ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಂಡನ್: ಅಜ್ಜಿಯ ಕಣ್ಣು, ನಾಲಗೆ ಕತ್ತರಿಸಿ ತಿಂದ ಮೊಮ್ಮಗ! (Ukranian | London | grandmother | Vlad | police | psychiatric)
Bookmark and Share Feedback Print
 
ಕೊಲ್ಲುವುದು, ಬೆಂಕಿ ಹಚ್ಚಿ ಸಾಯಿಸುವುದು, ಜೀವಂತ ಹೂಳುವ ಅಮಾನವೀಯ ಘಟನೆಯನ್ನು ಕೇಳಿದ್ದೀರಿ. ಆದರೆ ಉಕ್ರೈನ್‌ನ 26ರ ಹರೆಯದ ಯುವಕನೊಬ್ಬ ತನ್ನ ಅಜ್ಜಿಯ ಅಂಗಾಂಗಳನ್ನೇ ಕತ್ತರಿಸಿ ತಿಂದ ಭಯಾನಕ ಘಟನೆ ನಡೆದಿದೆ!

26ರ ಹರೆಯದ ಉಕ್ರೈನ್‌ನ ವ್ಲಾಡ್ ಎಂಬಾತ ಕನ್ನಡಿಯನ್ನು ಒಡೆದು ಗಾಜಿನ ತುಂಡಿನಿಂದ ತನ್ನ ಅಜ್ಜಿಯ ಮುಖವನ್ನು ಯದ್ವಾತದ್ವಾ ಸೀಳಿ ಹಾಕಿದ್ದ. ಅಷ್ಟೇ ಅಲ್ಲ ಆಕೆಯ ಕಣ್ಣನ್ನು ಕಿತ್ತು ತಿಂದು ತೇಗಿ ಬಿಟ್ಟಿದ್ದ.

ಮಾನಸಿಕ ಅಸ್ವಸ್ಥನಂತೆ ವರ್ತಿಸಿದ ಮೊಮ್ಮಗ ಅಜ್ಜಿಯ ದೇಹದ ವಿವಿಧ ಭಾಗಗಳನ್ನು ಕತ್ತರಿಸಿ ತಿಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿರುವುದಾಗಿ ದಿ ಮಿರರ್ ಪತ್ರಿಕೆಯ ವರದಿ ಹೇಳಿದೆ. ಜೀವಂತವಾಗಿಯೇ ಮುಖ, ಕಣ್ಣನ್ನು ಕಿತ್ತು ತಿನ್ನುತ್ತಿರುವ ಸಂದರ್ಭದಲ್ಲಿ ಅಜ್ಜಿ ಪ್ರಾಣ ಉಳಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸಿ ಕಿರುಚಾಡಿದ್ದಳಂತೆ. ಆದರೂ ಪಟ್ಟು ಬಿಡದ ವ್ಲಾಡ್ ಆಕೆಯ ನಾಲಿಗೆಯನ್ನೂ ಕತ್ತರಿಸಿ ಗುಳುಂ ಮಾಡಿಬಿಟ್ಟಿದ್ದ.

ಇಷ್ಟೆಲ್ಲಾ ಆದರೂ ಅಚ್ಚರಿ ಎಂಬಂತೆ ಅಜ್ಜಿ ಜೀವಂತವಾಗಿರುವುದಾಗಿ ವರದಿ ವಿವರಿಸಿದೆ. ವ್ಲಾಡ್ ಧಾರ್ಮಿಕ ಅಂಧಾಭಿಮಾನದಿಂದ ಈ ರೀತಿ ವರ್ತಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆಂದು ವರದಿ ತಿಳಿಸಿದೆ. ಈತನ ಹುಚ್ಚಾಟ ನೋಡಿ ಕೂಡಲೇ ಆತನ ತಂದೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಮಾನಸಿಕ ವೈದ್ಯರಲ್ಲಿ ತಪಾಸಣೆಗೆ ಕರೆದೊಯ್ಯಲಾಯಿತು ಎಂದು ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ