ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪುರುಷ ಸಹೋದ್ಯೋಗಿಗಳಿಗೆ ಸ್ತನ್ಯಪಾನ ಮಾಡಿಸಲು ಫತ್ವಾ! (fatwa | breastfeeding male colleagues | Izzat Atiya | Egypt)
Bookmark and Share Feedback Print
 
ಪುರುಷ ಸಹೋದ್ಯೋಗಿಗಳಿಗೆ ಸ್ತನ್ಯಪಾನ ಮಾಡಿಸುವಂತೆ ಫತ್ವಾ ಹೊರಡಿಸಿದ್ದ ಈಜಿಪ್ಟ್ ಧಾರ್ಮಿಕ ಗುರುವೊಬ್ಬ ತೀವ್ರ ವಿವಾದಕ್ಕೆ ಸಿಲುಕಿದ್ದಾನೆ. ಆದರೆ ತಕ್ಷಣವೇ ಎಚ್ಚೆತ್ತುಕೊಂಡಿರುವ ಇಸ್ಲಾಂ ಧರ್ಮದ ಗಣ್ಯರು ಫತ್ವಾವನ್ನು ಖಂಡಿಸಿ, ಧರ್ಮ ಗುರುವಿನ ನಿಲುವನ್ನು ವಿರೋಧಿಸಿದ್ದಾರೆ.

ಧರ್ಮ ಗುರುವಿನ ಫತ್ವಾದ ಬೆನ್ನಿಗೆ ಈಜಿಪ್ಟ್‌ನ ಅಲ್-ಅಜರ್ ವಿಶ್ವವಿದ್ಯಾಲಯದ ಡಾ. ಇಜ್ಜತ್ ಆತಿಯಾ ಇದನ್ನು ಸಮರ್ಥಿಸಿಕೊಂಡಿದ್ದರು. ಅವರ ಪ್ರಕಾರ ತನ್ನ ಮಹಿಳಾ ಸಹೊದ್ಯೋಗಿಯಿಂದ ಸ್ತನ್ಯಪಾನ ಮಾಡಿಸಿಕೊಂಡ ಪುರುಷ ಇದರಿಂದಾಗಿ ಲೈಂಗಿಕ ಸಂಬಂಧದ ಕುರಿತು ಯೋಚನೆ ಮಾಡುವ ಬದಲು ಮಾತೃತ್ವದ ಕಡೆ ಹೆಚ್ಚು ಒತ್ತು ನೀಡಿ ಕಾರ್ಯೋನ್ಮುಖನಾಗುತ್ತಾನೆ ಎಂದು ಇಜ್ಜತ್ ವಾದಿಸಿದ್ದರು.

ಆದರೆ ಅದೇ ಯುನಿವರ್ಸಿಟಿಯ ಅಧ್ಯಕ್ಷರು ಫತ್ವಾ ಮತ್ತು ಅದನ್ನು ಸಮರ್ಥಿಸಿಕೊಂಡ ಇಜ್ಜತ್ ಹೇಳಿಕೆಯನ್ನು ಖಂಡಿಸಿದ್ದು, ಸಮರ್ಥನೀಯವಲ್ಲ ಎಂದಿದ್ದಾರೆ. ಅದರ ಬೆನ್ನಿಗೆ ಇಜ್ಜತ್ ಕೂಡ ತನ್ನ ನಿಲುವನ್ನು ಬದಲಾಯಿಸಿದ್ದಾರೆ. ಧರ್ಮ ಗುರು ಹೊರಡಿಸಿರುವ ಫತ್ವಾ ಇಸ್ಲಾಂಗೆ ವಿರುದ್ಧವಾಗಿದ್ದು, ಅಪಮಾನ ಎಸಗುತ್ತಿದೆ ಎಂದು ತಿಳಿಸಿದ್ದಾರೆ.

ತಾಯಿಯಲ್ಲದ ಹೊರತಾಗಿಯೂ ಮಹಿಳಾ ಪರಿಚಾರಿಕೆಯೊಬ್ಬಳು ಮಗುವೊಂದಕ್ಕೆ ಮೊಲೆಯೂಡಿಸುವುದು ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ ಮಾತೃತ್ವ ಸಂಬಂಧವನ್ನು ಸ್ಥಾಪಿಸುತ್ತದೆ.

ಮಹಿಳೆಯೊಬ್ಬಳು ತನ್ನ ಪುರುಷ ಸಹೊದ್ಯೋಗಿಗೆ ನೇರವಾಗಿ ಕನಿಷ್ಠ ಐದು ಬಾರಿ ಸ್ತನ್ಯಪಾನ ಮಾಡಿಸಿದರೆ ಇಲ್ಲಿ ಉಭಯತ್ರರು ಕೌಟುಂಬಿಕ ಸಂಬಂಧವನ್ನು ತಮ್ಮೊಳಗೆ ಬೆಳೆಸಿಕೊಳ್ಳುತ್ತಾರೆ. ಇದರಿಂದ ಅವರನ್ನು ಏಕಾಂಗಿಯಾಗಿ ಕೆಲಸ ಮಾಡಲು ಅವಕಾಶ ನೀಡಬಹುದಾಗಿದೆ ಎಂದು ಇಜ್ಜತ್ ಹೇಳಿದ್ದರು.

ವಯಸ್ಕರ ಸ್ತನ್ಯಪಾನವು ವೈಯಕ್ತಿಕ ಮಾತುಕತೆಗಳ ಸಮಸ್ಯೆಗೆ ಪರಿಹಾರ ಸೂಚಿಸುತ್ತದೆ ಮತ್ತು ಇದು ಮದುವೆಯನ್ನು ನಿಷೇಧಿಸುವುದಿಲ್ಲ. ಹೀಗೆ ಸ್ತನ್ಯಪಾನ ಮಾಡಿಸಿಕೊಂಡ ವ್ಯಕ್ತಿಯೆದುರು ಮಹಿಳೆಯು ತನ್ನ ಮುಖ ಪರದೆಯನ್ನು ತೆರೆಯಬಹುದಾಗಿದೆ ಎಂದೂ ಅವರು ಸಮರ್ಥನೆ ಮಾಡಿಕೊಂಡಿದ್ದರು.

ಆದರೆ ಇದಕ್ಕೆ ಈಜಿಪ್ಟ್ ಮತ್ತು ಅರಬ್ ಸಮುದಾಯಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಿಗೆ ಸ್ಪಷ್ಟನೆ ನೀಡಿರುವ ಈಜಿಪ್ಟ್‌ನ ಧಾರ್ಮಿಕ ವ್ಯವಹಾರಗಳ ಸಚಿವ ಮಹಮೂದ್ ಜಾಕಾಕ್, ಮುಂಬರುವ ದಿನಗಳಲ್ಲಿನ ಫತ್ವಾಗಳು ಅರ್ಥಪೂರ್ಣ ಮತ್ತು ಮಾನವೀಯ ಸ್ವರೂಪಗಳನ್ನು ಹೊಂದಿರಬೇಕೆಂದು ಕರೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ