ಪಶ್ಚಿಮ ಮಿಡ್ನಾಪುರದ ಹಿಂಸಾಚಾರ ಪೀಡಿತ ಲಾಲ್‌ಗರ್‌ದಿಂದ ನಕ್ಸಲರನ್ನು ತೊಡೆದು ಹಾಕಲು ಪಶ್ಚಿಮ ಬಂಗಾಳ ಪೊಲೀಸರು ಬೃಹತ್ ಕಾರ್ಯಾಚರಣೆ ಆರಂಭಿಸಿದ್ದಾರೆ. ರಾಜ್ಯಪೊಲೀಸರಿಗೆ ಕೇಂದ್ರಪೊಲೀಸರು ಸಹಾಯ ನೀಡುತ್ತಿದ್ದಾರೆ. ಇನ್ನಷ್ಟು ಪೊಲೀಸ್ ಪಡೆಗಳು ಗುರುವಾರ ಅಪರಾಹ್ನ ತಲುಪುಲಿದೆ ಎಂದು ನಿರೀಕ್ಷಿಸಲಾಗಿದೆ.
ಪಶ್ಚಿಮ ಬಂಗಾಳಕ್ಕೆ ಪಡೆಗಳನ್ನು ಕಳುಹಿಸುವುದನ್ನು ದೃಢಪಡಿಸಿರುವ ಕೇಂದ್ರವು ಅವಶ್ಯವಿದ್ದರೆ ಇನ್ನಷ್ಟು ಸಹಾಯ ನೀಡುವುದಾಗಿ ಹೇಳಿದೆ. ನಕ್ಸಲ್ ವಿರೋಧಿ ಕೋಬ್ರಾ ಕಮಾಂಡೋ ಪಡೆಗಳಲ್ಲದೆ ಸಿಆರ್‌ಪಿಎಫ್‌ನ ಐದು ಕಂಪೆನಿಗಳು ಈಗಾಗಲೇ ಸ್ಥಳಕ್ಕೆ ತಲುಪಿದೆ. ಲಾಲ್‌ಗರ್‌ನಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ನಕ್ಸಲ್ ನಾಯಕ ಇವರನ್ನು ಪ್ರತಿರೋಧಿಸಲು ನಕ್ಸಲರು ಸಿದ್ಧರಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾನೆ.
ಮಾನವ ಗುರಾಣಿ ಮಾವೋವಾದಿಗಳು ತಮ್ಮ ಮೇಲಿನ ದಾಳಿಯನ್ನ ತಪ್ಪಿಸಿಕೊಳ್ಳಲು ಗ್ರಾಮದ ಮಹಿಳೆಯರು ಮತ್ತು ಮಕ್ಕಳನ್ನು ತಮ್ಮ ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ನಕ್ಸಲರು ಮೂರು ಹಂತದ ಮಾನವ ಗುರಾಣಿಗಳನ್ನು ರೂಪಿಸಿದೆ. ಮಹಿಳೆಯರು ಮಕ್ಕಳನ್ನು ಮುಂಚೂಣಿಯಲ್ಲಿ ಬಿಟ್ಟರೆ ಇವರ ಹಿಂದೆ ಗಂಡಸರು ಮತ್ತು ಸಶಸ್ತ್ರ ನಕ್ಸಲರು ಹಿಂಭಾಗದಲ್ಲಿ ರಕ್ಷಣೆಗೆ ಪಡೆಯಲು ಯೋಜಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದೇವೇಳೆ ರಾಜ್ಯಬಂದ್‌ಗೆ ಸಿಪಿಎಂ ಕರೆ ನೀಡಿದೆ. ಮಾವೋವಾದಿಗಳು ಬುಧವಾರ ಪೂರ್ವ ಮಿಡ್ನಾಪುರದಲ್ಲಿ ಮೂವರು ಸಿಪಿಎಂ ಕಾರ್ಯಕರ್ತರನ್ನು ಕೊಂದು ಹಾಕಿದ್ದಾರೆ. ಇದು ಲಾಲ್‌ಗರ್‌ಗೂ ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸುವ ನಕ್ಸಲರ ಪ್ರಯತ್ನ ಎನ್ನಲಾಗಿದೆ.
ಕಳೆದ ವಾರದ ಹಿಂಸಾಚಾರದಿಂದಾಗಿ ಇದುವರೆಗೆ ಒಟ್ಟು ಏಳುಮಂದಿ ಸಿಪಿಎಂ ಕಾರ್ಯಕರ್ತರು ಹತರಾಗಿದ್ದು ಇತರ ಆರು ಮಂದಿ ಕಾಣೆಯಾಗಿದ್ದಾರೆ.
ಸಂಪೂರ್ಣ ತರಬೇತು ಹೊಂದಿದ 100 ಮಂದಿ ಸೇರಿದಂತೆ ಒಟ್ಟು 500 ಮಂದಿ ಮಾವೋವಾದಿಗಳು ನೆರೆಯ ಜಾರ್ಖಂಡ್‌ನಿಂದ ಲಾಲ್‌ಗರ್‌ಗೆ ನುಸುಳಿದ್ದಾರೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಬುದ್ಧದೇವ್ ಹೇಳಿದ್ದಾರೆ. |