ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾದಿಂದ ಪಾಕಿಸ್ತಾನಕ್ಕೆ ನ್ಯೂಕ್ಲಿಯರ್ ರಿಯಾಕ್ಟರ್! (Washington | Pakistan | nuclear reactors | China | NPT)
Bookmark and Share Feedback Print
 
ಪಾಕಿಸ್ತಾನಕ್ಕೆ ಎರಡು ನ್ಯೂಕ್ಲಿಯರ್ ಪವರ್ ರಿಯಾಕ್ಟರ್‌ನ್ನು ಒದಗಿಸುವ ಇಚ್ಛೆ ಹೊಂದಿರುವುದಾಗಿ ಚೀನಾ ಘೋಷಿಸಿದೆ. ಆದರೆ ಇದು ಅಂತಾರಾಷ್ಟ್ರೀಯ ನಿಯಮಾವಳಿಯ ಉಲ್ಲಂಘನೆಯಾಗಲಿದೆ ಎಂದು ಅಮೆರಿಕದ ಪ್ರತಿಷ್ಠಿತ ನ್ಯೂಕ್ಲಿಯರ್ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನ್ಯೂಕ್ಲಿಯರ್ ಉಪಕರಣ ಮಾರಾಟಕ್ಕೆ ಈಗಾಗಲೇ ಅಂತಾರಾಷ್ಟ್ರೀಯ ನಿಯಮಾವಳಿ ಜಾರಿಯಲ್ಲಿರುವುದು ಚೀನಾಕ್ಕೆ ತಿಳಿದಿದೆ. ಆದರೂ ಕೂಡ ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್(ಎನ್ಎಸ್‌ಜಿ)ನ 46ದೇಶಗಳಲ್ಲಿ ಚೀನಾ ಕೂಡ ಇದೆ. ಆ ನಿಟ್ಟಿನಲ್ಲಿ ಅದು ಪರಮಾಣು ನಿಶ್ಯಸ್ತ್ರೀಕರಣ ಒಪ್ಪಂದ(ಎನ್‌ಪಿಟಿ)ವನ್ನು ಉಲ್ಲಂಘಿಸಲು ಮುಂದಾಗಿದೆ ಎಂದು ಅಮೆರಿಕ ಆರೋಪಿಸಿದೆ.

ಅಂತಾರಾಷ್ಟ್ರೀಯ ಶಿಷ್ಟಾಚಾರವನ್ನು ಉಲ್ಲಂಘಿಸಿ ಪಾಕಿಸ್ತಾನಕ್ಕೆ ನ್ಯೂಕ್ಲಿಯರ್ ಪವರ್ ರಿಯಾಕ್ಟರ್ ನೀಡುವುದಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ಶಂಕಿಸಿದೆ. ಇದು ನಿಜಕ್ಕೂ ದೊಡ್ಡ ಅಪರಾಧ ಎಂದು ನ್ಯೂಕ್ಲಿಯರ್ ಪಾಲಿಸಿ ಪ್ರೋಗ್ರಾಂನ ಹಿರಿಯ ಸಹಾಯಕ ಮಾರ್ಕ್ ಹಿಬ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆ ನಿಟ್ಟಿನಲ್ಲಿ ಈ ಘೋಷಣೆ ಒಂದು ಬಾರಿ ಅಧಿಕೃತವಾಗಿ ಘೋಷಣೆಯಾದಲ್ಲಿ ಚೀನಾ ಮತ್ತು ಪಾಕಿಸ್ತಾನ ನಡುವಿನ ಗಳಸ್ಯ ಕಂಠಸ್ಯ ಮತ್ತೊಮ್ಮೆ ಬಹಿರಂಗವಾಗಲಿದೆ. ಆ ನಂತರ ಅದಕ್ಕೆ ತಕ್ಕ ಹೊಣೆ ಹೊರಬೇಕಾಗುತ್ತದೆ ಎಂದು ಹಿಬ್ಸ್ ಎಚ್ಚರಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ