ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಮತಾ ಮಂಡಿಸಿದ್ದು ಶ್ವೇತಪತ್ರವಲ್ಲ, ಕರಿಪತ್ರ: ಲಾಲೂ (Lalu Prasad Yadav | Mamata Banerjee | Indian Railway | India)
Bookmark and Share Feedback Print
 
ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ ಶ್ವೇತಪತ್ರವನ್ನು 'ಕರಿಪತ್ರ' ಎಂದು ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಜರೆದಿದ್ದಾರೆ.

2004-05ರಿಂದ 2008-09ರ ಅವಧಿಯಲ್ಲಿ ಲಾಲೂ ರೈಲ್ವೇ ಸಚಿವರಾಗಿದ್ದಾಗ ಇಲಾಖೆ ಲಾಭಗಳಿಸಿದ ವರದಿಗಳೆಲ್ಲವೂ ನಿಜವಲ್ಲ. ಆಗ ತೋರಿಸಲಾಗಿದ್ದ ಲಾಭ ನಿರೀಕ್ಷಿತ ಪ್ರಮಾಣದಲ್ಲಿರಲಿಲ್ಲ ಎಂದು ಮಮತಾ ಇಲಾಖೆಯ ಶ್ವೇತಪತ್ರದಲ್ಲಿ ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಲಾಲೂ, ಮಮತಾ ಮಂಡಿಸಿರುವುದು ಶ್ವೇತಪತ್ರವಲ್ಲ; ಅದು ಕಪ್ಪು ಪತ್ರ ಎಂದಿದ್ದು, ತನ್ನ ಅವಧಿಯಲ್ಲಿ ಸಚಿವಾಲಯವು ದಾಖಲೆ ಪ್ರಮಾಣದ ಲಾಭಗಳಿಸಿರುವ ಅಂಕಿ-ಅಂಶಗಳನ್ನು ನೀಡಿರುವುದರ ಕುರಿತು ಮೆಚ್ಚುಗೆಯಿದೆ ಎಂದು ತಿಳಿಸಿದ್ದಾರೆ.

ಲಾಲೂ ಆಡಳಿತಾವಧಿಯು ಇಲಾಖೆಗೆ ಅತ್ಯುತ್ತಮ ಲಾಭವನ್ನು ನೀಡಿದ್ದು ಹೌದು. ಇದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅವರು ತೋರಿಸಿರುವ ದಾಖಲೆ ಪ್ರಮಾಣದ ಲಾಭ ವರದಿ ಮಾತ್ರ ಸುಳ್ಳು ಎಂದು ಸಚಿವೆ ಮಮತಾ ಸಂಸತ್ತಿನ ಹೊರಗಡೆ ಪತ್ರಕರ್ತರಿಗೆ ತಿಳಿಸಿದ್ದಾರೆ.

ತನ್ನ ಅವಧಿಯು ರೈಲ್ವೇ ಇಲಾಖೆಗೆ ಸ್ವರ್ಣಯುಗವಾಗಿತ್ತು ಎಂದು ತನ್ನ ಮಾತನ್ನು ಪುನರುಚ್ಛರಿಸಿದ ಲಾಲೂ, ಬ್ಯಾನರ್ಜಿಯವರನ್ನು 'ದೀದಿ' ಎಂದೇ ಕರೆದರು. ಅಲ್ಲದೆ ಇಡೀ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡದ ಕುರಿತ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಲು ನಿರಾಕರಿಸಿದರು.

ಕೆಲವು ಅಧಿಕಾರಿಗಳು ಬ್ಯಾನರ್ಜಿಯವರಿಗೆ ತಪ್ಪು ಮಾಹಿತಿಗಳನ್ನು ನೀಡಿರಬಹುದು. ಅವರು ಯಾರು ಎಂಬುದನ್ನು ಆಕೆ ತನಿಖೆ ನಡೆಸಿ ಪತ್ತೆ ಮಾಡಬೇಕಿದೆ. ಈ ಸಂಬಂಧ ಅವರು ಕಾರ್ಯಪ್ರವೃತ್ತರಾಗಬೇಕು ಎನ್ನುವುದು ನನ್ನ ಆಗ್ರಹ ಎಂದು ಲಾಲೂ ಒತ್ತಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ