ವಾಷಿಂಗ್ಟನ್, ಗುರುವಾರ, 29 ಅಕ್ಟೋಬರ್ 2009( 10:14 IST )
ಮಹಿಳೆಯರು ಎಷ್ಟೇ ಸಮರ್ಥರಾಗಿದ್ದರೂ ಅವರೆಡೆಗಿನ ನಿರ್ಲಕ್ಷ್ಯವಿನ್ನೂ ದೂರವಾಗಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ. ಮಹಿಳೆಯರ ದುಡಿಮೆ ಶಕ್ತಿ ಹೆಚ್ಚುತ್ತಿದ್ದರೂ ಅವರು ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಅವರ ಮೇಲಿನ ನಿರ್ಲಕ್ಷ್ಯ ಧೋರಣೆ ಇಂದಿಗೂ ಮುಂದುವರೆದಿದೆ ಸಮೀಕ್ಷೆ ಹೇಳಿದೆ.
ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ನಡೆಸಿದ ಈ ಸಮೀಕ್ಷೆಯಿಂದ ವಿಶ್ವದಲ್ಲಿ ಮಹಿಳೆಯರ ಗಳಿಕೆಯು ಚೀನಾ ಮತ್ತು ಭಾರತದ ಒಟ್ಟು ರಾಷ್ಟ್ರೀಯ ಆದಾಯಕ್ಕಿಂತೂ ಹೆಚ್ಚಿದೆ ಎಂಬ ಅಂಶ ಹೊರಬಿದ್ದಿದೆ.
ಇಷ್ಟಾದರೂ ಸಹ ಕಂಪೆನಿಗಳಲ್ಲಿ ಮಹಿಳಾ ಸಿಬ್ಬಂದಿಗಳನ್ನು ಪುರುಷ ಸಹದ್ಯೋಗಿಗಳಿಗಿಂತ ಕೆಳಮಟ್ಟದಲ್ಲಿಯೇ ಕಾಣಲಾಗುತ್ತಿದೆ ಎಂದು ಸಮೀಕ್ಷೆಯಿಂದ ವ್ಯಕ್ತವಾಗಿದೆ.