ಪಾಕಿಸ್ತಾನದ ಸಮಸ್ಯೆಗಳಿಂದ ಭಾರತವು ಆನಂದನ್ನು ಪಡೆಯುತ್ತಿದೆ ಮತ್ತು ಅದು ತಾಲಿಬಾನ್‌ಗೆ ಸಹಾಯ ಮಾಡುತ್ತಿದೆ ಎಂಬುದಾಗಿ ಪಾಕಿಸ್ತಾನಿ ಸೆನೆಟರ್ ಮಶಾಹಿದ್ ಹುಸೇನ್ ಮಂಗಳವಾರ ಆರೋಪಿಸಿದ್ದಾರೆ. ಇಂತಹುದೇ ಆರೋಪವನ್ನು ಇಸ್ಲಮಾಬಾದ್ ಮಾಡಿದ್ದು, ಅದನ್ನು ನವದೆಹಲಿ ಬಲವಾಗಿ ತಳ್ಳಿಹಾಕಿದ ಒಂದು ದಿನದ ಬಳಿಕ ಹುಸೇನ್ ಹೇಳಿಕೆ ಹೊರಬಿದ್ದಿದೆ.
"ನಾವು ಭಯೋತ್ಪಾದನೆಯ ಅತಿದೊಡ್ಡ ಬಲಿಪಶುಗಳಾಗಿದ್ದೇವೆ. ಇರಾಕ್‌ನಿಂದ ಇರಾನ್ ಹಾಗೂ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ಭಯೋತ್ಪಾದನಾ ಕಾರಿಡಾರ್ ಹಬ್ಬಿದೆ" ಎಂದು ಹುಸೇನ್ ಹೇಳಿದ್ದಾರೆ. ಅವರು ನವಾಜ್ ಶರೀಫ್ ಸರ್ಕಾರದಲ್ಲಿ ಮಾಹಿತಿ ಸಚಿವರಾಗಿದ್ದರು.
ಭಾರತವು ತಾಲಿಬಾನ್‌ಗೆ ಸಹಾಯ ಹಾಗೂ ಉತ್ತೇಜನ ನೀಡುತ್ತಿದೆ ಮತ್ತು ಪಾಕಿಸ್ತಾನದ ವಿರುದ್ಧ ಭಯೋತ್ಪಾದನೆಯನ್ನು ನಿಲ್ಲಿಸದೇ ಹೋದರೆ, ವಾಘಾ ಗಡಿಯಲ್ಲಿಯ ಈ ಕಾರಿಡಾರ್ ಅಂತ್ಯಗೊಳ್ಳುವುದಿಲ್ಲ ಮತ್ತು ಅದು ಭಾರತದೊಳಕ್ಕೆ ನುಗ್ಗುತ್ತದೆ ಎಂಬುದನ್ನು ಭಾರತ ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.