ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಾಕ್ ಅಣ್ವಸ್ತ್ರ ಪೇರಿಕೆ: ಭಾರತ ಕಳವಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಅಣ್ವಸ್ತ್ರ ಪೇರಿಕೆ: ಭಾರತ ಕಳವಳ
ಪಾಕಿಸ್ತಾನವು ಅಪಾರ ಪ್ರಮಾಣದ ಅಣ್ವಸ್ತ್ರವನ್ನು ಹೊಂದಿದೆ ಎಂಬ ಅಮೆರಿಕ ವರದಿಗಳಿಂದ ಭಾರತ ತೀವ್ರ ಕಳವಳಗೊಂಡಿದೆ ಮತ್ತು ಅದ ಅಣು ಸಾಮರ್ಥ್ಯಕ್ಕೆ ತಡೆಯೊಡ್ಡಲು ಅಂತಾರಾಷ್ಟ್ರೀಯ ಸಮುದಾಯ ಒತ್ತಡ ಹೇರಬೇರು ಎಂಬ ಇಚ್ಚೆ ವ್ಯಕ್ತಪಡಿಸಿದೆ.

"ಪಾಕಿಸ್ತಾನವು ಕನಿಷ್ಠ ಮಿತಿಯನ್ನು ದಾಟಿರುವುದರಿಂದ ನಾವು ಕಳವಳಗೊಂಡಿದ್ದೇವೆ. ಪಾಕಿಸ್ತಾನವು ಕನಿಷ್ಠ ಮಟ್ಟದ ಅಣ್ವಸ್ತ್ರಗಳನ್ನು ಮಾತ್ರ ಹೊಂದಿದೆ ಎಂಬುದನ್ನು ಖಚಿತ ಪಡಿಸಲು ಅಂತಾರಾಷ್ಟ್ರೀಯ ಸಮುದಾಯವು ಒತ್ತಡ ಹೇರಬಹುದೆಂದು ನಾವು ಭಾವಿಸಿದ್ದೇವೆ" ಎಂಬುದಾಗಿ ರಕ್ಷಣಾ ಖಾತೆಯ ರಾಜ್ಯ ಸಚಿವ ಪಲ್ಲಂ ರಾಜು ಹೇಳಿದ್ದಾರೆ. ಎರಡನೆ ಬಾರಿಗೆ ಅಧಿಕಾರ ಸ್ವೀಕರಿಸಿರುವ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

"ನಮಗೂ ಕನಿಷ್ಠ ಸಾಮರ್ಥ್ಯದ ಮಿತಿ ಇದೆ. ಆದರೆ ಅಣ್ವಸ್ತ್ರಗಳಿಗೆ ಸಂಬಂಧಿಸಿದ ನೀತಿಯಂತೆ ನಾವು ಅದನ್ನು ಪ್ರಥಮವಾಗಿ ಬಳಸುವುದಿಲ್ಲ. ಪ್ರತಿದಾಳಿಯಾಗಿ ಮಾತ್ರ ಬಳಸಲಾಗುವುದು. ಪಾಕಿಸ್ತಾವೂ ನಂತರದ ದಾಳಿಯ ಕುರಿತು ಯೋಚಿಸುತ್ತದೆ ಮತ್ತು ಒಂದು ಜವಾಬ್ದಾರಿಯುತ ರಾಜ್ಯವಾಗಿ ವರ್ತಿಸುತ್ತಿದೆ ಎಂಬುದು ಸಂತಸದ ವಿಚಾರ" ಎಂದು ರಾಜು ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದರು.

ದಕ್ಷಿಣ ಏಷ್ಯಾದಲ್ಲಿ ರಕ್ಷಣಾ ನೆಲೆಗಳಮೂಲಕ ಭಾರತವನ್ನು ಸುತ್ತುವರಿಯುವ ಪಾಕಿಸ್ತಾನ ಮತ್ತು ಚೀನದ ಸಂಬಂಧ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಎರಡು ರಾಷ್ಟ್ರಗಳ ನಡುವಿನ ರಕ್ಷಣಾ ಮತ್ತು ಆರ್ಥಿಕ ಸಹಕಾರದ ಕುರಿತು ಭಾರತಕ್ಕೆ ಅರಿವಿದೆ ಮತ್ತು ಪ್ರಾಂತ್ಯದ ಮೇಲೆ ಇವುಗಳ ಪ್ರಭಾವವನ್ನು ತಗ್ಗಿಸಲು ಕಾರ್ಯಕೈಗೊಳ್ಳುತ್ತಿದೆ ಎಂದು ನುಡಿದರು.

ಪಾಕಿಸ್ತಾನದಲ್ಲಿನ ಗದಾರ್ ಕೋಟೆ ಹಾಗೂ ಶ್ರೀಲಂಕಾ ಮತ್ತು ಮ್ಯಾನ್ಮಾರ್‌ಗಳಲ್ಲಿ ಇಂತಹುದೇ ಕೋಟೆಗಳನ್ನು ಪ್ರಸ್ತಾಪಿಸಿದ ಅವರು ಈ ಬೆದರಿಕೆಗಳನ್ನು ಎದುರಿಸಲು ಭಾರತವು ಸರ್ವಸನ್ನದ್ಧವಾಗಿದೆ ಎಂದು ಹೇಳಿದರಲ್ಲದೆ, ಭಾರತಕ್ಕೆ ಯಾವುದೇ ಬೆದರಿಕೆ ಇಲ್ಲ ಎಂಬಂತಾಗಲು ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೋಕಸಭೆಯಲ್ಲಿ 'ಕನ್ನಡ ಡಿಂಡಿಮ' ಮೊಳಗಿಸಿದ ಸಂಸದರು
'ಹೊಸ ಆರಂಭ'ದ ಕನಸಿನಲ್ಲಿ ಪ್ರಧಾನಿ ಸಿಂಗ್
ಬಿಹಾರ: ರೈಲುನಿಗಡೆ ರದ್ದತಿ ವಿರೋಧಿಸಿ ರೈಲುಗಳಿಗೆ ಬೆಂಕಿ
ಲೋಕಸಭೆ: ಮೊದಲದಿನ, ಮೊದಲ ಶೋ ಆರಂಭ
ತೆರೆ ಮೇಲೆ ಧೂಮಪಾನಕ್ಕೆ ಅಜಾದ್ ಅಡ್ಡಿಇಲ್ಲ
ಸಚಿವೆ ಸ್ಥಾನಕ್ಕೆ ಮೀರಾ ರಾಜೀನಾಮೆ, ಸ್ಪೀಕರ್‌ಗಿರಿ ಹಾದಿ ಸುಗಮ