ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೋನಿಯಾ ಕೃಪಾಕಟಾಕ್ಷ: ಚವಾಣ್-ಹೂಡಾಗೆ ಸಿಎಂ ಗದ್ದುಗೆ (Maharashtra | Ashok Chavan | Sonia Gandhi | Bhupinder Singh Hooda)
Feedback Print Bookmark and Share
 
ಮಹಾರಾಷ್ಟ್ರ ಮತ್ತು ಹರಿಯಾಣಗಳಲ್ಲಿ ಈ ಹಿಂದಿನ ಸ್ಥಿತಿಯನ್ನೇ ಮುಂದುವರಿಸಲು ಕಾಂಗ್ರೆಸ್ ಶನಿವಾರ ಮಧ್ಯರಾತ್ರಿ ನಿರ್ಧರಿಸಿದ್ದು, ಹಾಲಿ ಮುಖ್ಯಮಂತ್ರಿಗಳಾದ ಅಶೋಕ್ ಚವಾಣ್ ಹಾಗೂ ಭೂಪೀಂದರ್ ಸಿಂಗ್ ಹೂಡಾ ಅವರಿಗೆ ಸೋನಿಯಾ ಗಾಂಧಿ ಅವರ ಕೃಪಾಕಟಾಕ್ಷ ದೊರೆತಿದೆ.

ಇಲ್ಲಿನ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಹಲವು ನಾಯಕರ ಮತ್ತು ಕೇಂದ್ರ ವೀಕ್ಷಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ಚವಾಣ್ ಮತ್ತು ಭೂಪಿಂದರ್ ಅವರನ್ನು ಕ್ರಮವಾಗಿ ಮಹಾರಾಷ್ಟ್ರ ಮತ್ತು ಹರಿಯಾಣಗಳ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡುವ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.

ಮಧ್ಯರಾತ್ರಿ ಕೊನೆಗೊಂಡ ಸಭೆಯ ನಂತರ ಮಹಾರಾಷ್ಟ್ರದ ವೀಕ್ಷಕ ಎ.ಕೆ.ಆಂಟನಿ ಅವರು ಚವಾಣ್ ಅವರನ್ನು ಸಿಎಲ್‌ಪಿ ನಾಯಕರಾಗಿ ಆಯ್ಕೆ ಮಾಡಿರುವುದನ್ನು ಪ್ರಕಟಿಸಿದರೆ, ಹರಿಯಾಣದ ವೀಕ್ಷಕ ಪೃಥ್ವಿರಾಜ್ ಚವಾಣ್ ಅವರು ಹೂಡಾ ಅವರನ್ನು ಸಿಎಲ್‌ಪಿ ನಾಯಕರಾಗಿ ಆಯ್ಕೆ ಮಾಡಿದ ವಿಷಯವನ್ನು ಪ್ರಕಟಿಸಿದರು.

ಹೂಡಾ ಅವರು ಭಾನುವಾರವೇ ಹರಿಯಾಣದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಇನ್ನೂ ನಡೆಯದಿರುವ ಕಾರಣ ಮಂಗಳವಾರದ ತನಕ ಅಶೋಕ್ ಚವಾಣ್ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇಲ್ಲ. ಅಲ್ಲಿ ಎನ್‌ಸಿಪಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿದೆ.

ಇದಕ್ಕೆ ಮೊದಲು ಶನಿವಾರ ಮುಂಬೈನಲ್ಲಿ ಆಂಟನಿ ಅವರಲ್ಲದೆ, ದಿಗ್ವಿಜಯ್ ಸಿಂಗ್ ಮತ್ತು ಕೆ. ರೆಹಮಾನ್ ಖಾನ್ ಅವರು ಎಲ್ಲಾ 82 ಮಂದಿ ಕಾಂಗ್ರೆಸ್ ಶಾಸಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಅವರ ಅಭಿಪ್ರಾಯ ಸಂಗ್ರಹಿಸಿದ್ದರು. ಆಗ ್ಗಹುಸಂಖ್ಯೆಯ ಶಾಸಕರು ಸಿಎಲ್‌ಪಿ ನಾಯಕನ ಆಯ್ಕೆಯ ಹೊಣೆಯನ್ನು ಸೋನಿಯಾ ಗಾಂಧಿ ಅವರಿಗೆ ವಹಿಸಿದ್ದರು.

ಮಹಾರಾಷ್ಟ್ರದ ಗದ್ದುಗೆ ಮೇಲೆ ಕಣ್ಣಿಟ್ಟಿದ್ದ ವಿಲಾಸರಾವ್ ದೇಶ್‌ಮುಖ್ ಮತ್ತು ನಾರಾಯಣ ರಾಣೆ ಅವರನ್ನು ಸಹ ಸಂಪರ್ಕಿಸಿದ್ದ ಸೋನಿಯಾ ಅವರು ಅಂತಿಮವಾಗಿ ಚವಾಣ್ ಹೆಸರು ಪ್ರಕಟಿಸಿದರು.
ಸಂಬಂಧಿತ ಮಾಹಿತಿ ಹುಡುಕಿ