ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸರ್ಕಾರಿ ನೌಕರಿಯಲ್ಲಿ ಮುಸ್ಲಿಮರಿಗೆ ಶೇ.10 ಮೀಸಲಾತಿ..! (Ranganath Commission | Hindu | Muslim | Scheduled Caste)
Bookmark and Share Feedback Print
 
ಕ್ರಿಶ್ಚಿಯನ್ ಮತ್ತು ಇಸ್ಲಾಮ್ ಧರ್ಮಗಳಿಗೆ ಮತಾಂತರಗೊಂಡಿರುವ ದಲಿತ ಹಿಂದೂಗಳಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ಕಲ್ಪಿಸಬೇಕು, ಸರಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಶೇ.10 ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಶೇ.5ರ ಮೀಸಲಾತಿ ನೀಡಬೇಕು ಎಂದು ಕೇಂದ್ರ ಸರಕಾರ ನೇಮಿಸಿದ್ದ ರಂಗನಾಥ್ ಆಯೋಗ ಶಿಫಾರಸ್ಸು ಮಾಡಿದೆ.

ಸುಪ್ರೀಮ್ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ನೇತೃತ್ವದ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗವು ನೀಡಿರುವ ವರದಿಯನ್ನು ಲೋಕಸಭೆಯಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್ ಮಂಡಿಸಿದ್ದಾರೆ.

ಮುಸ್ಲಿಮರನ್ನೂ ಪ.ಜಾ.ಗೆ ಸೇರಿಸಿ...
ಪರಿಶಿಷ್ಟ ಜಾತಿ ಸ್ಥಾನಮಾನದಿಂದ ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು ಮತ್ತು ಪಾರ್ಸಿಗಳನ್ನು ಕೈ ಬಿಟ್ಟ 1950 ಪರಿಶಿಷ್ಟ ಜಾತಿ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದೂ ಆಯೋಗವು ಸರಕಾರಕ್ಕೆ ಸಲಹೆ ಮಾಡಿದೆ. ಆರಂಭದಲ್ಲಿ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಕೇವಲ ಹಿಂದೂಗಳಿಗೆ ಮಾತ್ರ ಮೀಸಲಿಡಲಾಗಿತ್ತು. ಬಳಿಕ ಬುದ್ಧರು ಮತ್ತು ಸಿಖ್ಖರಿಗೂ ಇದರಲ್ಲಿ ಅವಕಾಶ ನೀಡಲಾಯಿತು.

ಕಡ್ಡಾಯ ಮೀಸಲಾತಿ...
ಅಲ್ಲದೆ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಎಲ್ಲಾ ಉದ್ಯೋಗ ವಿಭಾಗಗಳಲ್ಲೂ ಮುಸ್ಲಿಮರಿಗೆ ಶೇ.10ರ ಮೀಸಲಾತಿ ಕಡ್ಡಾಯ ಮಾಡಬೇಕು. ಇತರ ಅಲ್ಪಸಂಖ್ಯಾತ ಸಮುದಾಯದವರಿಗೆ ಶೇ.5ರಷ್ಟು ಮೀಸಲಾತಿ ನೀಡವುದು ಉತ್ತಮ ಎಂದು ಆಯೋಗ ಹೇಳಿದೆ.

ಬೇರೆಯವರಿಗೆ ನೀಡಬಹುದು..
ಮುಸ್ಲಿಮರಿಗೆಂದು ಮೀಸಲಿಡಲಾದ ಶೇ.10 ಉದ್ಯೋಗ ಮೀಸಲಾತಿಗೆ ಅಭ್ಯರ್ಥಿಗಳ ಕೊರತೆ ಎದುರಾದರೆ ಅದನ್ನು ಇತರ ಅಲ್ಪಸಂಖ್ಯಾತ ಸಮುದಾಯದವರಿಗೆ ನೀಡಬಹುದು. ಆದರೆ ಶಿಫಾರಸ್ಸು ಮಾಡಲಾಗಿರುವ ಒಟ್ಟಾರೆ ಶೇ.15ಕ್ಕೂ ಅಭ್ಯರ್ಥಿಗಳ ಕೊರತೆ ಕಂಡುಬಂದಲ್ಲಿ ಯಾವುದೇ ಸಮುದಾಯದ ಅಭ್ಯರ್ಥಿಗಳಿಗೆ ನೀಡಬಹುದು.

ಮತಾಂತರಗೊಂಡ ದಲಿತರು ದಲಿತರೇ...
ಹಿಂದೂ ಧರ್ಮದ ದಲಿತರು ಕ್ರಿಶ್ಚಿಯನ್ ಅಥವಾ ಮುಸ್ಲಿಮ್ ಧರ್ಮಕ್ಕೆ ಮತಾಂತರಗೊಂಡಿದ್ದರೆ ಅಥವಾ ಯಾವುದೇ ಧರ್ಮದಲ್ಲಿ ದಲಿತರಿದ್ದರೆ ಅವರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬೇಕು ಎಂದು ನ್ಯಾಯಮೂರ್ತಿಗಳು ಶಿಫಾರಸ್ಸು ಮಾಡಿದ್ದಾರೆ.

ಆದರೆ ಇದಕ್ಕೆ ಭಾರೀ ವಿರೋಧ ಆಯೋಗದ ಸದಸ್ಯ ಕಾರ್ಯದರ್ಶಿ ಆಶಾ ದಾಸ್ ಅವರಿಂದಲೇ ಬಂದಿದೆ.

ಕ್ರಿಶ್ಚಿಯನ್ ಅಥವಾ ಮುಸ್ಲಿಮ್ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡುವುದರಲ್ಲಿ ಯಾವುದೇ ನ್ಯಾಯವಿಲ್ಲ ಎಂದು ಅವರು ಶಿಫಾರಸ್ಸಿಗೆ ಆಕ್ಷೇಪವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ....
ಮತಾಂತರ, ಜಿಹಾದ್‌ಗೆ ಮೀಸಲಾತಿ ಪೂರಕ: ಬಿಜೆಪಿ, ವಿಎಚ್‌ಪಿ
ಸಂಬಂಧಿತ ಮಾಹಿತಿ ಹುಡುಕಿ