ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 26/11 ಆರೋಪಿತರ ವಿರುದ್ಧ ಆರೋಪಪಟ್ಟಿ ದಾಖಲಿಸಿ: ಲಾಹೋರ್ ಹೈಕೋರ್ಟ್ (Lashkar-e-Taiba | mumbai attacks | Lahore High Court | Lakhvi)
26/11 ಆರೋಪಿತರ ವಿರುದ್ಧ ಆರೋಪಪಟ್ಟಿ ದಾಖಲಿಸಿ: ಲಾಹೋರ್ ಹೈಕೋರ್ಟ್
ರಾವಲ್ಪಿಂಡಿ, ಬುಧವಾರ, 28 ಅಕ್ಟೋಬರ್ 2009( 13:30 IST )
ಅಡಿಯಾಲಾ ಜೈಲಿನಲ್ಲಿ ಬಂಧಿಯಾಗಿರುವ ಮುಂಬೈ ದಾಳಿಯ ಶಂಕಿತ ಏಳು ಮಂದಿ ವಿರುದ್ಧ ಆರೋಪ ಪಟ್ಟಿ ದಾಖಲಿಸುವಂತೆ ಲಾಹೋರ್ ಹೈಕೋರ್ಟ್ ಪೀಠ ಭಯೋತ್ಪಾದನಾ ನಿಗ್ರಹ ನ್ಯಾಯಾಲಯಕ್ಕೆ(ಎಟಿಸಿ) ಬುಧವಾರ ನಿರ್ದೇಶನ ನೀಡಿದೆ.
ಲಷ್ಕರ್ ಇ ತಯ್ಬಾ ವರಿಷ್ಠ ಜಾಕಿರ್ ರೆಹಮಾನ್ ಲಖ್ವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಉಚ್ಚನ್ಯಾಯಾಲಯದ ವಿಭಾಗೀಯ ಪೀಠ, ಶಂಕಿತ ಏಳು ಮಂದಿಯ ವಿರುದ್ಧ ಆರೋಪ ಪಟ್ಟಿ ದಾಖಲಿಸುವಂತೆ ಎಟಿಎಸ್ ನ್ಯಾಯಾಧೀಶ ಮಲಿಕ್ ಮುಹಮ್ಮದ್ ಅಕ್ರಮ್ ಅವಾನ್ ಅವರಿಗೆ ನಿರ್ದೇಶನ ನೀಡಿರುವುದಾಗಿ ದಿ ಡೈಲಿ ಟೈಮ್ಸ್ ವರದಿ ತಿಳಿಸಿದೆ.
ವಾಣಿಜ್ಯ ನಗರಿ ಮುಂಬೈ ದಾಳಿ ಪ್ರಕರಣದಲ್ಲಿ ತನ್ನ ಹಾಗೂ ಏಳು ಮಂದಿ ವಿರುದ್ಧ ದಾಖಲಾದ ಪ್ರಕರಣದ ವಿಚಾರಣೆಯನ್ನು ಕೈಬಿಡುವಂತೆ ಕೋರಿ ರೆಹಮಾನ್ ಲಖ್ವಿ ಅರ್ಜಿ ಸಲ್ಲಿಸಿದ್ದ.
ರೆಹಮಾನ್ ಲಖ್ವಿ 2008ರ ನವೆಂಬರ್‌ನಲ್ಲಿ ಮುಂಬೈಯಲ್ಲಿ ನಡೆದ ದಾಳಿಯ ಪ್ರಮುಖ ರೂವಾರಿಯಾಗಿದ್ದು, ಪ್ರಕರಣದಲ್ಲಿ ಲಷ್ಕರ್ ಇ ತಯ್ಬಾದ ಜರಾರ್ ಶಾ, ಅಬು ಅಲ್ ಕ್ವಾಮಾ, ಹಮಾದ್ ಅಮಿನ್ ಸಿದ್ದಿಕ್ ಮತ್ತು ಶಾಹಿದ್ ಜಮೀಲ್ ರಿಯಾಜ್ ಸೇರಿದ್ದಾರೆ.