ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರ ಲಾಡೆನ್ ಬ್ರಿಟನ್‌ ಮೊಮ್ಮಗುವಿನ ಅಜ್ಜನಾಗಲಿದ್ದಾನೆ! (Bin Laden | Briton | Omar Bin Laden | London)
Bookmark and Share Feedback Print
 
ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಯ ವರಿಷ್ಠ ಒಸಾಮಾ ಬಿನ್ ಲಾಡೆನ್‌ ಇನ್ನು ಕೆಲವೇ ದಿನಗಳಲ್ಲಿ ಬ್ರಿಟನ್‌ನ ಬಾಡಿಗೆ ತಾಯಿಯೊಬ್ಬಳಿಂದ ಜನಿಸಲಿರುವ ಮೊಮ್ಮಗುವಿನ ಅಜ್ಜನಾಗಲಿದ್ದಾನೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

ಒಸಾಮಾನ ನಾಲ್ಕನೇ ಮಗ 29ರ ಹರೆಯದ ಒಮರ್ ಬಿನ್ ಲಾಡೆನ್‌ನ ಬ್ರಿಟನ್‌ನ ಜೇನ್ ಫೆಲಿಕ್ಸ್ (54)ಳನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ. ಇದೀಗ ದಂಪತಿಗಳು ಮಗುವಿನ ಪೋಷಕರಾಗುವ ಸಂತಸದಲ್ಲಿದ್ದಾರೆ.

ಆದರೆ ಇದು ಒಮರ್ ದಂಪತಿಗಳ ಸ್ವಂತ ಸಂತಾನ ಅಲ್ಲ, ಲೂಯಿಸ್ ಪೋಲ್ಲಾರ್ಡ್ ಎಂಬಾಕೆ ಇವರಿಗೆ ಬಾಡಿಗೆ ತಾಯಿಯಾಗಿದ್ದಾಳೆ. ಒಮರ್‌ನ ವಿರ್ಯಾಣು ಮತ್ತು ಜೇನ್‌ಳ ಅಂಡಾಣುವಿನಿಂದ ಫಲಿತವಾದ ಭ್ರೂಣ ಈಕೆಯ ಗರ್ಭದಲ್ಲಿ ಬೆಳೆದಿದೆ.

ಒಮರ್ ಮತ್ತು ಜೇನ್ ಮದುವೆ 2007ರಲ್ಲಿ ನಡೆದಿತ್ತು. ಒಮರ್ ಹಲವು ಬಾರಿ ಅರ್ಜಿ ಹಾಕಿದ ನಂತರವೂ ಬ್ರಿಟನ್‌ನಲ್ಲಿ ನೆಲೆಸಲು ಅವಕಾಶ ಸಿಕ್ಕಿಲ್ಲವಾಗಿತ್ತು. ಹೀಗಾಗಿ ದಂಪತಿಗಳಿಬ್ಬರು ಕತಾರ್‌ನಲ್ಲಿ ಠಿಕಾಣಿ ಹೂಡಿದ್ದಾರೆ. ಅಂತೂ ಬಾಡಿಗೆ ತಾಯಿಯ ಮೂಲಕ ಒಸಾಮಾ ಬ್ರಿಟನ್ ಮೂಲದ ಮೊಮ್ಮಗುವಿನ ಅಜ್ಜನಾಗಲಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ