ಗುಜರಾತ್‌ನ ಧೋರಜಿ ನಗರದ ಗೋಪಾಲನಾಥ್‌ಜಿ ಹವೇಲಿಯಲ್ಲಿ ನಡೆದ ದುರ್ಘಟನೆಯಲ್ಲಿ ಒಂಬತ್ತು ಮಂದಿ ಮಹಿಳೆಯರು ದಾರುಣ ಮೃತಪಟ್ಟ ಘಟನೆ ವರದಿಯಾಗಿದೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದದ ವೇಳೆ ಉಂಟಾದ ವಿಪರೀತ ಜನದಟ್ಟಣೆಯಿಂದಾಗಿ ಉಸಿರುಕಟ್ಟಿ ಒಂಬತ್ತು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.