ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ತ.ನಾಡಿನ ತಾಯಿಮಗನಿಗೆ ಎಚ್1ಎನ್1 ಸೋಂಕು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತ.ನಾಡಿನ ತಾಯಿಮಗನಿಗೆ ಎಚ್1ಎನ್1 ಸೋಂಕು
ಅಮೆರಿಕದಿಂದ ಬಂದಿಳಿದ ತಮಿಳ್ನಾಡಿನ ಓರ್ವ ಮಹಿಳೆ ಹಾಗೂ ಆಕೆಯ ಐದರ ಹರೆಯದ ಪುತ್ರನಿಗೆ ಹಂದಿಜ್ವರದ ಸೋಂಕು ತಗುಲಿರುವುದಾಗಿ ಆರೋಗ್ಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ತಮಿಳ್ನಾಡಿನ ಕೊಯಂಬುತ್ತೂರಿನ ಆಸ್ಪತ್ರೆಯೊಂದರಲ್ಲಿ ಈ ತಾಯಿಮಗನನ್ನು ಪ್ರತ್ಯೇಕ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ 34ರ ಹರೆಯದ ತಾಯಿ ಹಾಗೂ ಆಕೆಯ ಪುತ್ರ ಅಮೆರಿಕದಿಂದ ದುಬೈ ಮಾರ್ಗವಾಗಿ ಮೇ 28ರಂದು ಚೆನ್ನೈಗೆ ಬಂದಿಳಿದಿದ್ದರು.

ಈ ಮಗುವಿಗೆ ಅಮೆರಿಕ ತೊರೆಯುವ ಮುನ್ನ ಜ್ವರವಿತ್ತು ಎಂದು ಅಧಿಕಾರಿ ಹೇಳಿದ್ದು ಅವರ ಎಲ್ಲಾ ಸ್ಥಳೀಯ ಸಂಪರ್ಕಗಳನ್ನು ಪತ್ತೆ ಮಾಡಿ ಅವರ ಆರೋಗ್ಯ ಸ್ಥಿತಿಗತಿಯನ್ನು ನಿಕಟವಾಗಿ ವೀಕ್ಷಿಸಲಾಗಿದ್ದು, ಅವರಾರಿಗೂ ಜ್ವರವಿಲ್ಲ ಎಂದು ತಿಳಿಸಿದ್ದಾರೆ. ಇವರೊಂದಿಗೆ ಪ್ರಯಾಣಿಸಿರುವ ಇತರ ಪ್ರಯಾಣಿಕರನ್ನು ಪತ್ತೆ ಮಾಡಿದ್ದು ಅವರ ಆರೋಗ್ಯ ಸ್ಥಿತಿಯನ್ನು ಎಚ್ಚರಿಕೆಯಿಂದ ಗಮನಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಮೊದಲ ಪ್ರಕರಣವು ಮೇ 16ರಂದು ಪತ್ತೆಯಾಗಿತ್ತು. ನ್ಯೂಯಾರ್ಕಿನಿಂದ ಎಮಿರೇಟ್ಸ್ ಏರ್‌ಲೈನ್ಸ್‌ನಲ್ಲಿ ದುಬೈ ಮೂಲಕ ನ್ಯೂಯಾರ್ಕಿನಿಂದ ಹೈದರಾಬಾದಿಗೆ ಪ್ರಯಾಣಿಸಿದ್ದ 23ರ ಹರೆಯದ ಯುವಕನಿಗೆ ಎಚ್1ಎನ್1 ಸೋಂಕು ತಗುಲಿರುವುದು ಪತ್ತೆಯಾಗಿತ್ತು.

21 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸ್ವೈನ್ ಫ್ಲೂ ಹರಡಿರುವ ರಾಷ್ಟ್ರಗಳಿಂದ ಬರುತ್ತಿರುವ ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತಿದ್ದು. ಇದುವರೆಗೆ 1.2 ದಶಲಕ್ಷ ಪ್ರಯಾಣಿಕರ ತಪಾಸಣೆ ನಡೆಸಲಾಗಿದೆ.

ಈ ವಿಮಾನ ನಿಲ್ದಾಣಗಳಲ್ಲಿ 221 ವೈದ್ಯರು ಮತ್ತು 88 ಅರೆವೈದ್ಯಕೀಯ ಸಿಬ್ಬಂದಿಗಳನ್ನು 76 ಕೌಂಟರ್‌ಗಳಲ್ಲಿ ನಿಯೋಜಿಸಲಾಗಿದೆ. ದೆಹಲಿಯಲ್ಲಿ ಬಂದಿಳಿದ ಇಬ್ಬರು ಪ್ರಯಾಣಿಕರನ್ನು ಪ್ರತ್ಯೇಖ ಘಟಕಕ್ಕೆ ಸ್ಥಳಾಂತರಿಸಲಾಗಿದೆ ಮತ್ತು ಐವರು ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದು ವರೆಗೆ 131 ವ್ಯಕ್ತಿಗಳ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಇವರಲ್ಲಿ ಮೂರು ಪ್ರಕರಣಗಳು ಪಾಸಿಟಿವ್ ಫಲಿತಾಂಶ ನೀಡಿದೆ ಎಂದು ಅವರು ಹೇಳಿದರು.

ಈ ರೋಗವು 53 ರಾಷ್ಟ್ರಗಳಲ್ಲಿ ಹಬ್ಬಿದ್ದು, ಇದುವರೆಗೆ 15,510 ಮಂದಿಗೆ ಈ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇವರಲ್ಲಿ 99 ಮಂದಿ ಸಾವನ್ನಪ್ಪಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೈಲುಗಳಿಗೆ ಬೆಂಕಿ ಹಿಂದೆ ಫಿತೂರಿ: ಮಮತಾ ಶಂಕೆ
ವಿದ್ಯಾರ್ಥಿಗಳ ಸುರಕ್ಷತೆಗೆ ಅಡ್ವಾಣಿ ಆಗ್ರಹ
ನಕ್ಸಲರಿಂದ ಜಾರ್ಖಂಡ್ ಬಂದ್
ವರದಕ್ಷಿಣೆಗಾಗಿ ವಧುಗೆ ಬೆಂಕಿ ಹಚ್ಚಿ ಕೊಲ್ಲುವರನ್ನು ಗಲ್ಲಿಗೇರಿಸಬೇಕು:ಸುಪ್ರೀಂ
ಭಾರತೀಯರ ಮೇಲೆ ಹಲ್ಲೆ ನಿಲ್ಲಲಿ: ಬಿಜೆಪಿ
ಪಾಕ್ ಅಣ್ವಸ್ತ್ರ ಪೇರಿಕೆ: ಭಾರತ ಕಳವಳ