ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ ಸಮಸ್ಯೆ ಪರಿಹಾರಕ್ಕೆ ದಾರಿಯೇ ಕಾಣುತ್ತಿಲ್ಲ: ಕೇಂದ್ರ (P Chidambaram | Telangana | Andhra Pradesh | Congress)
Bookmark and Share Feedback Print
 
ಆಂಧ್ರಪ್ರದೇಶದಿಂದ ತೆಲಂಗಾಣವನ್ನು ಪ್ರತ್ಯೇಕಿಸಿ ಹೊಸ ರಾಜ್ಯ ಸೃಷ್ಟಿಯ ನಿರ್ಧಾರ ತೆಗೆದುಕೊಂಡ ಬಳಿಕ ಉದ್ಭವಿಸಿರುವ ಸಮಸ್ಯೆಯನ್ನು ಹೇಗೆ ಪರಿಹರಿಸಬೇಕೆಂದು ತಿಳಿಯುತ್ತಿಲ್ಲ ಎಂದು ಕೇಂದ್ರ ಗೃಹಸಚಿವ ಪಿ. ಚಿದಂಬರಂ ಹೇಳಿದ್ದಾರೆ.

ತೆಲಂಗಾಣ ರಾಷ್ಟ್ರೀಯ ಹೋರಾಟ ಸಮಿತಿ ಒತ್ತಡಕ್ಕೆ ಮಣಿದಿದ್ದ ಕೇಂದ್ರ ಸರಕಾರವು ನೂತನ ರಾಜ್ಯ ರಚನೆಗೆ ಅಸ್ತು ಎಂದಿತ್ತು. ಬಳಿಕ ಆಂಧ್ರಪ್ರದೇಶದ ರಾಯಲಸೀಮೆ ಮತ್ತು ಕರಾವಳಿ ಪ್ರಾಂತ್ಯಗಳಲ್ಲಿ ಭಾರೀ ಹಿಂಸಾಚಾರಗಳು, ಪ್ರತಿಭಟನೆಗಳು ನಡೆಯುತ್ತಿವೆ.

ಜತೆಗೆ ಹಲವು ಶಾಸಕ, ಸಂಸದರು ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕೆಲವು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿರುವ ವರದಿಗಳೂ ಬಂದಿವೆ. ವಿದ್ಯಾರ್ಥಿಗಳು ಕೂಡ ಭಾರೀ ಚಳುವಳಿಗಳ ಮೂಲಕ ಕಿಚ್ಚು ಹಬ್ಬಿಸುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಸಂಸತ್ ಅಧಿವೇಶವನವೂ ತೆಲಂಗಾಣಕ್ಕೆ ಆಹುತಿಯಾಗುತ್ತಿದೆ. ಇದೀಗ ಚಿತ್ರನಟ ಚಿರಂಜೀವಿ ನೇತೃತ್ವದ ಪ್ರಜಾರಾಜ್ಯಂ ಪಕ್ಷವೂ ತನ್ನ ತೆಲಂಗಾಣ ಪರ ನಿಲುವನ್ನು ಬದಲಾಯಿಸಿ ಅಖಂಡ ಆಂಧ್ರಕ್ಕಾಗಿ ಹೋರಾಟ ಆರಂಭಿಸಿದೆ. ಪರ-ವಿರೋಧ ಅಲೆಯ ಹಿನ್ನಲೆಯಲ್ಲಿ ಯುಪಿಎ ಸರಕಾರ ನಲುಗುತ್ತಿದೆ. ರಾಜ್ಯ ಮಟ್ಟದಲ್ಲಿ ಪಕ್ಷದೊಳಗೆ ಭಿನ್ನಮತ ತಾಂಡವವಾಡುತ್ತಿದೆ. ಇದನ್ನು ಹೇಗೆ ನಿಭಾಯಿಸಬೇಕೆಂದೇ ಕೇಂದ್ರಕ್ಕೆ ತಿಳಿಯುತ್ತಿಲ್ಲ ಎಂದು ಮೂಲಗಳು ಹೇಳಿವೆ.

ತೆಲಂಗಾಣ ಕುರಿತು ಎದ್ದಿರುವ ಸಮಸ್ಯೆಯನ್ನು ಯಾವಾಗ ಪರಿಹರಿಸಲಾಗುತ್ತದೆ ಎಂದು ಸಚಿವರನ್ನು ಇಂದು ಪತ್ರಕರ್ತರು ಸಂಸತ್ತಿನ ಹೊರಗೆ ಪ್ರಶ್ನಿಸಿದಾಗ ಅವರು, ನನಗೇನೂ ತೋಚುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರತ್ಯೇಕ ರಾಜ್ಯಕ್ಕೆ ಕೇಂದ್ರದ ಪರವಾಗಿ ಮೊದಲು ಹೇಳಿಕೆ ನೀಡಿದ್ದು ಕೂಡ ಚಿದಂಬರಂ. ಆದರೆ ಅವರ ಹೇಳಿಕೆಗೆ ನಂತರ ಸ್ಪಷ್ಟನೆ ನೀಡಿದ್ದ ವಿತ್ತಸಚಿವ ಪ್ರಣಬ್ ಮುಖರ್ಜಿ, ಗೃಹಸಚಿವರ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ; ರಾಜ್ಯ ಸಚನೆ ಎಂದರೆ ಒಂದೆರಡು ದಿನಗಳಲ್ಲಿ ಆಗುವಂತಹುದ್ದಲ್ಲ. ಕನಿಷ್ಠ ಎರಡು ವರ್ಷ ಅಗತ್ಯ ಎಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ