ಬೋಫೋರ್ಸ್ ಹಗರಣದ ವಿಚಾರಣೆಯಿಂದ ಕ್ವಟ್ರೋಚಿ ಹೆಸರನ್ನು ಕೈಬಿಡುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ತನ್ನ ತೀರ್ಪನ್ನು ಮುಂದೂಡಿದೆ.
ಭಾರತೀಯ ದಂಡ ಸಂಹಿತೆ 321ರ ಅಡಿಯಲ್ಲಿ ಸಲ್ಲಿಸಲಾಗಿರುವ ಸಿಬಿಐನ ಈ ಮನವಿಯ ಸ್ವೀಕಾರದ ಸಾಧ್ಯತೆಯ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶರಾದ ಕಾವೇರಿ ಬವೇಜ, ತೀರ್ಪನ್ನು ನವೆಂಬರ್ 6ಕ್ಕೆ ಮುಂದೂಡಿದರು.
ಕಳೆದ ಅಕ್ಟೋಬರ್ 3ರಂದು ಸಿಬಿಐ, ಎರಡು ದಶಕಗಳ ಹಿಂದಿನ ಬೋಫೋರ್ಸ್ ಲಂಚ ಹಗರಣದ ಪ್ರಮುಖ ಆರೋಪಿ ಕ್ವಟ್ರೋಚಿಯವರ ಹೆಸರನ್ನು ಕೈಬಿಡಲು ಆದೇಶಿಸುವಂತೆ ಕೋರಿ ಮನವಿ ಸಲ್ಲಿಸಿತ್ತು.