಪ್ರಾಬಲ್ಯತೆಗೆ ದಕ್ಕೆ ತರುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಅಣುಶಕ್ತಿ ಮತ್ತು ಅನುಸಂಧಾನ ಪ್ರಾಧಿಕಾರದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ದಕ್ಷಿಣ ಏಷಿಯಾದ ಸ್ಥಿರತೆಯನ್ನು ಗಮನದಲ್ಲಿ ಇರಿಸಿಕೊಂಡು ಪಾಕಿಸ್ತಾನ ತನ್ನ ಅಣ್ವಸ್ತ್ರ ಮತ್ತು ಕ್ಷಿಪಣಿ ಕಾರ್ಯಕ್ರಮವನ್ನು ಮುಂದುವರಿಸಲು ನಿರ್ದರಿಸಿದೆ ಎಂದು ಅಂತರ್ಜಾಲ ಮಾಧ್ಯಮ ವರದಿ ಮಾಡಿದೆ.

ಪಾಕಿಸ್ತಾನ ತನ್ನ ಕ್ಷಿಪಣಿ ಮತ್ತು ಖುಷಾಬ್ ಅಣುಶಕ್ತಿ ಉತ್ಪಾದನಾ ಕೇಂದ್ರದ ಕಾಮಗಾರಿಯನ್ನು ತ್ವರಿತಗೊಳಿಸಲಿದೆ ಅಲ್ಲದೆ ಇನ್ನೂ ಐದು ಅಣು ವಿದ್ಯುತ್ ಶಕ್ತಿ ಕೇಂದ್ರಗಳ ನಿರ್ಮಾಣಕ್ಕೆ ಮುಂದಾಗಲಿದೆ ಎಂದು ಪಾಕ್ ಮಿಲಿಟರಿ ಮೂಲಗಳು ತಿಳಿಸಿವೆ.

ದೇಶದಲ್ಲಿ ಏರುತ್ತಿರುವ ವಿದ್ಯುತ್ ಶಕ್ತಿ ಬೇಡಿಕೆಯನ್ನು ಗಮನದಲ್ಲಿರಿಸಿಕೊಂಡು ಪರಮಾಣು ಕಾರ್ಯಕ್ರಮವನ್ನು ಮುಂದುವರಿಸುವ ನಿಟ್ಟಿನಲ್ಲಿ ತನ್ನ ಮಿತ್ರ ರಾಷ್ಟ್ರಗಳಿಂದ ಪರಮಾಣು ತಂತ್ರಜ್ಞಾನದ ನೆರವು ಪಡೆಯಲು ಪಾಕಿಸ್ತಾನ ನಿರ್ಧರಿಸಿದೆ.
ಮತ್ತಷ್ಟು
ತಾಲಿಬಾನ್ ಉಗ್ರರೊಂದಿಗಿನ ಮಾತುಕತೆ ವಿಫಲ
ಭಾರತೀಯ ಅಧಿಕಾರಿಗಳಿಗೆ ವಿಶ್ವಸಂಸ್ಥೆ ಶ್ಲಾಘನೆ
ಪಾಕ್‌ಗೆ ಮರಳಿದಲ್ಲಿ ಕ್ಷಮೆ ಹಿಂತೆಗೆತ- ಮುಷರಫ್
ಉತ್ತರಪ್ರದೇಶದಲ್ಲಿ ಜಪಾನೀಸ್ ಎನ್ಸಿಫಲೈಟಸ್
ನವಾಜ್ ಮರುವಿಚಾರಣೆಗೆ ಕೋರ್ಟ್ ಅನುಮತಿ
ಡೀನ್ ಅಬ್ಬರ:ಮೂವರ ಸಾವು
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com