|
ಹನೀಫ್ ವೀಸಾ ರದ್ದು ಆದೇಶ ವಜಾ
|
|
ಮೆಲ್ಬೋರ್ನ್, ಮಂಗಳವಾರ, 21 ಆಗಸ್ಟ್ 2007( 15:11 IST )
|
|
|
|
|
|
|
|
ಲಂಡನ್ ಭಯೋತ್ಪಾದನೆ ಸಂಚಿನಲ್ಲಿ ಭಾರತೀಯ ಮೂಲದ ವೈದ್ಯ ಮೊಹಮದ್ ಹನೀಫ್ ದೋಷಮುಕ್ತರಾದ ಬಳಿಕ ಅವರ ಕೆಲಸದ ವೀಸಾ ರದ್ದು ಮಾಡಿದ ವಿವಾದಾತ್ಮಾಕ ನಿರ್ಧಾರವನ್ನು ಬ್ರಿಸ್ಬೇನ್ ಕೋರ್ಟ್ ಮಂಗಳವಾರ ವಜಾಮಾಡಿದೆ.
ಆದರೆ ಈ ತೀರ್ಪಿನ ವಿರುದ್ಧ ಸಚಿವ ಕೆವಿನ್ ಆಂಡ್ರೀವ್ಸ್ ಮೇಲ್ಮನವಿ ಸಲ್ಲಿಕೆಗೆ ಅವಕಾಶ ನೀಡಲು ತಮ್ಮ ನಿರ್ಧಾರಕ್ಕೆ 21 ದಿನಗಳ ತಡೆಯಾಜ್ಞೆಯನ್ನು ನ್ಯಾಯಮೂರ್ತಿ ಸ್ಪೆಂಡರ್ ನೀಡಿರುವುದರಿಂದ ಹನೀಫ್ ಹಿಂತಿರುಗುವಿಕೆ ವಿಳಂಬವಾಗಲಿದೆ.
ಕೆಲಸದ ವೀಸಾ ರದ್ದು ಮಾಡಿದ ಆಂಡ್ರೀವ್ಸ್ ಕ್ರಮವನ್ನು ನಿರ್ಬಂಧಿಸಿ ಆಜ್ಞೆ ನೀಡಿದ ನ್ಯಾಯಾಧೀಶರು ಹನೀಫ್ ಅವರ ಕೋರ್ಟ್ ವೆಚ್ಚಗಳನ್ನು ಭರಿಸುವಂತೆ ಸರ್ಕಾರಕ್ಕೆ ಆದೇಶ ನೀಡಿದ್ದಾರೆ. ದೋಷಪೂರಿತ ಮಾನದಂಡವನ್ನು ಅಳವಡಿಸುವ ಮೂಲಕ ಸಚಿವರು ಹನೀಫ್ ವೀಸಾ ರದ್ದುಮಾಡಿದ್ದಾರೆಂದು ಸ್ಪೆಂಡರ್ ತೀರ್ಮಾನಿಸಿದರು. . ಲಂಡನ್‌ನ ಭಯೋತ್ಪಾದನೆ ನಿಗ್ರಹ ಪೋಲೀಸರಿಗೆ ಹನೀಫ್ ಬೇಕಾದ ವ್ಯಕ್ತಿಯೆಂಬ ಮಾಹಿತಿಯ ಬಗ್ಗೆ ಸಚಿವರು ನಂಬಿಕೆ ಇರಿಸಿದ್ದರೆ ಮತ್ತು ಹನೀಫ್ ಭಯೋತ್ಪಾದನೆ ಸಂಘಟನೆಗೆ ಸಂಪೂನ್ಮೂಲ ಒದಗಿಸಿರುವ ಆರೋಪವಿದ್ದಿದ್ದರೆ, ಹನೀಫ್ ವೀಸಾ ರದ್ದು ಮಾಡಿದ ಸಚಿವರ ಕ್ರಮವನ್ನು ಸಮರ್ಥಿಸಬಹುದಾಗಿತ್ತು ಎಂದು ನ್ಯಾಯಾಧೀಶರು ತೀರ್ಮಾನಿಸಿದರು.
ಆದರೆ ಈಗ ವೈದ್ಯರ ವಿರುದ್ಧ ಆರೋಪ ರದ್ದಾಗಿರುವುದರಿಂದ ಮತ್ತು ಸನ್ನಿವೇಶಗಳು ಬದಲಾಗಿರುವದರಿಂದ ಅವುಗಳ ಆಧಾರದ ಮೇಲೆ ಹನೀಫ್ ವೀಸಾ ರದ್ದುಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
|
|
|
|
|
|
|
|