ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಸಭೆ ಪ್ರತಿಪಕ್ಷ ನಾಯಕ ಅಡ್ವಾಣಿ ಜಾಗಕ್ಕೆ ಸುಷ್ಮಾ? (BJP | Rajnath Singh | Nitin Gadkari | LK Advani)
Bookmark and Share Feedback Print
 
ರಾಜಧಾನಿಯಲ್ಲಿ ಇಂದು ಪಕ್ಷದ ಸಂಸದೀಯ ಸಭೆ ನಡೆಯಲಿದ್ದು ಈ ಸಂದರ್ಭದಲ್ಲಿ ಲೋಕಸಭೆ ವಿರೋಧಪಕ್ಷದ ನಾಯಕ ಸ್ಥಾನದಿಂದ ಎಲ್.ಕೆ. ಅಡ್ವಾಣಿ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನದಿಂದ ರಾಜನಾಥ್ ಸಿಂಗ್ ಕೆಳಕ್ಕಿಳಿಯುವ ನಿರ್ಧಾರಕ್ಕೆ ಬರಲಿದ್ದಾರೆ. ಈ ಸ್ಥಾನಗಳಿಗೆ ಕ್ರಮವಾಗಿ ಸುಷ್ಮಾ ಸ್ವರಾಜ್ ಮತ್ತು ನಿತಿನ್ ಗಡ್ಕರಿ ಬರುವ ಮೂಲಕ ಬಿಜೆಪಿ ತಲೆಮಾರು ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಪ್ರಸಕ್ತ ಲೋಕಸಭೆಯ ವಿರೋಧಪಕ್ಷದ ಉಪನಾಯಕಿಯಾಗಿರುವ 57ರ ಸುಷ್ಮಾರವರು 83ರ ಅಡ್ವಾಣಿಯವರ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಲೋಕಸಭಾ ಚುನಾವಣೆ ಮುಖಭಂಗ ಹಿನ್ನಲೆಯಲ್ಲಿ ಆರೆಸ್ಸೆಸ್ ಯುವನಾಯಕತ್ವಕ್ಕೆ ಒತ್ತು ಕೊಡಬೇಕು ಎಂದು ಫರ್ಮಾನು ಹೊರಡಿಸಿದ ಕಾರಣ ಈ ಎಲ್ಲಾ ಬದಲಾವಣೆಗಳು ಬಿಜೆಪಿಯಲ್ಲಿ ಕಾಣುತ್ತಿವೆ.

ಇಂದು ಬಿಜೆಪಿ ಸಂಸದೀಯ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಅಡ್ವಾಣಿಯವರ ಕುರಿತ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಅಡ್ವಾಣಿಯವರನ್ನು ಪಕ್ಷದ ಸಂಸದೀಯ ಸಭೆ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಂಬಂಧ ಹೊಸ ಹಾದಿಯೊಂದಕ್ಕೆ ಬಿಜೆಪಿ ನಾಂದಿ ಹಾಡುವ ನಿರೀಕ್ಷೆಗಳಿವೆ. ಇಂದಿನ ಸಭೆಯಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಡಿಸೆಂಬರ್ 21ರಂದು ತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರಾಗಿರುವ ನಿತಿನ್ ಗಡ್ಕರಿಯವರನ್ನು ರಾಜನಾಥ್ ಸ್ಥಾನಕ್ಕೆ ತರುವುದು ಕೂಡ ಬಹುತೇಕ ಖಚಿತ. ಈ ನಿರ್ಧಾರವನ್ನು ಡಿಸೆಂಬರ್ 21ರಂದು ತೆಗೆದುಕೊಳ್ಳುವ ಸಾಧ್ಯತೆಗಳಿದ್ದು, ರಾಜನಾಥ್ ರಾಜಿನಾಮೆ ಇಂದೇ ನೀಡಲಿದ್ದಾರೆ. ಆದರೆ ಜನವರಿಯಲ್ಲಿ ಗಡ್ಕರಿ ಅಧಿಕಾರ ವಹಿಸಿಕೊಳ್ಳಬಹುದು ಎಂದು ಮೂಲಗಳು ಹೇಳಿವೆ.

ಗಡ್ಕರಿ, ಸುಷ್ಮಾ ಮತ್ತು ಜೇಟ್ಲಿ (ರಾಜ್ಯಸಭೆ ವಿರೋಧಪಕ್ಷದ ನಾಯಕ) ಕೈಗೆ ಪಕ್ಷದ ಪ್ರಮುಖ ಹುದ್ದೆಗಳನ್ನು ನೀಡುವ ಮೂಲಕ ಯುವ ನಾಯಕತ್ವದ ಅಲೆ ಬಿಜೆಪಿಯಲ್ಲೂ ಮಹತ್ವದ ಬದಲಾವಣೆ ತರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಇದರೊಂದಿಗೆ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ತೆರೆಮರೆಯಿಂದ ಯತ್ನಿಸುತ್ತಿದ್ದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಮತ್ತು ಅನಂತ್ ಕುಮಾರ್ ಅವರಿಗೆ ನಿರಾಸೆಯಾಗಲಿದೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ