ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಬೂಲ್: ಇಬ್ಬರು ಭಾರತೀಯರ ಸುರಕ್ಷಿತ ಸ್ಥಳಾಂತರ (Kabul | Indians | evacuation | UN)
Feedback Print Bookmark and Share
 
ತಾಲಿಬಾನಿಗಳ ದಾಳಿಗೀಡಾಗಿರುವ ಅತಿಥಿ ಗೃಹದಲ್ಲಿದ್ದ ಇಬ್ಬರು ಭಾರತೀಯರನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂಬುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ವಿಶ್ವಸಂಸ್ಥೆಯ ಸಿಬ್ಬಂದಿಗಳು ತಂಗಿದ್ದ ಅತಿಥಿ ಗೃಹದ ಮೇಲೆ ತಾಲಿಬಾನ್ ಉಗ್ರರು ಬುಧವಾರ ನಸುಕಿನಲ್ಲಿ ನಡೆಸಿದ ದಾಳಿಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದರು. ಮೃತರಲ್ಲಿ ಆರು ಮಂದಿ ವಿಶ್ವಸಂಸ್ಥೆಯ ಸಿಬ್ಬಂದಿಗಳು.

ರಕ್ಷಿಸಲಾಗಿರುವ ಇಬ್ಬರು ಭಾರತೀಯರು ಅಫ್ಘಾನಿಸ್ತಾನದಲ್ಲಿ ಸಲಹಾಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದುದಾಗಿ ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೂಲಗಳು ತಿಳಿಸಿವೆ.

ಕಾಬೂಲ್‌ನಲ್ಲಿರುವ ಎಲ್ಲಾ ಭಾರತೀಯರು ಸುರಕ್ಷಿತರಾಗಿದ್ದಾರೆ ಎಂಬುದಾಗಿ ಭಾರತೀಯ ರಾಯಭಾರ ಕಚೇರಿ ಹೇಳಿದೆ .

ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ, ಹಾಗೂ ಆತ್ಮಾಹುತಿ ಸೊಂಟಪಟ್ಟಿಗಳನ್ನು ಧರಿಸಿದ್ದ ತಾಲಿಬಾನ್ ಉಗ್ರರು ಈ ಅಮಾನವೀಯ ದಾಳಿ ನಡೆಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ