ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಾರೆನ್ ಹಸ್ತಾಂತರ ಪರಿಶೀಲಿಸ್ತೇವೆ: ಅಮೆರಿಕ ಹೊಸ ರಾಗ! (India | America | Bhopal Gas Tragedy | Warren)
Bookmark and Share Feedback Print
 
ಬೋಪಾಲ ಅನಿಲ ದುರಂತದಲ್ಲಿ ಪ್ರಮುಖ ರೂವಾರಿಯಾಗಿದ್ದ ವಾರೆನ್ ಆಂಡರ್ಸನ್ ಹಸ್ತಾಂತರ ಕುರಿತಂತೆ ಭಾರತ ಹೊಸ ಮನವಿ ಸಲ್ಲಿಸಿದರೆ ಆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳುವ ಮೂಲಕ ಅಮೆರಿಕ ಹೊಸ ರಾಗ ಹಾಡತೊಡಗಿದೆ.

ಬೋಪಾಲ್ ಅನಿಲ ದುರಂತ ಪ್ರಕರಣದ ವಿಚಾರಣೆಯನ್ನು ಸುಮಾರು ಎರಡು ದಶಕಕ್ಕೂ ಹೆಚ್ಚು ಕಾಲ ನಡೆಸಿ, ಕೊನೆಗೂ ಎಂಟು ಮಂದಿಯನ್ನು ದೋಷಿ ಎಂದು ತೀರ್ಪು ನೀಡಿ ಕೇವಲ ಎರಡು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಆದರೆ ಅದರಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿಯ ಸಿಇಒ ಆಗಿದ್ದ ವಾರೆನ್ ಆಂಡರ್ಸನ್ ಮಾತ್ರ ಅನಿಲ ದುರಂತ ನಡೆದು ಬಂಧನವಾದ ದಿನವೇ ಜಾಮೀನು ಪಡೆದು ವಿದೇಶಕ್ಕೆ ಪರಾರಿಯಾಗಿದ್ದ.

ಒಟ್ಟಾರೆ ಪ್ರಕರಣದ ತೀರ್ಪು ಹೊರಬಿದ್ದ ನಂತರ ವಾರೆನ್ ವಿರುದ್ದ ಕ್ರಮ ಕೈಗೊಳ್ಳಬೇಕು, ಆತನನ್ನು ಹಸ್ತಾಂತರಿಸುವಂತೆ ಭಾರತ ಒತ್ತಡ ಹೇರಬೇಕೆಂಬ ಆಕ್ರೋಶ ಎಲ್ಲೆಡೆಯಿಂದ ವ್ಯಕ್ತವಾಗಿತ್ತು.

ಬೋಪಾಲ ಅನಿಲ ದುರಂತ ಪ್ರಕರಣದ ಬಗ್ಗೆ ಕೋರ್ಟ್ ತೀರ್ಪು ನೀಡಿದ ನಂತರ ಅದಕ್ಕೆ ಪ್ರತಿಕ್ರಿಯಿಸಿದ್ದ ಅಮೆರಿಕ, ಭಾರತದ ನ್ಯಾಯಾಲಯ ಪ್ರಕರಣದ ಬಗ್ಗೆ ತೀರ್ಪು ನೀಡಿದೆ. ಅಲ್ಲಿಗೆ ಅದು ಮುಕ್ತಾಯಗೊಂಡಂತಾಗಿದೆ. ಹಾಗಾಗಿ ವಾರೆನ್ ಹಸ್ತಾಂತರವಾಗಲಿ, ಹೊಸ ಆರೋಪಪಟ್ಟಿ ದಾಖಲಿಸಲು ಯಾವುದೇ ರೀತಿಯಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಇದೀಗ ವಾರೆನ್ ಆರೋಪದ ಕುರಿತು ಮಾಧ್ಯಮಗಳಲ್ಲಿ ತನಿಖಾ ವರದಿಗಳು ಪ್ರಕಟವಾಗುವ ಮೂಲಕ ಆತನ ಮುಖವಾಡ ಬಯಲಾಗತೊಡಗುತ್ತಿರುವಂತೆಯೇ, ಅಮೆರಿಕದ ವಕ್ತಾರ ಪಿ.ಜೆ.ಕ್ರೌಲೆ, ವಾರೆನ್ ಹಸ್ತಾಂತರದ ಬಗ್ಗೆ ಭಾರತ ಹೊಸ ಮನವಿ ಸಲ್ಲಿಸಿದರೆ ಆ ಬಗ್ಗೆ ಮರುಪರಿಶೀಲನೆ ಮಾಡುವುದಾಗಿ ಹೇಳಿದೆ. ಆದರೆ ಭಾರತ ಸರ್ಕಾರ ಆ ನಿಟ್ಟಿನಲ್ಲಿ ಮುಂದುವರಿಯಲಿದೆಯೇ ಎಂದು ಕಾದುನೋಡಬೇಕಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ