ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭೂತಾನ್‌: ಇನ್ಮುಂದೆ ಸಿಗರೇಟ್ ಮಾರಾಟ ಮಾಡುವಂತಿಲ್ಲ! (Tobacco Control Bill | cigarettes | Bhutan | ban)
Bookmark and Share Feedback Print
 
ದೇಶದಲ್ಲಿ ಸಿಗರೇಟ್ ಮಾರಾಟ ಮಾಡುವುದಕ್ಕೆ ಮತ್ತು ತಂಬಾಕು ಉತ್ಪನ್ನ ಉತ್ಪಾದನೆಗೆ ಭೂತಾನ್ ಸರ್ಕಾರ ನಿಷೇಧ ಹೇರುವ ಮೂಲಕ ಸಿಗರೇಟ್ ಪ್ರಿಯರಿಗೆ ಕಡಿವಾಣ ಹಾಕಿದೆ.

ಭೂತಾನ್ ನ್ಯಾಷನಲ್ ಅಸೆಂಬ್ಲಿಯಲ್ಲಿ ಜೂನ್ 1ರಂದು ನಡೆದ ಅಧಿವೇಶನದಲ್ಲಿ ತಂಬಾಕು ನಿಯಂತ್ರಣ ಮಸೂದೆ 2009ನ್ನು ಜಾರಿಗೆ ತಂದಿದ್ದು, ಆ ನಿಟ್ಟಿನಲ್ಲಿ ದೇಶದಲ್ಲಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ನಿಯಂತ್ರಣ ಹೇರಲು ಮುಂದಾಗಿದೆ.

2004ರಲ್ಲಿ ಭೂತಾನ್ ನ್ಯಾಷನಲ್ ಅಸೆಂಬ್ಲಿಯಲ್ಲಿ ಸಿಗರೇಟ್ ಮಾರಾಟ ಮತ್ತು ತಂಬಾಕು ಉತ್ಪನ್ನಗಳ ಉತ್ಪಾದನೆ ನಿಷೇಧ ಕಾಯ್ದೆಯನ್ನು ರೂಪಿಸಿ, ಜಾರಿಗೆ ತಂದಿತ್ತು. ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆಯಲು ಮುಂದಾಗಿರುವ ಭೂತಾನ್, ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮೇಲೆ ನಿಷೇಧ ಹೇರಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಇದೀಗ ಎರಡನೇ ಬಾರಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಉತ್ಪಾದನೆ ಮೇಲೆ ನಿಷೇಧ ಹೇರುವ ಮೂಲಕ ಭೂತಾನ್‌ನಲ್ಲಿ ದೊಡ್ಡ ಪ್ರಮಾಣದ ವಿರೋಧ ಎದುರಾಗುವ ಸಂಭವ ಕೂಡ ಇದೆ. ಅಲ್ಲದೇ ದೇಶದಲ್ಲಿ ಸಿಗರೇಟ್ ಕಾಳಸಂತೆಯಲ್ಲಿ ಮಾರಾಟವಾಗುವ ಸಾಧ್ಯತೆ ಹೆಚ್ಚಾಗಲಿದೆ. ಹಾಗಾಗಿ ಕಳೆದ ವರ್ಷ ಸಿಗರೇಟ್ ಮೇಲಿನ ನಿಷೇಧವನ್ನು ಹಿಂತೆಗೆಯಲು ಭೂತಾನ್ ಸರ್ಕಾರ ನಿರ್ಧರಿಸಿತ್ತು. ಆದರೂ ಎಲ್ಲ ವಿರೋಧಗಳ ನಡುವೆ ಸಾಕಷ್ಟು ಚರ್ಚೆ ನಡೆಸಿದ ನಂತರ ತಂಬಾಕು ನಿಯಂತ್ರಣ ಮಸೂದೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಲೈವೋಪೋ ಝಾಂಗ್ಲಿ ಡುಕ್ತಪಾ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ