ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ: 16 ವಿದ್ಯಾರ್ಥಿಗಳನ್ನು ಕೊಂದ ಹಂತಕನಿಗೆ ಮರಣದಂಡನೆ (school Children | China | Beijing | teacher | court,)
Bookmark and Share Feedback Print
 
ಪ್ರಾಥಮಿಕ ಶಾಲೆಯ 16 ವಿದ್ಯಾರ್ಥಿಗಳನ್ನು ಚೂರಿ ಇರಿದು ಕೊಂದ ಮಾನಸಿಕ ಸ್ಥಿಮಿತ ಕಳೆದುಕೊಂಡ 33ರ ಹರೆಯದ ಆರೋಪಿಗೆ ಚೀನಾ ಕೋರ್ಟ್ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.

ಏಪ್ರಿಲ್ 28ರಂದು ಚೆನ್ ಕಾಂಗ್‌ಬಿಂಗ್ ಎಂಬಾತ ಲೈಜ್‌ಹೋ ನಗರದ ಹಾಂಗ್‌ಫು ಪ್ರಾಥಮಿಕ ಶಾಲೆಯ ಆವರಣದಲ್ಲಿ ಏಕಾಏಕಿ ದಾಳಿ ನಡೆಸಿ ಶಿಕ್ಷರು ಮತ್ತು ವಿದ್ಯಾರ್ಥಿಗಳು ಸೇರಿ 16 ಮಂದಿಯನ್ನು ಚೂರಿಯಿಂದ ಇರಿದು ಹತ್ಯೆಗೈದಿದ್ದ. ಸಾವನ್ನಪ್ಪಿದ ಮಕ್ಕಳು ನಾಲ್ಕನೇ ಮತ್ತು ಐದನೆ ತರಗತಿಯ ವಿದ್ಯಾರ್ಥಿಗಳಾಗಿದ್ದರು.

ಈ ಅರೆಹುಚ್ಚನ ದಾಳಿಯಲ್ಲಿ ಹಲವು ಮಕ್ಕಳು ಸಾವನ್ನಪ್ಪಿದ್ದರು. ಘಟನೆ ನಂತರ ಆತನನ್ನು ಬಂಧಿಸಿ, ಆರೋಪಪಟ್ಟಿ ದಾಖಲಿಸಲಾಗಿತ್ತು. ತದನಂತರ ಝಾನ್‌ಜಿಯಾಂಗ್ ನಗರದ ಪೀಪಲ್ಸ್ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಆತ ನಡೆಸಿರುವ ದುಷ್ಕೃತ್ಯಕ್ಕೆ ಮರಣದಂಡನೆ ವಿಧಿಸಿರುವುದಾಗಿ ಕ್ಸಿನ್‌ಹುವಾ ವರದಿ ತಿಳಿಸಿದೆ.

ಆದರೆ ಚಾಂಗ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಾನೆಯೇ ಇಲ್ಲವೋ ಎಂಬ ವಿವರ ತಿಳಿದು ಬಂದಿಲ್ಲ ಎಂದು ವರದಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ