ವಿಶ್ವದ ಅತೀ ದೊಡ್ಡ ಚಿನ್ನದ ನಾಣ್ಯ ಎಂದು ಪರಿಗಣಿಸಲ್ಪಟ್ಟಿರುವ 53 ಸೆಂ.ಮೀ. ವ್ಯಾಸದ, 100 ಕಿಲೋ ಗ್ರಾಂ ತೂಕ ಹೊಂದಿರುವ ನಾಣ್ಯವನ್ನು ಶೀಘ್ರವೇ ಹರಾಜು ಹಾಕಲಾಗುವುದು ಎಂದು ಮೂಲವೊಂದು ತಿಳಿಸಿದೆ.
ವಿಯೆನ್ನಾದಲ್ಲಿರುವ ಡೊರೋಥಿಯಂ ಹರಾಜು ಸೆಂಟರ್‌ನಲ್ಲಿ ಜೂನ್ 25ರಂದು ಬೃಹತ್ ಚಿನ್ನದ ನಾಣ್ಯದ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದೆ.
4,55,10,000 ರೂಪಾಯಿ ಮುಖಬೆಲೆಯ ಈ ಚಿನ್ನದ ನಾಣ್ಯ ಈಗಾಗಲೇ ಗಿನ್ನೆಸ್ ಪುಸ್ತಕದಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದೆ. ಇತ್ತೀಚೆಗೆ ಚಿನ್ನದ ದರ ಒಂದೇ ಸಮನೆ ಏರುತ್ತಿರುವ ಹಿನ್ನೆಲೆಯಲ್ಲಿ ಹರಾಜಿನಲ್ಲಿ ಚಿನ್ನದ ನಾಣ್ಯದ ಅತ್ಯಧಿಕ ಬೆಲೆಗೆ ಹರಾಜಾಗುವ ನಿರೀಕ್ಷೆ ಹೊಂದಿರುವುದಾಗಿ ಹರಾಜು ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.