ಭಾರತೀಯ ಸೇನಾ ಪಡೆ ಸುಮಾರು 11,500 ಅಧಿಕಾರಿಗಳ ಕೊರತೆಯನ್ನು ಎದುರಿಸುತ್ತಿದೆ. ಮಿಲಿಟರಿ ಅಕಾಡೆಮಿಗಳಿಗೆ ಕಡಿಮೆ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವುದು ಹಾಗೂ ಪ್ರತಿವರ್ಷ ನಿವೃತ್ತರಾಗುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೇನಾ ಪಡೆ ಅಧಿಕಾರಿಗಳ ಕೊರತೆ ಎದುರಿಸುತ್ತಿದ್ದು, ಇದನ್ನು ತಂಬಲು 20ವರ್ಷಗಳಾದರೂ ಬೇಕಾಗಲಿದೆಯಂತೆ.
ಕಳೆದ ಎರಡು ದಶಕಗಳಿಂದ ತರಬೇತಿಗೆ ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ನಿವೃತ್ತರಾಗುವವರ ಸಂಖ್ಯೆಯ ಹಿನ್ನೆಲೆಯಲ್ಲಿ ಕೊರತೆ ಎದುರಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಡೆಹ್ರಾಡೂನ್ ಮೂಲದ ಭಾರತೀಯ ಸೇನಾ ಅಕಾಡೆಮಿ ಹಾಗೂ ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚಿನ ಅಧಿಕಾರಿಗಳ ನೇಮಕದ ಅಗತ್ಯ ಇದೆ ಎಂದು ಸೇನಾ ಕೇಂದ್ರ ಕಚೇರಿ ಸಲಹೆ ಮಾಡಿದೆ ಎಂದು ಅಧ್ಯಯನ ಮೂಲಗಳು ಹೇಳಿವೆ.
1.2ಮಿಲಿಯನ್ ಸುಭದ್ರವಾದ ಸೇನಾ ಪಡೆ 46ಸಾವಿರ ಅಧಿಕಾರಿಗಳ ನೇಮಕಾತಿಗೆ ಅನುಮತಿ ಪಡೆದಿದೆ. ಪ್ರತಿವರ್ಷ 1,500 ಮಂದಿ ನಿವೃತ್ತರಾಗುತ್ತಿದ್ದಾರೆ. ಪ್ರತಿವರ್ಷ 1,700 ಮಂದಿ ಅಗತ್ಯ ಇದೆ. ಹಾಗಾಗಿ ಸರಿಸುಮಾರು ವರ್ಷಕ್ಕೆ 2ಸಾವಿರ ನೇಮಕಾತಿಯ ಅಗತ್ಯ ಇದೆ ಎಂದು ತಿಳಿಸಿವೆ.