|
ಭಾರತದೊಂದಿಗೆ ಸೌಹಾರ್ದಯುತ ಸಂಬಂಧ
|
|
ನವದೆಹಲಿ, ಸೋಮವಾರ, 20 ಆಗಸ್ಟ್ 2007( 18:36 IST )
|
|
|
|
|
|
|
|
ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ಆರ್ಥಿಕ ಅಭಿವೃದ್ಧಿಯ ಸಾಮಾನ್ಯ ಹಿತಾಸಕ್ತಿಯ ಮುನ್ನಡೆಗೆ ಕೆನಡಾವು ಭಾರತದೊಂದಿಗೆ ಗಾಢವಾದ ಸಹಭಾಗಿತ್ವಕ್ಕೆ ಕೈಚಾಚಲು ಸಿದ್ಧವಾಗಿದೆ ಎಂದು ಕೆನಡಾದ ಪ್ರಧಾನಿ ಮಂತ್ರಿಗಳು ಹೇಳಿದ್ದಾರೆ.
ಭಾರತ 60ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿ ಬರೆದಿರುವ ಪತ್ರದಲ್ಲಿ '1947ರಲ್ಲಿ ಭಾರತದ ಸ್ವಾತಂತ್ರ್ಯವು ಇಡೀ ಜಗತ್ತಿಗೆ ಪ್ರೇರಣೆಯಾಗಿದೆ. ಭಾರತ ತನ್ನ ವೈವಿಧ್ಯತೆಯನ್ನು ಸದುಪಯೋಗಪಡಿಸಿಕೊಂಡು ಶಕ್ತಿಶಾಲಿ ಪ್ರಜಾಪ್ರಭುತ್ವವಾಗಿ ವಿಕಾಸಗೊಂಡಿದೆ' ಎಂದು ಪ್ರಧಾನಿಗಳು ತಿಳಿಸಿದ್ದಾರೆ.
'ಭಾರತವು ಜಾಗತಿಕ ಮನ್ನಣೆಯಲ್ಲಿ ಬೆಳಗುತ್ತಿರುವ ರಾಷ್ಟ್ರವಾಗಿದೆ. ಆರ್ಥಿಕ ಅಭಿವೃದ್ಧಿಯಿಂದಾಗಿ ನೂತನ ಅವಕಾಶಗಳನ್ನು ಉತ್ತೇಜಿಸಲು ಹಾಗೂ ಅಂತಾರಾಷ್ಟ್ರೀಯ ವ್ಯಾಪಾರದಿಂದ ಉಭಯ ರಾಷ್ಟ್ರಗಳ ಜನಾಭ್ಯುದಯ ಮತ್ತು ಸಾಮಾನ್ಯ ಹಿತಾಸಕ್ತಿಯ ಮುನ್ನಡೆಗೆ ಕೆನಡಾವು ಭಾರತದೊಂದಿಗೆ ಗಾಢವಾದ ಸಂಬಂಧವನ್ನು ಬೆಳೆಸುವುದಕ್ಕೆ ಸಿದ್ಧವಾಗಿದೆ' ಎಂದು ಪ್ರಧಾನಿಗಳು ತಿಳಿಸಿದ್ದಾರೆ.
ಇದೇ ಪ್ರಥಮ ಬಾರಿಗೆ ಟೊರೊಂಟೊ ನಗರದಲ್ಲಿ ಭಾರತದ 60ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಸಾವಿರಾರು ಭಾರತೀಯರೊಂದಿಗೆ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಕೆನಡಾ ನಾಗರಿಕರು ಪರೇಡ್‌ನಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಪರೇಡ್‌ನಲ್ಲಿ ವಂದನೆ ಸ್ವೀಕರಿಸಿದ ಸ್ವಾತಂತ್ರ್ಯ ಹೋರಾಟಗಾರ ಹರ್ಚರಣ್ ಸಿಂಗ್ ಅವರು ಭಾನುವಾರ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಹಲವಾರು ಬಗೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
|
|
|
|
|
|
|
|