|
ರಾಜಕೀಯ ನಿರ್ಬಂಧ ಹಿಂತೆಗೆತ, ಆಯೋಗ ಇಂಗಿತ
|
|
ಢಾಕಾ, ಸೋಮವಾರ, 20 ಆಗಸ್ಟ್ 2007( 18:39 IST )
|
|
|
|
|
|
|
|
ಮುಂದಿನ ತಿಂಗಳಿನಿಂದ ಚುನಾವಣೆಯ ಹಕ್ಕನ್ನು ಮರುಸ್ಥಾಪಿಸುವಂತೆ ರಾಜಕೀಯ ಪಕ್ಷಗಳೊಂದಿಗೆ ಮಹತ್ವದ ಮಾತುಕತೆ ನಡೆಸಲು ಸೇನಾ ಬೆಂಬಲಿತ ಮಧ್ಯಂತರ ಸರಕಾರವು ಅನುಮತಿ ನೀಡಿ, ಸಕ್ರಿಯ ರಾಜಕೀಯ ಮೇಲಿನ ನಿರ್ಬಂಧವನ್ನು ಹಿಂತೆಗೆದುಕೊಳ್ಳುವ ಭರವಸೆಯನ್ನು ಬಾಂಗ್ಲಾದೇಶದ ಚುನಾವಣಾ ಆಯೋಗವು ವ್ಯಕ್ತಪಡಿಸಿದೆ.
'ಮುಂದೆ ಏನಾಗಬೇಕು ಎಂಬುವುದರ ಕುರಿತು ತಿಳಿದುಕೊಳ್ಳಲು ನಾವು ಮುಖ್ಯ ಸಲಹೆಗಾರರನ್ನು ಕರೆಯಲಿದ್ದೇವೆ' ಎಂದು ಮುಖ್ಯ ಚುನಾವಣಾ ಆಯುಕ್ತ ಎಟಿಎಮ್ ಶಾಂಸುಲ್ ಹುಡಾ ಅವರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಈ ತಿಂಗಳ ಅಂತ್ಯದೊಳಗಾಗಿ ಚುನಾವಣಾ ಹಕ್ಕು ಮರುಸ್ಥಾಪನೆ ಮಾಡುವ ಪ್ರಸ್ತಾವನೆ ಕುರಿತು ಮಾತುಕತೆ ನಡೆಸಲು ಎಲ್ಲ ರಾಜಕೀಯ ಪಕ್ಷಗಳಿಗೆ ಪ್ರತಿಯನ್ನು ರವಾನಿಸಲಾಗುವುದು ಹಾಗೂ ಮಾತುಕತೆ ನಡೆಯುವ ಪೂರ್ವದಲ್ಲಿ ರಾಜಕೀಯ ಮೇಲಿನ ನಿಷೇಧ ಹಿಂತೆಗೆತದ ಮುನ್ಸೂಚನೆಯು ಕಾಣಿಸಿಕೊಳ್ಳಲಿದೆ ಎಂದು ಅವರು ಹೇಳಿದರು.
'ಸೆಪ್ಟೆಂಬರ್‌ನಿಂದ ನವೆಂಬರ್‌ದೊಳಗಾಗಿ ಮಾತುಕತೆಯು ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಕಾಯಬೇಕಾಗುತ್ತದೆ. ಇದರಿಂದ ಮುಂದೆ ಹಿತಕರವಾದ ವಾತಾವರಣವನ್ನು ಕಾಣಬಹುದಾಗಿದೆ' ಎಂದು ಚುನಾವಣಾ ಆಯುಕ್ತ ಸೋಹಲ್ ಹುಸೇನ್ ಈ ಮುಂಚೆಯೇ ಹೇಳಿದ್ದರು.
ಸಕ್ರಿಯ ರಾಜಕೀಯ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವವರೆಗೂ ನಾವು ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಂಧಿತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪಕ್ಷವಾಗಿರುವ ಅವಾಮಿ ಲೀಗ್ ಹಾಗೂ ಖಲೀದಾ ಜಿಯಾ ಅವರ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿಗಳು ಸ್ಪಷ್ಟಪಡಿಸಿವೆ.
|
|
|
|
|
|
|
|