|
ಯುಎಇನಲ್ಲಿ ಸಿಕ್ಕಿಬಿದ್ದ ಭಾರತೀಯ ಮಹಿಳೆ
|
|
ದುಬೈ, ಶನಿವಾರ, 1 ಸೆಪ್ಟೆಂಬರ್ 2007( 14:53 IST )
|
|
|
|
|
|
|
|
ಹೈದರಾಬಾದ್ ನಿವಾಸಿಯಾಗಿದ್ದ 35 ವರ್ಷದ ಆಲಿಯಾ ಬೇಗಂ ವೀಸಾ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಯುಎಇನಲ್ಲೇ ಸಿಕ್ಕಿಬಿದ್ದಿದ್ದಾರೆ. ಆಲಿಯಾ ಬೇಗಂನಂತ ಸಾವಿರಾರುಅಕ್ರಮ ನಿವಾಸಿಗಳು ಯುಎಇನಲ್ಲಿ ಅನುಭವಿಸಿದ ಯಾತನೆಗಳಿಂದ ಹೊರಬರಲು ಸ್ವದೇಶಕ್ಕೆ ವಾಪಸಾಗುವ ಯತ್ನ ನಿರರ್ಥಕವಾಗಿದೆ.
ಆಲಿಯಾ ಬೇಗಂ 1999ರಲ್ಲಿ ಮೊಹಮದ್ ಸಾದಿಖ್‌ನನ್ನು ಹೈದರಾಬಾದ್‌ನಲ್ಲಿ ವರಿಸಿದ್ದರು. ಯುಎಇ ಪೌರನೆಂದು ಹೇಳಿದ ಸಾದಿಖ್ ಆಕೆಯನ್ನು ಪರಿಚಾರಿಕೆಯ ವೀಸಾ ಆಧಾರದ ಮೇಲೆ ಇಲ್ಲಿಗೆ ಕರೆತಂದ. ಸಾದಿಖ್ ಪಾಕಿಸ್ತಾನದ ಪೌರನಾಗಿದ್ದು, ಪಾಕಿಸ್ತಾನದಲ್ಲಿ ಪತ್ನಿ ಮತ್ತು ಮಕ್ಕಳಿದ್ದುದು ಆಲಿಯಾಗೆ ಗೊತ್ತಿರಲಿಲ್ಲ.
ಇಷ್ಟೇ ಅಲ್ಲದೇ ತನ್ನ ಪುತ್ರಿ ಶಾಮಾ ಸಾದಿಖ್‌ಗೆ ಪಾಕಿಸ್ತಾನದ ಪಾಸ್‌ಪೋರ್ಟ್‌ನ್ನು ಸಾದಿಖ್ ಪಡೆದಿದ್ದನು. ಹೀಗಾಗಿ ಸ್ವದೇಶಕ್ಕೆ ಹಿಂತಿರುಗುವ ಆಲಿಯಾ ಕನಸು ಮುರುಟಿ ಹೋಗಿದೆ.
ಜೀವನೋಪಾಯಕ್ಕಾಗಿ ಅಲ್ಲಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಅವಳು ನೆಚ್ಚಿಕೊಂಡಿದ್ದಾಳೆ. ತನ್ನ ಪುತ್ರಿ ಬಳಿ ಕ್ರಮಬದ್ಧ ವೀಸಾ ಇಲ್ಲದಿರುವುದರಿಂದ ಯಾವ ಶಾಲೆಯೂ ಆಕೆಗೆ ಪ್ರವೇಶ ನೀಡುತ್ತಿಲ್ಲ ಎಂದು ಆಲಿಯಾ ಸಂಕಷ್ಟ ತೋಡಿಕೊಂಡಿದ್ದಾಳೆ.
|
|
|
|
|
|
|
|