ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಸಭೆಯಲ್ಲಿನ್ನು ಮಹಿಳಾಮಣಿಗಳದ್ದೇ ಕಾರುಬಾರು..! (Sushma Swaraj | Sonia Gandhi | Meira Kumar | Pratibha singh patil)
Bookmark and Share Feedback Print
 
ಸುಷ್ಮಾ ಸ್ವರಾಜ್ ವಿರೋಧ ಪಕ್ಷದ ನಾಯಕಿ ಸ್ಥಾನವನ್ನು ಅಲಂಕರಿಸುವುದರೊಂದಿಗೆ ಸಂಸತ್ತಿನ ಮೂರು ಪ್ರಮುಖ ಹುದ್ದೆಗಳು ಮೊತ್ತ ಮೊದಲ ಬಾರಿಗೆ ಮಹಿಳೆಯರ ವಶವಾದಂತಾಗಿದೆ.

ಲೋಕಸಭೆಯ ಸ್ಪೀಕರ್ ಆಗಿ ಇತ್ತೀಚೆಗಷ್ಟೇ ಮೀರಾ ಕುಮಾರ್ ಆಯ್ಕೆಯಾಗುವ ಮೂಲಕ ಆ ಪದವಿಗೇರಿದ ಮೊದಲ ಮಹಿಳೆ ಎಂಬ ಇತಿಹಾಸ ಬರೆದಿದ್ದರು. ಅತ್ತ ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅಧಿಕಾರದಲ್ಲಿದ್ದಾರೆ.

ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿಯವರು ಲೋಕಸಭೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಸುಷ್ಮಾರಿಗೆ ಬಿಟ್ಟು ಕೊಡುವ ಮೂಲಕ ಸಂಸತ್ತಿನ ಮೂರು ಪ್ರಮುಖ ಹುದ್ದೆಗಳು ಮಹಿಳೆಯರ ಪಾಲಾಯಿತು. ಸುಷ್ಮಾರನ್ನು ನಿನ್ನೆ ಪ್ರತಿಪಕ್ಷದ ನಾಯಕಿಯನ್ನಾಗಿ ಬಿಜೆಪಿ ಆಯ್ಕೆ ನಡೆಸಿತ್ತು.

ಕಾಕತಾಳೀಯವೆಂದರೆ ಸ್ವಾತಂತ್ರ್ಯಾನಂತರ ಭಾರತ ಗರಿಷ್ಠ ಸಂಖ್ಯೆಯ ಮಹಿಳಾ ಸಂಸದರನ್ನು ಹೊಂದಿರುವುದು ಕೂಡ ಈ ಬಾರಿಯೇ. ಪ್ರಸಕ್ತ ಕಾಂಗ್ರೆಸ್ಸಿನ 23 ಹಾಗೂ ಬಿಜೆಪಿಯ 13 ಸಂಸದೆಯರನ್ನು ಹೊಂದಿರುವ ಲೋಕಸಭೆ ಒಟ್ಟು 59 ಲೋಕಸಭಾ ಸದಸ್ಯರ ಬಲದೊಂದಿಗಿದೆ. ತೃಣಮೂಲ ಕಾಂಗ್ರೆಸ್, ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳಿಂದ ತಲಾ ನಾಲ್ಕು ಸದಸ್ಯರು ಆರಿಸಿ ಬಂದಿದ್ದಾರೆ.

1999ರಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕಿಯಾಗುವ ಮೂಲಕ ಈ ಸ್ಥಾನಕ್ಕೇರಿದ ಮೊತ್ತ ಮೊದಲ ಮಹಿಳೆ ಎಂಬ ಖ್ಯಾತಿಗೆ ಸೋನಿಯಾ ಗಾಂಧಿ ಪಾತ್ರರಾಗಿದ್ದರು.

ಆಸಕ್ತಿದಾಯಕ ವಿಚಾರವೆಂದರೆ ಆ ಸಂದರ್ಭದಲ್ಲಿ ಬಳ್ಳಾರಿ ಕ್ಷೇತ್ರದ ಮೂಲಕ ಮೊತ್ತ ಮೊದಲ ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದ ಸೋನಿಯಾ, ಸುಷ್ಮಾರನ್ನು ಸೋಲಿಸಿದ್ದರು ಎನ್ನುವುದು. ಈಗ ಮತ್ತೆ ಲೋಕಸಭೆಯಲ್ಲಿ ಎದುರು-ಬದುರಾಗಲಿದ್ದಾರೆ.

ಇದಕ್ಕಿಂತಲೂ ಮಿಗಿಲಾದದ್ದು ರಾಷ್ಟ್ರದ ಪ್ರಥಮ ಪ್ರಜೆ (ಪ್ರತಿಭಾ ಪಾಟೀಲ್) ಮಹಿಳೆಯಾಗಿರುವುದು.
ಸಂಬಂಧಿತ ಮಾಹಿತಿ ಹುಡುಕಿ