ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಡ್ವಾಣಿ ಪದತ್ಯಾಗ; ಪ್ರತಿಪಕ್ಷ ನೂತನ ನಾಯಕಿಯಾಗಿ ಸುಷ್ಮಾ (BJP | Rajnath Singh | Nitin Gadkari | LK Advani)
Bookmark and Share Feedback Print
 
ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿಯವರು ಲೋಕಸಭೆಯ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸುಷ್ಮಾ ಸ್ವರಾಜ್‌ರನ್ನು ನೂತನ ನಾಯಕಿಯನ್ನಾಗಿ ಆಯ್ಕೆ ನಡೆಸಲಾಗಿದೆ.

ಇಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪಕ್ಷದ ಸಂಸದೀಯ ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನಕ್ಕೆ ಬರಲಾಯಿತು. ಇದರೊಂದಿಗೆ ರಾಜ್ಯಸಭೆ (ಅರುಣ್ ಜೇಟ್ಲಿ) ಮತ್ತು ಲೋಕಸಭೆಯ ವಿರೋಧ ಪಕ್ಷ ನಾಯಕರ ಸ್ಥಾನ ಯುವ ನಾಯಕತ್ವಕ್ಕೆ ಹಸ್ತಾಂತರವಾದಂತಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿದ ನಂತರ ಅಡ್ವಾಣಿಯವರು ಪ್ರತಿಪಕ್ಷದ ನಾಯಕ ಸ್ಥಾನದಿಂದ ಹಿಂದಕ್ಕೆ ಸರಿಯಲು ಯತ್ನಿಸಿದ್ದರಾದರೂ ಈ ಸಂದರ್ಭದಲ್ಲಿ ಪಕ್ಷದ ವಲಯದಿಂದ ಬಂದ ಒತ್ತಡದ ಪರಿಣಾಮ ಉಳಿದುಕೊಂಡಿದ್ದರು. ಆದರೆ ನಂತರದ ದಿನಗಳಲ್ಲಿ ಪಕ್ಷದೊಳಗಿನ ಆಂತರಿಕ ಭಿನ್ನಮತಗಳ ಹಿನ್ನಲೆಯಲ್ಲಿ ನಾಯಕತ್ವ ಬದಲಾವಣೆ ಅಗತ್ಯ ಎಂಬ ಸಂದೇಶವನ್ನು ಸಂಘ ಪರಿವಾರ ಬಿಜೆಪಿಗೆ ರವಾನಿಸಿತ್ತು.

ರಾಜನಾಥ್ ಸಿಂಗ್ ಅವಧಿಯನ್ನು ಮುಂದುವರಿಸುವ ಯಾವುದೇ ಇಚ್ಛೆ ಆರೆಸ್ಸೆಸ್‌ಗೂ ಇರಲಿಲ್ಲ. ಅವರ ವಿರುದ್ಧವೂ ಹಲವಾರು ನಾಯಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ನೂತನ ನಾಯಕನ ಆಯ್ಕೆಯನ್ನು ಈ ಹಿಂದೆಯೇ ಬಿಜೆಪಿ ಖಚಿತಪಡಿಸಿತ್ತು.

ಅಡ್ವಾಣಿ ಪ್ರತಿಪಕ್ಷದ ನಾಯಕ ಜವಾಬ್ದಾರಿಯಿಂದ ಹಿಂದಕ್ಕೆ ಸರಿದರೂ ಪಕ್ಷದಲ್ಲಿನ ಅವರ ಪ್ರಭಾವ ಮುಂದುವರಿಯಲಿದೆ. ಅದಕ್ಕಾಗಿಯೇ ಪಕ್ಷದ ಸಂಸದೀಯ ಸಮಿತಿ ಅಧ್ಯಕ್ಷ ಎಂಬ ಹೊಸ ಹುದ್ದೆಯೊಂದನ್ನು ಸೃಷ್ಟಿಸಿ, ಅದಕ್ಕೆ ಅಡ್ವಾಣಿಯವರನ್ನು ನೇಮಿಸಲಾಗಿದೆ. ಆ ಮೂಲಕ ಲೋಕಸಭೆ ಮತ್ತು ರಾಜ್ಯಸಭೆಗಳ ಅಧ್ಯಕ್ಷರು ಯಾರಾಗಿರಬೇಕು ಎಂಬ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಸಂಸದೀಯ ಸಮಿತಿ ಅಧ್ಯಕ್ಷರಿಗೆ ನೀಡಲಾಗಿದೆ.

ಅದೇ ಹೊತ್ತಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ನಾಳೆ ಪದತ್ಯಾಗ ಮಾಡುವ ಸಾಧ್ಯತೆಗಳಿವೆ. ಅವರ ಸ್ಥಾನಕ್ಕೆ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರನ್ನು ನೇಮಿಸಲಾಗುತ್ತದೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ