ಇಸ್ಲಾಮಾಬಾದ್, ಬುಧವಾರ, 28 ಅಕ್ಟೋಬರ್ 2009( 09:44 IST )
ತಾಲಿಬಾನ್ ಉಗ್ರರ ವಿರುದ್ಧ ಸಮರ ಸಾರಿರುವ ಪಾಕಿಸ್ತಾನ ಸೇನೆ ಮಂಗಳವಾರ 42 ಉಗ್ರರನ್ನು ಬಲಿ ತೆಗೆದುಕೊಂಡಿದೆ. ವಜೀರಿಸ್ತಾನದಿಂದ ಉಗ್ರರನ್ನು ಹಿಮ್ಮೆಟ್ಟಿಸಲು ಸತತ 11ದಿನಗಳಿಂದ ಹೋರಾಟ ನಡೆಸುತ್ತಿರುವ ಸೇನೆ, ವಜೀರಿಸ್ತಾನದ ಬಹುಭಾಗವನ್ನು ಮತ್ತೆ ತನ್ನ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.