ಜಗತ್ತಿನಲ್ಲಿಯೇ ಪಾಕ್ ಐದನೆ ಅಸ್ಥಿರತೆಯ ದೇಶವಾಗಿದೆ: ಸಮೀಕ್ಷೆ
ವಾಷಿಂಗ್ಟನ್, ಶುಕ್ರವಾರ, 11 ಜೂನ್ 2010( 16:13 IST )
ಜಗತ್ತಿನಲ್ಲಿ ಪಾಕಿಸ್ತಾನ ಐದನೇ ಅಸ್ಥಿರತೆಯ ದೇಶವಾಗಿದೆ ಎಂದು ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್ ಗ್ಲೋಬಲ್ ಪೀಸ್ ಇಂಡೆಕ್ಸ್ (ಜಿಪಿಐ) ಸಮೀಕ್ಷೆ ತಿಳಿಸಿದೆ.
ರಾಂಕಿಂಗ್ ಪಟ್ಟಿಯಲ್ಲಿ ಇರಾಕ್, ಸೋಮಾಲಿಯಾ, ಅಫ್ಘಾನಿಸ್ತಾನ ಮತ್ತು ಸೂಡಾನ್ ಮಾತ್ರ ಪಾಕಿಸ್ತಾನಕ್ಕಿಂತ ನಂತರದ ಸ್ಥಾನದಲ್ಲಿದೆ. ಒಟ್ಟು 149ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ ಐದನೇ ಸ್ಥಾನ ಗಿಟ್ಟಿಸಿಕೊಂಡಿದೆ ಎಂದು ಜಿಪಿಐ ಸಮೀಕ್ಷೆ ಹೇಳಿದೆ.
ಇನ್ನುಳಿದಂತೆ ದಕ್ಷಿಣ ಏಷ್ಯಾದ ದೇಶಗಳಾದ ನೇಪಾಳ 82ನೇ ಸ್ಥಾನ ಪಡೆದಿದ್ದರೆ, ಭಾರತ 128ನೇ ಸ್ಥಾನದಲ್ಲಿರುವದಾಗಿ ಡಾನ್ ಪತ್ರಿಕೆಯ ವರದಿ ತಿಳಿಸಿದೆ. ಆದರೆ ಪಾಕಿಸ್ತಾನ ಅಭದ್ರತೆಯಲ್ಲಿ ಐದನೇ ಸ್ಥಾನ ಗಿಟ್ಟಿಸಿಕೊಂಡಿದ್ದರೂ ಕೂಡ ನೆರೆಯ ದೇಶಗಳೊಂದಿಗಿನ ಸಂಬಂಧದಲ್ಲಿ ಹೆಚ್ಚಿನ ಬೆಳವಣಿಗೆ ಕಂಡಿರುವುದಾಗಿ ಸಮೀಕ್ಷೆ ವಿವರಿಸಿದೆ.
ಸರ್ಕಾರದ ಮಟ್ಟದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಈ ಹಿಂದಿಗಿಂತಲೂ ತುಂಬಾ ಸುಧಾರಣೆಯಾಗಿದೆ. ಆದರೂ ಪಾಕಿಸ್ತಾನ ಪ್ರಪಂಚದ ಐದನೇ ಅಸ್ಥಿರತೆಯ ದೇಶವಾಗಿದ್ದು, ಮುಂದಿನ ದಿನಗಳಲ್ಲಿ ಅದು ಭಾರತದಲ್ಲಿ ನಡೆಯುವ ಮತ್ತೊಂದು ಚುನಾವಣೆ ಮತ್ತು ಅಲ್ಲಿನ ನೂತನ ಸರ್ಕಾರದ ನಂತರ ಪಾಕ್ ಮತ್ತಷ್ಟು ಸ್ಥಿರವಾಗಲಿದೆ ಎಂದು ಸಮೀಕ್ಷೆ ಹೇಳಿದೆ.