ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ರಿಟನ್: ನಕಲಿ ವಿವಾಹ-ಭಾರತೀಯ ಪ್ರಜೆ ಬಂಧನ (Marriage | Indian | Oxfordshire | Polish national | UK)
Bookmark and Share Feedback Print
 
ಪೋಲ್ಯಾಂಡ್ ಯುವತಿಯ ಜೊತೆ ನಕಲಿ ವಿವಾಹ ಮಾಡಿಕೊಳ್ಳುತ್ತಿದ್ದ ಆರೋಪದ ಮೇಲೆ ನಾಲ್ಕು ಮಂದಿ ಭಾರತೀಯ ಪ್ರಜೆಗಳನ್ನು ಬಂಧಿಸಿರುವುದಾಗಿ ಬ್ರಿಟನ್ ಪೊಲೀಸರು ತಿಳಿಸಿದ್ದಾರೆ.

ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಆಕ್ಸ್‌ಫೋರ್ಡ್ ರಿಜಿಸ್ಟರ್ ಕಚೇರಿಯಲ್ಲಿ ನಡೆಯುತ್ತಿದ್ದ ನಕಲಿ ವಿವಾಹವನ್ನು ಥೇಮ್ಸ್ ವ್ಯಾಲಿ ಇಮಿಗ್ರೇಷನ್ ಕ್ರೈಮ್ ತಂಡ ತಡೆದು ನಿಲ್ಲಿಸಿರುವುದಾಗಿ ಹೇಳಿದೆ. 19ರ ಹರೆಯ ಪೋಲ್ಯಾಂಡ್ ಯುವತಿ ಹಾಗೂ 30ರ ಹರೆಯದ ಭಾರತ ಪ್ರಜೆಯೊಬ್ಬ ನಕಲಿ ವಿವಾಹವಾಗಲು ಮುಂದಾಗಿದ್ದ ಸಂದರ್ಭದಲ್ಲಿ ಸೆರೆ ಹಿಡಿಯಲಾಗಿದೆ.

ಅಲ್ಲದೇ ಈ ಸಂದರ್ಭದಲ್ಲಿ ಇಬ್ಬರು ಸಾಕ್ಷಿಗಳಾದ ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ. ವಲಸಿಗರಾಗಿ ನೆಲೆಸುವ ನಿಟ್ಟಿನಲ್ಲಿ ತಂತ್ರ ಹೂಡಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ನಾಲ್ಕು ಮಂದಿಯನ್ನು ಪೊಲೀಸರು ಮತ್ತು ಇಮಿಗ್ರೇಷನ್ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ವಲಸಿಗರ ಜಾಲ ಹೆಚ್ಚುತ್ತಿದ್ದು, ಆ ಕಾರಣಕ್ಕಾಗಿ ನಕಲಿ ವಿವಾಹವಾಗಿ ವಲಸಿಗರಾಗಿ ನೆಲೆಸಲು ಈ ರೀತಿ ತಂತ್ರ ಉಪಯೋಗಿಸುತ್ತಿದ್ದಾರಂತೆ. ಹಾಗಾಗಿ ರಿಜಿಸ್ಟರ್ ಕಚೇರಿಯಲ್ಲಿ ನಡೆಯುವ ವಿವಾಹಗಳ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸುತ್ತಿರುವುದಾಗಿ ಯುಕೆ ಬಾರ್ಡರ್ ಏಜೆನ್ಸಿಯ ಆಕ್ಸ್‌ಫೋರ್ಡ್‌ಶೈರ್ ಸ್ಥಳೀಯ ಇಮಿಗ್ರೇಶನ್ ತಂಡದ ಮುಖ್ಯಸ್ಥ ಟೆರ್ರಿ ಗಿಬ್ಸ್ ತಿಳಿಸಿದ್ದಾರೆ. ಇದು ನಿಜವಾದ ವಿವಾಹವೇ ಅಥವಾ ನಕಲಿ ಎಂಬ ಬಗ್ಗೆ ಸಾಕಷ್ಟು ನಿಗಾ ವಹಿಸುತ್ತಿರುವುದಾಗಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ